ಹೈದರಾಬಾದಿನಲ್ಲಿ ಪುಣೆ ಮೂಲದ ಮಹಿಳಾ ಎಸ್ ಐ ಆತ್ಮಹತ್ಯೆ
ಪುಣೆ ಮೂಲದ 23 ವರ್ಷ ವಯಸ್ಸಿನ ಮಹಿಳಾ ಸಬ್ ಇನ್ಸ್ ಪೆಕ್ಟರ್ ರೊಬ್ಬರು ಹೈದರಾಬಾದಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದ್, ಮಾರ್ಚ್ 01: ಪುಣೆ ಮೂಲದ 23 ವರ್ಷ ವಯಸ್ಸಿನ ಮಹಿಳಾ ಸಬ್ ಇನ್ಸ್ ಪೆಕ್ಟರ್ ರೊಬ್ಬರು ಹೈದರಾಬಾದಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜವಹರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿ ( ಎನ್ ಐಎಸ್ ಎ) ಯಲ್ಲಿ ತಂಗಿದ್ದ ಸಬ್ ಇನ್ಸ್ ಪೆಕ್ಟರ್ ಅವರು ತಮ್ಮ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಮೃತರನ್ನು ಸ್ವಾತಿ ಚೌಹಾಣ್ ಎಂದು ಗುರುತಿಸಲಾಗಿದೆ.
2016ರಲ್ಲಿ ಸಿಐಎಸ್ಎಫ್ ತಂಡ ಸೇರಿದ್ದ ಸ್ವಾತಿ ಅವರು ಪುಣೆ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಫೆಬ್ರವರಿ 24ರಂದು ಹೈದರಾಬಾದಿನಲ್ಲಿದ್ದ ಗೆಳತಿಯನ್ನು ಭೇಟಿಯಾಗಲು ಬಂದಿದ್ದರು.

ಎನ್ ಐಎಸ್ ಎ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀಲಂ ಸಿಂಗ್ ಅವರನ್ನು ಭೇಟಿ ಮಾಡಿ ಅವರ ರೂಮಿನಲ್ಲೇ ಉಳಿದುಕೊಂಡಿದ್ದರು. ನೀಲಮ್ ಅವರು ಡ್ಯೂಟಿ ಮುಗಿಸಿಕೊಂಡು ರೂಮಿಗೆ ಬಂದು ನೋಡಿದಾಗ ಸ್ವಾತಿ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ.
ಸ್ವಾತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯಾವುದೇ ಸೂಸೈಟ್ ನೋಟ್ ಸಿಕ್ಕಿಲ್ಲ. ಸಿ ಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ ಐ ವೆಂಕಣ್ಣ ಹೇಳಿದ್ದಾರೆ.
ಎನ್ ಐ ಎಸ್ಎ ಕ್ಯಾಂಪಸಿನಲ್ಲಿ ಜನವರಿ 18ರಂದು ಸಿ ಐಎಸ್ ಎಫ್ ಸಿಬ್ಬಂದಿ ಸಚಿನ್ ಅವರು ಆತ್ಮಹತ್ಯೆಗೆ ಶರಣಾದ ಬಳಿಕ ಈ ಘಟನೆ ನಡೆದಿದೆ.












Click it and Unblock the Notifications