ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಸಿಲುಕಿದ ಮಗುವಿನ ಕತೆ
ಹೈದ್ರಾಬಾದ್, ಜೂ. 11: ಎಂಟು ದಿನದ ಹೆಣ್ಣು ಮಗು ಅನಾರೋಗ್ಯದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಖಾಸಗಿ ಆಸ್ಪತ್ರೆಯವರು ಎಲ್ಲ ಪ್ರಯೋಗಗಳನ್ನು ಮಾಡಿ, ಇನ್ನು ಮಗು ಬದುಕಲ್ಲ ಮನೆಗೆ ಕರೆದುಕೊಂಡು ಹೋಗಿ ಎಂದು ಒಂದು ಲಕ್ಷ ರು. ಬಿಲ್ ನ್ನು ಪಾಲಕರ ಕೈಗೆ ಇಟ್ಟಿದ್ದರು.
ಪಾಲಕರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ವೆಂಟಿಲೇಟರ್ ನಲ್ಲಿ ಇಟ್ಟಿದ್ದ ಎಂಟು ದಿನದ ಮಗು ಸಾವನ್ನಪ್ಪಿದೆ ಎಂದು ಭಾವಿಸಿ ಭಾರವಾದ ಹೃದಯ ಹೊತ್ತ ತಂದೆ-ತಾಯಿ ಸ್ಮಶಾನಕ್ಕೆ ಹೊತ್ತು ತಂದಿದ್ದರು.
ಸುಮಾರು ಎರಡು ಗಂಟೆ ನಂತರ ಅಂತ್ಯ ಸಂಸ್ಕಾರದ ಎಲ್ಲ ಅಂತಿಮ ವಿಧಿ ವಿಧಾನಗಳು ನಡೆಯುತ್ತಿದ್ದಂತೆ ಮಗು ಉಸಿರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.[ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

ಇಂಥದ್ದೊಂದು ವಿಚಿತ್ರ ಪ್ರಕರಣ ನಡೆದಿರುವುದು ದಕ್ಷಿಣ ಗೋದಾವರಿ ಜಿಲ್ಲೆಯ ಚಿಂಟಪಲ್ಲಿಯಲ್ಲಿ. ಚೆನ್ನಕೇಶ್ವರ ರಾಜು ಎಂಬುವರ ಮಗುವಿನ ನಮೇಲೆ ಖಾಸಗಿ ಆಸ್ಪತ್ರೆಯವರು ನಡೆಸಿದ ಪ್ರಯೋಗಗಳು ಆಕೆಯನ್ನು ಸಾವಿನ ದವಡೆಗೆ ತಳ್ಳಿತ್ತು.
ಅನಾರೋಗ್ಯ ಪೀಡಿತವಾಗಿದ್ದ ಹೆಣ್ಣು ಮಗುವಿಗೆ ರೈನ್ಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈರುಳ್ಳಿ ವ್ಯಾಪಾರಿಯಾಗಿರುವ ರಾಜು ಸಾಲ ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದರು.[ಪೊಲೀಸರ ನಿದ್ದೆಗೆಡಿಸಿದ ಎಮ್ಮೆಗೆ ಡಿಎನ್ ಎ ಟೆಸ್ಟ್!]
ಗುರುವಾರ ರಾಜು ಅವರನ್ನು ಕರೆದು ಮಾತನಾಡಿದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಗು ಬದುಕುವ ಸಾಧ್ಯತೆ ಕ್ಷೀಣಿಸಿದೆ. ಇನ್ನು ಚಿಕಿತ್ಸೆ ನೀಡಿ ಪ್ರಯೋಜನವಿಲ್ಲ. ನಿಮ್ಮ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಒಂದು ಲಕ್ಷ ರು.ಬಿಲ್ ಕೈಗಿತ್ತಿಯ್ತಿದ್ದಾರೆ. ವೆಂಟಿಲೆಟರ್ ನ ಸಂಪರ್ಕ ದಿಂದ ಮಗುವನ್ನು ಹೊರಕ್ಕೆ ತೆಗೆದು ಆಟೋ ಮೂಲಕ ಮಗುವನ್ನು ಪಾಲಕರು ಕರೆದುಕೊಂಡು ಬಂದಿದ್ದಾರೆ.
ಮಗು ಸಾವನ್ನಪ್ಪಿದೆ ಎಂದು ಭಾವಿಸಿದ ಪಾಲಕರು ಅಂತ್ಯ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ತಂದಾಗ ಮಗು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿದ್ದರೂ ಮಗು ಬದುಕುವ ಸಾಧ್ಯತೆ ತುಂಬಾ ಕಡಿಮೆಯಿದೆ ಎಂದು ಎನ್ ಟಿಆರ್ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.












Click it and Unblock the Notifications