2008 ರಲ್ಲೂ ಎನ್‌ಕೌಂಟರ್ ಮಾಡಿದ್ದ ಸಜ್ಜನವರ!
ಬೆಂಗಳೂರು, ಡಿಸೆಂಬರ್ 6; ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಈ ಘಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ತೆಲಂಗಾಣ ಅತ್ಯಾಚಾರಿಗಳ ಎನ್‌ಕೌಂಟರ್ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೆ, 2008 ರಲ್ಲಿ ನಡೆದಿದ್ದ ಎನ್‌ಕೌಂಟರ್ ಒಂದು ಮತ್ತೆ ಸದ್ದು ಮಾಡುತ್ತಿದೆ. 2008 ಡಿಸೆಂಬರ್ 9 ರಂದು ಅಂದಿನ ಆಂದ್ರಪ್ರದೇಶದ ವಾರಂಗಲ್ ಜಿಲ್ಲೆಯ ಕಾಕತಿಯಲ್ಲಿ ಮೂವರು ದುರುಳರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರಾದ ಸ್ವಪ್ನಿಕ್ ಹಾಗೂ ಪ್ರಣಿತಾ ಎನ್ನವರ ಮೇಲೆ ಆಸಿಡ್ ದಾಳಿ ಮಾಡಿದ್ದರು.
ಅವಾಗಲು ಎನ್‌ಕೌಂಟರ್ ಮಾಡಿದ್ದು ಸಜ್ಜನವರ!
ಸ್ವಪ್ನಿಕ್ ಹಾಗೂ ಪ್ರಣಿತಾ ಅವರು ಪ್ರೇಮ ನಿರಾಕರಣೆ ಮಾಡಿದರು ಎಂದು ಶ್ರೀನಿವಾಸ, ಹರಿಕೃಷ್ಣಾ ಹಾಗೂ ಸಂಜಯ್ ಎನ್ನುವರು ಆಸಿಡ್ ದಾಳಿ ಮಾಡಿ ತಪ್ಪಿಸಿಕೊಂಡಿದ್ದರು. ಆಗ ವಾರಂಗಲ್ ಎಸ್ ಪಿ ಆಗಿದ್ದ ವಿಶ್ವನಾಥ ಸಜ್ಜನವರ ಅವರು ಮಾರನೇ ದಿನವೇ ಆರೋಪಿಗಳನ್ನು ಪತ್ತೆ ಮಾಡಿ, ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದರು. ಆಗ ಆರೋಪಿ ಶ್ರೀನಿವಾಸ ಪೊಲೀಸರ ಮೇಲೆ ನಾಡಬಾಂಬ್ ದಾಳಿ ಮಾಡಲು ಮುಂದಾಗಿದ್ದ. ಆಗ ಹಿಂದು ಮುಂದೆ ನೋಡದೇ ಸಜ್ಜನವರ ತಂಡ ಮೂವರನ್ನು ಎನ್‌ಕೌಂಟರ್ ಮಾಡಿ ಬಿಸಾಕಿತ್ತು.

ಘಟನೆ ನಂತರ ಸಜ್ಜನವರ ಮೇಲೆ ಮಾನವ ಹಕ್ಕುಗಳ ಕೇಸ್ ದಾಖಲಿಸಲಾಗಿತ್ತು. ಆದರೆ, ಅವರನ್ನು ಆಂದ್ರಪ್ರದೇಶದ ಜನ ಮುಕ್ತ ಮನಸ್ಸಿನಿಂದ ಕೊಂಡಾಡಿದ್ದರು. ಅಂದಿನಿಂದ ವಿ.ಸಿ.ಸಜ್ಜನವರ ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಖ್ಯಾತಿಯಾದರು.












Click it and Unblock the Notifications