Get Updates
Get notified of breaking news, exclusive insights, and must-see stories!

Cyber Fraud: 1,000 ಸಾವಿರ ಕೋಟಿ ಸೈಬರ್ ವಂಚನೆ: ಫೀಲ್ಡ್‌ಗೆ ಇಳಿದ ಇಡಿ, ಹೇಗಿದೆ ಕಾರ್ಯಾಚರಣೆ ?

ದೇಶದಾದ್ಯಂತ ಸೈಬರ್ ಫ್ರಾಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತಮಿಳುನಾಡಿನಲ್ಲೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ತಮಿಳುನಾಡಿನಲ್ಲಿ ಬರೋಬ್ಬರಿ 1,000 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಸೈಬರ್ ವಂಚನೆ ಪ್ರಕರಣಗಳು ನಡೆದಿದ್ದು. ಜಾರಿ ನಿರ್ದೇಶನಾಲಯವು ತನಿಖೆಗೆ ಮುಂದಾಗಿದೆ. ದಕ್ಷಿಣ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್‌ ಫ್ರಾಡ್‌ ಹೆಚ್ಚಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಸೈಬರ್‌ ಫ್ರಾಡ್‌ ಹೆಚ್ಚಾಗುವುದಕ್ಕೆ ಉತ್ತರ ಭಾರತದ ಕೆಲವು ಸೈಬರ್‌ ಫ್ರಾಡ್‌ಗಳು ಮುಖ್ಯ ಕಾರಣ. ಹೀಗಾಗಿ, ತಮಿಳುನಾಡಿನಲ್ಲಿ ನಡೆಯುತ್ತಿರುವ ಬೃಹತ್‌ ಮೊತ್ತದ ಸೈಬರ್‌ ಫ್ರಾಡ್‌ ವಂಚನೆ ಭಾರೀ ಚರ್ಚೆಗೆ ಕಾರಣವಾಗಿದೆ. ಇಡಿ ಅಧಿಕಾರಿಗಳು ಗುರುವಾರ ಪಶ್ಚಿಮ ಬಂಗಾಳದ ಪ್ರಮುಖ ಎಂಟು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

1 000 cr cyber fraud in Tamil Nadu ED Conducts Massive Operation in West Bengal

ಹೌದು ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಪ್ರಕರಣ ಹೆಚ್ಚಾಗ್ತಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲ ಕರ್ನಾಟಕ ಹಾಗೂ ಕೇರಳದಲ್ಲೂ ಹೆಚ್ಚಾಗಿದೆ. ಕೇರಳದ ಸೈಬರ್ ಪೊಲೀಸರಿಗೆ ಸೈಬರ್ ವಂಚಕ ಕರೆ ಮಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸೈಬರ್ ಪೊಲೀಸರಿಗೆ ಕಾಲ್‌ ಮಾಡಿದ್ದ ಸೈಬರ್ ವಂಚಕ ಡಿಜಿಟಲ್‌ ಅರೆಸ್ಟ್‌ ಮಾಡುವುದಕ್ಕೆ ಮುಂದಾಗಿದ್ದ ಇದಕ್ಕೆ ಕೇರಳ ಸೈಬರ್ ಪೊಲೀಸರು ಬುದ್ಧಿ ಕಲಿಸಿದ್ದರು.

ಇದೀಗ ತಮಿಳುನಾಡಿನಲ್ಲಿ ಸೈಬರ್ ವಂಚನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಪಾರ್ಕ್ ಸ್ಟ್ರೀಟ್, ಸಾಲ್ಟ್ ಲೇಕ್ ಮತ್ತು ಬಾಗುವಿಹಾಟಿ ಸೇರಿದಂತೆ ಐದು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ. ಅಲ್ಲದೆ ಕೋಲ್ಕತ್ತಾದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

1 000 cr cyber fraud in Tamil Nadu ED Conducts Massive Operation in West Bengal

ಒಬ್ಬ ಸೈಬರ್‌ ಫ್ರಾಡ್‌ನ ಬಂಧನ: ಇನ್ನು ತಮಿಳುನಾಡಿನಲ್ಲಿ 1,000 ಸಾವಿರ ಕೋಟಿಯ ಸೈಬರ್‌ ವಂಚನೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸಾಲ್ಟ್ ಲೇಕ್ ಪ್ರದೇಶದಲ್ಲಿ ದಾಳಿ ನಡೆಸುವಾಗ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಇಲ್ಲಿನ ಬಾಗುವಿಹಾಟಿಯಲ್ಲಿಯೂ ಕಾರ್ಯಾಚರಣೆ ಮುಂದುವರಿದಿದೆ. ಭಾರತದ ಈಶಾನ್ಯ ಭಾಗದ ಕೆಲವು ಭಾಗಗಳಲ್ಲಿ ಸೈಬರ್ ವಂಚಕರು ನೆಲೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿದಿನ 60 ಕೋಟಿ ನಷ್ಟ: ಭಾರತದಲ್ಲಿ ಪ್ರತಿದಿನ ಸೈಬರ್‌ ಫ್ರಾಡ್‌ ನಡೆಯುತ್ತಿದೆ. ಈ ರೀತಿ ನಡೆಯುವ ಸೈಬರ್ ಫ್ರಾಡ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಕೋಟಿ ರೂಪಾಯಿ ವಂಚನೆ ನಡೆಯುತ್ತಿದೆ. ಈ ರೀತಿಯ ಸೈಬರ್ ವಂಚನೆ ಕೇವಲ ವಾಟ್ಸಪ್‌, ಇನ್ಸಟಾಗ್ರಾಮ್‌ ಹಾಗೂ ಟೆಲಿಗ್ರಾಮ್‌ ಸೇರಿದಂತೆ ಸೋಷಿಯಲ್‌ ಮೀಡಿಯಾಗಳ ಮೂಲಕವೇ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಲಿಂಕ್ಸ್‌ಗಳ ಮೂಲಕ ಸೈಬರ್‌ ಫ್ರಾಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹೊಸ ವರ್ಷದ ಸಂದರ್ಭದಲ್ಲೂ ಹೊಸ ವರ್ಷದ ಶುಭಾಶಯದ ನೆಪದಲ್ಲಿ ಸೈಬರ್ ಫ್ರಾಡ್ ಪ್ರಕರಣಗಳು ಹೆಚ್ಚಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+