ಪಂಜಾಬ್ ಜೈಲಿನ ಮೇಲೆ ದಾಳಿ, ಖಾಲಿಸ್ತಾನ್ ಮುಖ್ಯಸ್ಥ ಪರಾರಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಚಂಡೀಗಢ, ನವೆಂಬರ್ 27: ಪಂಜಾಬಿನ ನಾಥಾ ಜೈಲಿನಲ್ಲಿ ಭಾರಿ ಸುರಕ್ಷಿತಾ ಲೋಪ ಕಂಡು ಬಂದಿದೆ. 10ಕ್ಕೂ ಅಧಿಕ ಸಶಸ್ತ್ರ ಉಗ್ರರು ಜೈಲಿಗೆ ನುಗ್ಗಿ ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂತೆ ನಾಲ್ವರು ಉಗ್ರರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಹತ್ತು ಮಂದಿ ಶಸ್ತ್ರಧಾರಿಗಳು ನೂರಕ್ಕೂ ಅಧಿಕ ಸುತ್ತು ಗುಂಡು ಹಾರಿಸಿ ಮಿಂಟೂ ಹಾಗೂ ಇನ್ನಿತರರು ಪರಾರಿಯಾಗಲು ಸಹಕಾರಿಯಾಗಿದ್ದಾರೆ. ಹರ್ಮಿಂದರ್ ಜತೆಗೆ ಗುರ್ಪ್ರೀತ್ ಸಿಂಗ್, ವಿಕಿ ಗೋಂಧ್ರಾ, ನಿತಿನ್ ಡಿಯೋಲ್ ಹಾಗೂ ವಿಕ್ರಮ್ ಜೀತ್ ಸಿಂಗ್ ವಿಕಿ ಅವರು ಪರಾರಿಯಾಗಿದ್ದಾರೆ.

10 armed men break into Punjab jail, free KLF chief Mintoo, four others


ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಜೈಲಿನಲ್ಲಿರುವ ಸಿಬ್ಬಂದಿಗಳು ನೆರವಾಗಿರುವ ಶಂಕೆಯೂ ಇದೆ. ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥನನ್ನು ಪರಾರಿ ಮಾಡುವ ಬಗ್ಗೆ ಸುಳಿವು ಇತ್ತು. ಆದರೆ, ಜೈಲಿನಲ್ಲಿ ಭಾರಿ ಭದ್ರತಾ ಲೋಪವಾಗಿರುವುದು ಒಪ್ಪಿಕೊಳ್ಳಬೇಕಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಸಾಕಷ್ಟು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಧಿ ಸಂಗ್ರಹಿಸುತ್ತಿದ್ದ, ಈತನನ್ನು 2014ರಲ್ಲಿ ಬಂಧಿಸಲಾಗಿತ್ತು ಎಂದು ಡಿಜಿಪಿ ಹೆಚ್.ಎಸ್. ದಿಲ್ಲೋನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major security lapse ten armed men stormed into the Natha jail in Punjab and took away with them dreaded terrorist and Khalistan Liberation Force Chief, Harminder Singh Mintoo and four others.
Please Wait while comments are loading...