'ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಹಸುವಿನ ಕೊಬ್ಬಿನಿಂದ ತಯಾರಿಸಿದ 1 ಲಕ್ಷ ತಿರುಪತಿ ಲಡ್ಡುಗಳು'
ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ಕಳುಹಿಸಲಾಗಿತ್ತು. ಅವುಗಳಲ್ಲೂದನದ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎನ್ನುವ ಗಂಭೀರ ಆರೋಪವನ್ನು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹೇಳಿದ್ದು. ಇದು ಭಾರೀ ವಿವಾದ ಹಾಗೂ ಆಘಾತಕ್ಕೆ ಕಾರಣವಾಗಿದೆ. ರಾಮಮಂದಿರ ಶತಮಾನಗಳ ಕನಸು. ಈ ಕನಸನ್ನು ಹಿಂದೂಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದೇವೆ.
ಆದರೆ, ಈ ಹಿಂದಿನ ಸರ್ಕಾರ ದೇಶದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದು ಹಾಗೂ ಕೋಟ್ಯಾಂತರ ಭಕ್ತಾಧಿಗಳು ಪೂಜೆ ಮಾಡುವ ಶ್ರೇಷ್ಠ ದೇವಸ್ಥಾನಗಳಲ್ಲಿ ಒಂದು ಎಂದು ಖ್ಯಾತಿ ಗಳಿಸಿರುವ ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ಹಂದಿ ಕೊಬ್ಬಿನ ಅಂಶವನ್ನು ಬಳಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಹ ಹೇಳಿದ್ದು, ಈ ವಿಚಾರ ಇದೀಗ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

ಅಯೋಧ್ಯಗೂ ತಲುಪಿತ್ತೇ ಅಪವಿತ್ರ ಲಡ್ಡು ?
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎನ್ನುವುದು ಹಿಂದೂಗಳ ಶತಮಾನದ ಕನಸು. ಈ ಕನಸನ್ನು ಈಡೇರಿಸಿಕೊಳ್ಳಲು ಹಿಂದೂಗಳ ಶತಮಾನಗಳಿಂದ ಹೋರಾಟವನ್ನೇ ಮಾಡಿದ್ದಾರೆ. ಆದರೆ, ಈಗ ಕೇಳಿ ಬರುತ್ತಿರುವ ಆರೋಪ ಜನರಲ್ಲಿ ಹಾಗೂ ರಾಮ ಭಕ್ತರಲ್ಲೂ ಆತಂಕ ಮೂಡಿಸಿದೆ. ಈ ಬಗ್ಗೆ ಮಾತನಾಡಿರುವ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಾವು ಶತಮಾನಗಳಿಂದ ಹೋರಾಟ ಮಾಡುತ್ತಿದ್ದೇವೆ.
ಆದರೆ, ಅಯೋಧ್ಯೆಯ ರಾಮಮಂದಿರಕ್ಕೂ ಇವರು (ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ) 1 ಲಕ್ಷ ಲಡ್ಡುಗಳನ್ನು ಕಳುಹಿಸಿದ್ದು, ಅದಕ್ಕೂ ದನದ, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯಿಂದ ಮಿಶ್ರಣವಾಗಿರುವ ತುಪ್ಪವನ್ನು ಬಳಸಿಯೇ ತಯಾರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಅಯೋಧ್ಯೆಯ ರಾಮಮಂದಿರಕ್ಕಾಗಿ ಶತ ಶತಮಾನಗಳಿಂದ ಕಾಯುತ್ತಿದ್ದೇವು. ಅದಕ್ಕೂ ಇವರು ಈ ರೀತಿಯ ಲಡ್ಡುಗಳನ್ನು ಕಳುಹಿಸಿದ್ದಾರೆ. ಈ ದೇಶವೇ ಈ ವಿಷಯವನ್ನು ಕೇಳಿ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೇ ಬಹಿರಂಗ ವೇದಿಕೆಯಲ್ಲಿ ಈ ಹೇಳಿಕೆಯನ್ನು ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದದಲ್ಲಿ ತುಪ್ಪದೊಂದಿಗೆ ದನದ, ಹಂದಿಯ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಎನ್ನುವ ವಿಚಾರ ತೀವ್ರ ಆಘಾತಕ್ಕೆ ಕಾರಣವಾದ ಬೆನ್ನಲ್ಲೇ ಶತಮಾನಗಳ ಕನಸಿನ ನಂತರ ನಡೆದ ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆಗೂ ಇದೇ ಲಡ್ಡುಗಳನ್ನು ಕಳುಹಿಸಿಕೊಡಲಾಗಿದೆ ಎನ್ನುವ ವಿಷಯ ಬಹಿರಂಗವಾಗಿದೆ.
ರಾಮನಿಗಾಗಿ ಶಬರಿ ಕಾಯುತ್ತಿದ್ದಂತೆಯೇ ದೇಶದ ಕೋಟ್ಯಾಂತರ ಭಕ್ತಧಿಗಳು ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಕಾಯುತ್ತಿದ್ದರು. ಅಷ್ಟೊಂದು ಪವಿತ್ರ ಹಾಗೂ ಶ್ರೇಷ್ಠ ಹಿಂದೂ ಕಾರ್ಯಕ್ರಮಕ್ಕೆ ಬಳಸಲಾದ ಲಡ್ಡುವಿನಲ್ಲಿ ಗೋವಿನ ಕೊಬ್ಬಿನ ಅಂಶ, ಹಂದಿ ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎನ್ನುವ ವಿಚಾರಗಳು ತೀವ್ರ ಗಂಭೀರ ವಿಚಾರವಾಗಿದೆ. ಹಿಂದೂಗಳ ಭಕ್ತಿ, ಆರಾಧನೆಯೊಂದಿಗೆ ಆಟವಾಡಲಾಗಿದೆ ಎಂದು ಭಕ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ತಿರುಪತಿಯ ಲಡ್ಡಿನ ವಿಚಾರದ ಆಘಾತದಿಂದಲೇ ಜನ ಇನ್ನೂ ಹೊರಗೆ ಬಂದಿಲ್ಲ. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲೂ ಇದೇ ಪ್ರಸಾದವನ್ನು ಬಳಸಲಾಗಿದೆ ಎನ್ನುವ ವಿಚಾರವನ್ನು ಆಂಧ್ರದ ಹಿಂದಿನ ಸರ್ಕಾರವೇ ಬಹಿರಂಗವಾಗಿ ಹೇಳುತ್ತಿರುವುದು ಜನ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications