ಜಯಲಲಿತಾ ಪ್ರೀತಿ, ಸಿನಿಮಾ, ಓದು: ಆಸಕ್ತಿಕರ 10 ಸಂಗತಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 6: ಅಧಿಕಾರ, ವರ್ಚಸ್ಸು ಎರಡೂ ಇದ್ದ ನಾಯಕಿ ಜೆ.ಜಯಲಲಿತಾ. ಭಾರತದಲ್ಲಿ ಕೆಲವೇ ರಾಜಕಾರಣಿಗಳಿಗೆ ಮಾತ್ರ ಪ್ರಾಮಾಣಿಕ ಅನುಯಾಯಿಗಳು ಇದ್ದಾರೆ. ಅಂಥವರ ಪೈಕಿ ಜಯಲಲಿತಾ ಕೂಡ ಒಬ್ಬರು. ಕಳೆದ ಎರಡೂವರೆ ತಿಂಗಳಿಂದ ಆಕೆ ಜನರೆದುರು ಕಾಣದೇ ಇದ್ದರು ಸುದ್ದಿಯಲ್ಲಿದ್ದರು.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ನಟಿಯಾಗಿ ವೃತ್ತಿ ಜೀವನ ಆರಂಭಿಸಿ ನಂತರ ರಾಜಕಾರಣಿಯಾದ ಜಯಲಲಿತಾ ವಿರುದ್ಧ ಡಾ.ಸುಬ್ರಮಣಿಯನ್ ಸ್ವಾಮಿ 1996ರಲ್ಲಿ ಅಕ್ರಮ ಆಸ್ತಿ ಸಂಪಾದನೆ ಮೊಕದ್ದಮೆ ದಾಖಲಿಸಿದ್ದರು. ಅದರಲ್ಲಿ ಆಕೆಗೆ ಶಿಕ್ಷೆಯಾಗಿತ್ತು. ಆಕೆ ಬಳಿ 66.65 ಕೋಟಿ ಮೊತ್ತದ ಆಸ್ತಿ ಮಾಡಿಕೊಂಡಿದ್ದರು ಎಂಬ ಆರೋಪ ಇತ್ತು.

ಅದರಲ್ಲಿ ಎರಡು ಸಾವಿರ ಎಕರೆ ಭೂಮಿ, ಮೂವತ್ತು ಕೆ.ಜಿ. ಚಿನ್ನ ಮತ್ತು ಹನ್ನೆರಡು ಸಾವಿರ ಸೀರೆಗಳಿದ್ದವು. ಇವೆಲ್ಲ ಯಾವುದೇ ಸುದ್ದಿ ಮಾಧ್ಯಮ ಕೊಡಬಹುದಾದ ಮಾಹಿತಿ. ಆದರೆ ಇದರ ಹೊರತಾದ ತುಂಬ ಆಸಕ್ತಿಕರವೆನಿಸುವ ಮಾಹಿತಿಗಳು ಇಲ್ಲಿವೆ. ಬೆಳ್ಳಿ ತೆರೆಯನ್ನು ಆಳಿದ, ಅಲ್ಲಲ್ಲ, ಇಡೀ ತಮಿಳುನಾಡನ್ನು ಆಳಿದ ಚೆಲುವೆ, ಅಮ್ಮ ಅನಿಸಿಕೊಂಡ ಜಯಲಲಿತಾ ಬಗೆಗಿನ ಆಸಕ್ತಿಕರ ಸಂಗತಿಗಳು.

ಬಾಲ್ಯ ಕಲಿಕೆ

ಬಾಲ್ಯ ಕಲಿಕೆ

ಇದು ಆಶ್ಚರ್ಯ ಎನಿಸಬಹುದು. ಜಯಲಲಿತಾ ಭರತನಾಟ್ಯ ಕಲಿಯಲು ಆರಂಭಿಸಿದ್ದು ತಮ್ಮ ಮೂರನೇ ವಯಸ್ಸಿನಲ್ಲಿ.

ಅಮ್ಮನ ಒತ್ತಾಯ

ಅಮ್ಮನ ಒತ್ತಾಯ

ತಮಿಳು ಚಿತ್ರಗಳಲ್ಲಿ ಅಭಿನಯಿಸುವಂತೆ ಜಯಲಲಿತಾ ಅವರಿಗೆ ಹದಿನೈದನೇ ವಯಸ್ಸಿನಲ್ಲೇ ಆಕೆ ತಾಯಿ, ನಟಿ ಸಂಧ್ಯಾರಿಂದ (ನಿಜ ಹೆಸರು ವೇದವಲ್ಲಿ) ಒತ್ತಡ.

ವಯಸ್ಕರರಿಗೆ ಮಾತ್ರ

ವಯಸ್ಕರರಿಗೆ ಮಾತ್ರ

ಜಯಲಲಿತಾ ಮೊದಲನೇ ಚಿತ್ರ 'ವಯಸ್ಕರರಿಗೆ ಮಾತ್ರ' ಎಂಬ ಸರ್ಟಿಫಿಕೇಟ್ ಪಡೆದಿತ್ತು. ಆಕೆ ತನ್ನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲಿಕ್ಕೆ ಆಗಲಿಲ್ಲ. ಏಕೆಂದರೆ ಆಕೆ ಇನ್ನೂ ವಯಸ್ಕರಳಾಗಿರಲಿಲ್ಲ!

ತೋಳಿಲ್ಲದ ರವಿಕೆ

ತೋಳಿಲ್ಲದ ರವಿಕೆ

ತಮಿಳು ಚಿತ್ರರಂಗದಲ್ಲೇ ಹಾಡೊಂದರಲ್ಲಿ ತೋಳಿಲ್ಲದ ರವಿಕೆ ತೊಟ್ಟ ಮೊದಲ ನಟಿ ಜಯಲಲಿತಾ.

ಯುವ ವಿಧವೆ ಪಾತ್ರ

ಯುವ ವಿಧವೆ ಪಾತ್ರ

ಆಕೆ ಮೊದಲು ಪಾತ್ರ ವಹಿಸಿದ್ದು 'ಎ' ಸರ್ಟಿಫಿಕೇಟ್ ಸಿನಿಮಾದಲ್ಲಿ. ಅದರಲ್ಲಿ ಆಕೆ ಯುವ ವಿಧವೆ ಪಾತ್ರ ವಹಿಸಿದ್ದರು. ಮೆಟ್ರಿಕ್ಯುಲೇಷನ್ ನಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಹುಡುಗಿ ಅಂಥ ಪಾತ್ರ ನಿರ್ವಹಿಸಿದ್ದರು.

ಶೋಭನ್ ಬಾಬು ಮೇಲೆ ಪ್ರೀತಿ

ಶೋಭನ್ ಬಾಬು ಮೇಲೆ ಪ್ರೀತಿ

ಜಯಲಲಿತಾ ಅವರಿಗೆ ತೆಲುಗು ನಟ ಶೋಭನ್ ಬಾಬು ಮೇಲೆ ಪ್ರೇಮಾಂಕುರವಾಗಿತ್ತು. ಆದರೆ ಅತನಿಗೆ ಅದಾಗಲೇ ಮದುವೆಯಾಗಿತ್ತು. ಆಕೆಯ ಮನೆಯಿಂದ ಬೈನಾಕ್ಯುಲರ್ ನಿಂದ ಶೋಭನ್ ಬಾಬು ಅವರನ್ನು ನೋಡುವಾಗ ಸಿಕ್ಕಿಬಿದ್ದಿದ್ದರು. ಆದರೆ ಆ ಪ್ರೇಮ ಫಲಿಸಲಿಲ್ಲ. ಆಕೆ ಮುಂದೆ ವಿವಾಹವೇ ಆಗಲಿಲ್ಲ.

ಎಂಜಿಆರ್ ಪರಿಚಯ

ಎಂಜಿಆರ್ ಪರಿಚಯ

ಮರುಧೂರ್ ಗೋಪಾಲನ್ ರಾಮಚಂದ್ರನ್ (ಎಂಜಿಆರ್) ತಮಿಳು ನಟ-ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ. ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ಜಯಲಲಿತಾ ಜತೆಗೆ ಹನ್ನೆರಡಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜತೆಯಾಗಿ ಅಭಿನಯಿಸಿದ್ದರು. ಅಷ್ಟೇ ಅಲ್ಲ, ಜಯಲಲಿತಾರನ್ನು ರಾಜಕೀಯಕ್ಕೆ ಪರಿಚಯಿಸಿದವರೇ ಎಂಜಿಆರ್.

ಇಂಗ್ಲಿಷ್ ಪುಸ್ತಕಗಳೆಂದರೆ ಇಷ್ಟ

ಇಂಗ್ಲಿಷ್ ಪುಸ್ತಕಗಳೆಂದರೆ ಇಷ್ಟ

ಜಯಲಲಿತಾ ಅವರಿಗೆ ಇಂಗ್ಲಿಷ್ ಪುಸ್ತಕ ಓದುವುದೆಂದರೆ ಅಚ್ಚುಮೆಚ್ಚು. ಆಕೆ ಪ್ರವಾಸದಲ್ಲಿದ್ದಾಗೆಲ್ಲ ಜೊತೆಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗ್ತಿದ್ದರು.

ಬರಹಗಾರ್ತಿ ಜಯಲಲಿತಾ

ಬರಹಗಾರ್ತಿ ಜಯಲಲಿತಾ

ಜಯಲಲಿತಾ ಉತ್ತಮ ಆಡಳಿತಗಾರ್ತಿಯಷ್ಟೇ ಆಗಿರಲಿಲ್ಲ. ಜತೆಗೆ ತಮಿಳಿನಲ್ಲಿ ಉತ್ತಮ ಬರವಣಿಗೆ ಮಾಡುತ್ತಿದ್ದರು. ತಮಿಳು ವಾರಪತ್ರಿಕೆ 'ತಾಯ್'ಗೆ ನಿರಂತರವಾಗಿ ಬರೆಯುತ್ತಿದ್ದರು.

ಸಿಲ್ವರ್ ಜುಬಿಲಿ, ಸೂಪರ್ ಹಿಟ್ ಗಳು

ಸಿಲ್ವರ್ ಜುಬಿಲಿ, ಸೂಪರ್ ಹಿಟ್ ಗಳು

ನಟಿಯಾಗಿ ಜಯಲಲಿತಾ ದಾಖಲೆ ಗೊತ್ತೆ? ಅಕೆ ನಟಿಸಿದ 85 ಸಿನಿಮಾಗಳಲ್ಲಿ 80 ಹಿಟ್ ಆಗಿದ್ದವು. ಆಕೆ ಹೆಸರಿನಲ್ಲಿ ಗರಿಷ್ಠ ಸಿಲ್ವರ್ ಜುಬಿಲಿ ಹಿಟ್ ಗಳಿವೆ. ಆಕೆ ನಟಿಸಿದ ಇಪ್ಪತ್ತೆಂಟು ತೆಲುಗು ಸಿನಿಮಾ ಕೂಡ ಸಿಲ್ವರ್ ಜುಬಿಲಿ ಹಿಟ್. ಅಷ್ಟೇ ಅಲ್ಲ, ಜಯಲಲಿತಾ ನಟಿಸಿದ ಹಿಂದಿ ಸಿನಿಮಾ 'ಇಜ್ಜತ್' ಕೂಡ ಹಿಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The lady with power and charisma is Jayalalitha Jayaram, who has loyal followers that only a few countable political celebrities in India possess. 10 intersting things about her are here.
Please Wait while comments are loading...