Indi Constituency: ಕಾಂಗ್ರೆಸ್- ಜೆಡಿಎಸ್- ಬಿಜೆಪಿ ನಡುವೆ ಪೈಪೋಟಿ
ವಿಜಯಪುರ, ಮಾರ್ಚ್ 24: ಇಂಡಿ ಅಸೆಂಬ್ಲಿ ಕ್ಷೇತ್ರವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ವಿಜಯಪುರ ಜಿಲ್ಲೆಯ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರವು 1951 ರಲ್ಲೇ ಅಸ್ತಿತ್ವಕ್ಕೆ ಬಂದಿದೆ. ಆವಾಗಿನಿಂದಲೂ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.
ಇಂಡಿ ವಿಧಾನಸಭಾ ಕ್ಷೇತ್ರವು ವಿಜಯಪುರ ಜಿಲ್ಲೆಯಲ್ಲಿದೆ ಮತ್ತು ಕರ್ನಾಟಕದ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಬರುತ್ತದೆ. ಕ್ಷೇತ್ರದಲ್ಲಿ 2,28,742 ಮತದಾರರಿದ್ದಾರೆ. 1,18,626 ಪುರುಷರು ಮತ್ತು 1,09,794 ಮಹಿಳಾ ಮತದಾರರಿದ್ದಾರೆ. ಜನಗಣತಿಯ ಪ್ರಕಾರ, ಇಂಡಿ ತಾಲೂಕಿನ ಒಟ್ಟು ಜನಸಂಖ್ಯೆ 4,21,169, ಅದರಲ್ಲಿ 2,17,663 ಪುರುಷರು ಮತ್ತು 2,03,506 ಮಹಿಳೆಯರಿದ್ದಾರೆ.

ಈ ಕ್ಷೇತ್ರದಿಂದ ಮಲ್ಲಪ್ಪ ಕರಬಸಪ್ಪ ಸುರಪುರ, ಆರ್ ಆರ್ ಕಲ್ಲೂರ ಹಾಗೂ ರವಿಕಾಂತ ಪಾಟೀಲರು 3 ಬಾರಿ ಶಾಸಕರಾಗಿ ಜಯಭೇರಿ ಬಾರಿಸಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಈ ಮೂವರು ನಾಯಕರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಸ್ವತಂತ್ರರಾಗಿ ಸ್ಪರ್ಧಿಸಿದ್ದ ರವಿಕಾಂತ ಪಾಟೀಲ ಅವರು ಇಂಡಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯಭೇರಿ ಬಾರಿಸಿದ್ದಾರೆ.
ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್ ಆರ್ ಕಲ್ಲೂರ ಅವರು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಅಧ್ಯಕ್ಷರಾಗಿದ್ದರು.
ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯಭೇರಿ ಬಾರಿಸಿರುವ ರವಿಕಾಂತ ಪಾಟೀಲರು 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಆಯ್ಕೆಯಾದರು. 2008ರಲ್ಲಿ ಡಾ. ಸಾರ್ವಭೌಮ ಬಗಲಿಯವರು ಬಿಜೆಪಿಯಿಂದ ಆಯ್ಕೆಯಾದರು.
ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲರು 2018ರಲ್ಲಿ ಜೆಡಿಎಸ್- ಕಾಂಗ್ರೆಸ್‌ನ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. ಇಂಡಿ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ.

2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್ ಅವರು ಜಯಬೇರಿ ಭಾರಿಸಿದರು. ಕಳೆದ ಕೆಲ ಚುನಾವಣೆಗಳನ್ನು ನೋಡುವುದಾದರೆ, 1999ರಲ್ಲಿ ರವಿಕಾಂತ ಪಾಟೀಲ್ ( ಸ್ವತಂತ್ರ ಅಭ್ಯರ್ಥಿ ), 2004ರಲ್ಲಿ ರವಿಕಾಂತ ಪಾಟೀಲ್ ( ಸ್ವತಂತ್ರ ಅಭ್ಯರ್ಥಿ ), 2008ರಲ್ಲಿ ಡಾ ಸಾರ್ವಭೌಮ ಬಗಲಿ ( ಬಿಜೆಪಿ ಅಭ್ಯರ್ಥಿ ), 2013 ಹಾಗೂ 2018 ರಲ್ಲಿ ಯಶವಂತರಾಯಗೌಡ ವಿಟ್ಟಲಗೌಡ ಪಾಟೀಲ್ ಜಯಗಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಶವಂತರಾಯಗೌಡ ಪಾಟೀಲ ಅವರಿಗೇ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಬಿಡಿ ಪಾಟೀಲ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಹೊಸಬರು ಆಕಾಂಕ್ಷಿಗಳಾಗಿದ್ದಾರೆ. ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಈ ಬಗ್ಗೆ ಮೌನ ವಹಿಸಿರುವ ಕುತೂಹಲಕ್ಕೆ ಕಾರಣವಾಗಿದೆ.
ಈ ಕ್ಷೇತ್ರದಲ್ಲಿ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಪಂಚಮಸಾಲಿ ಮತದಾರರು ( 37613 ) ಇದ್ದಾರೆ. ಜಂಗಮ ( 4093 ) ಗಾಣಿಗ ( 19605 ), ರಡ್ಡಿ ( 1400), ಬಣಜಿಗ ( 10543 ), ಕಮ್ಮಾರ ( 2900 ), ಸವಿತಾ ಸಮಾಜ ( 3465 ), ಮಾಳಿ ( 2535), ನೇಕಾರ ( 4965), ಮಡಿವಾಳ ( 4046 ), ಪರಿಶಿಷ್ಟ ಜಾತಿ ( 17057 ), ಪರಿಶಿಷ್ಟ ಪಂಗಡ ( 3005 ) ಲಂಬಾಣಿ ( 26226 ) ಕುರುಬ ( 25624 ) ಮುಸ್ಲಿಂ ( 17831 ) ಬ್ರಾಹ್ಮಣ ( 3627 ) ಗಂಗಾ ಮತಸ್ಥ ( 12323 ) ಉಪ್ಪಾರ ( 3254) ಕುಂಬಾರ ( 2861) ವಿಶ್ವಕರ್ಮ ( 3033 ) ಜೈನ ( 1832 ) ರಜಪೂತ ( 2539 ) ಮರಾಠ ( 4573) ಕುಡು ಒಕ್ಕಲಿಗ ಅಂದಾಜು ( 36 ) ಮತದಾರರು ಸೇರಿದಂತೆ ಇನ್ನಿತರೆ ಜಾತಿಯ ಮತದಾರರಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications