ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೇಶದ 1,253 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ನಿರ್ಧಾರ

|
Google Oneindia Kannada News

ನವದೆಹಲಿ, ಆ.05: ದೇಶಾದ್ಯಂತ 1,253 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಗುರುತಿಸಲಾಗಿದ್ದು, ಈ ಪೈಕಿ 1,215 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಉಳಿದ ರೈಲ್ವೆ ನಿಲ್ದಾಣಗಳನ್ನು 2022-23 ರೊಳಗೆ ಆದರ್ಶ್ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ನರಹರಿ ಅಮೀನ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.

"ದೇಶದ ರೈಲು ನಿಲ್ದಾಣಗಳ ಸುಂದರಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯೇ" ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್, "ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆ ನಿಲ್ದಾಣಗಳ ಉನ್ನತೀಕರಣ ಮತ್ತು ಸುಂದರಗೊಳಿಸುವುದಕ್ಕಾಗಿ ಹಲವು ಮಾದರಿಗಳು ಮತ್ತು ಆದರ್ಶ ನಿಲ್ದಾಣ ಯೋಜನೆಗಳಂತಹ ವಿವಿಧ ಯೋಜನೆಗಳನ್ನು ರೂಪಿಸಿದೆ" ಎಂದರು.

1,253 Railway stations across the country had been identified for development

ಪ್ರಸ್ತುತ, ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ಅಗತ್ಯಕ್ಕಾಗಿ 'ಆದರ್ಶ್' ನಿಲ್ದಾಣ ಯೋಜನೆಯಡಿ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಮತ್ತು ಸುಂದರಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

"ಆದರ್ಶ್' ಸ್ಟೇಷನ್ ಯೋಜನೆಯಡಿಯಲ್ಲಿ, 1,253 ನಿಲ್ದಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದೆ, ಅವುಗಳಲ್ಲಿ ಇದುವರೆಗೆ 1,215 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಉಳಿದ ನಿಲ್ದಾಣಗಳನ್ನು 2022-23 ರ ಆರ್ಥಿಕ ವರ್ಷದೊಳಗೆ ಆದರ್ಶ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ" ಎಂದು ಮಾಹಿತಿ ನೀಡಿದರು.

ಇದಲ್ಲದೆ, 'ರೈಲ್ವೆ ನಿಲ್ದಾಣಗಳ ಪ್ರಮುಖ ಉನ್ನತೀಕರಣಕ್ಕಾಗಿ ಹೊಸ ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 52 ನಿಲ್ದಾಣಗಳನ್ನು ಗುರುತಿಸಲಾಗಿದೆ.

1,253 Railway stations across the country had been identified for development

2021-22ರ ಹಣಕಾಸು ವರ್ಷದಲ್ಲಿ ಯೋಜನಾ ಹೆಡ್-53ರ ಅಡಿಯಲ್ಲಿ 2,344.55 ಕೋಟಿ ಮತ್ತು ಪ್ರಸಕ್ತ ಹಣಕಾಸು ವರ್ಷ 2022-23ರಲ್ಲಿ 2,700 ಕೋಟಿ ಮೊತ್ತವನ್ನು ಯೋಜನಾ ಹೆಡ್-53 ಅಡಿಯಲ್ಲಿ ವಿನಿಯೋಗಿಸಲಾಗಿದೆ'' ಎಂದು ಹೇಳಿದರು.

ಈ ಯೋಜನೆಯಡಿಯಲ್ಲಿ ಗುಜರಾತ್‌ನಲ್ಲಿರುವ ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ, ಗುಜರಾತ್ ರಾಜ್ಯದಲ್ಲಿ ಆದರ್ಶ್ ನಿಲ್ದಾಣ ಯೋಜನೆಯಡಿ ಗುರುತಿಸಲಾದ 32 ನಿಲ್ದಾಣಗಳಿವೆ. "ಎಲ್ಲಾ 32 ನಿಲ್ದಾಣಗಳನ್ನು ಆದರ್ಶ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ' ಎಂದರು.

English summary
1,253 Railway stations across the country had been identified for development says Union Railways Minister Ashwini Vaishnaw. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X