ದಲಿತನನ್ನು ಹೆಗಲ ಮೇಲೆ ಹೊತ್ತು ಮೆರೆದಾಡಿಸಿದ ಅರ್ಚಕ

ಹೈದರಾಬಾದ್, ಏಪ್ರಿಲ್ 18: ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ, ಮೇಲ್ವರ್ಗದವರಿಂದ ಅನ್ಯಾಯದ ಸುದ್ದಿಗಳು ಬರುತ್ತಿರುವಾಗ, ಹೈದರಾಬಾದಿನಲ್ಲಿ ದಲಿತರೊಬ್ಬರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ ಸುದ್ದಿ ಬಂದಿದೆ.

ಸುಮಾರು 3000 ವರ್ಷಗಳಷ್ಟು ಹಿಂದಿನ ಸಂಪ್ರದಾಯದಂತೆ ಮುನಿ ವಾಹನ ಸೇವೆಯ ಅಂಗವಾಗಿ ಈ ಕಾರ್ಯ ನೆರವೇರಿಸಲಾಗಿದೆ. ಚಿಲ್ಕೂರು ಬಾಲಾಜಿ ದೇಗುಲದ ಅರ್ಚಕ ಸಿಎಸ್ ರಂಗರಾಜನ್ ಅವರು ಆದಿತ್ಯ ಪರಸ್ರಿ ಎಂಬಾತನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ರಾಜಬೀದಿಯಲ್ಲಿ ಮೆರವಣಿಗೆ ಸಮೇತ ದೇವರ ಸನ್ನಿಧಿ ಬಳಿಗೆ ಕರೆ ತಂದರು.

ಮುನಿವಾಹನ ಸೇವೆ: ಸುಮಾರು 2700 ವರ್ಷಗಳಿಗೂ ಅಧಿಕ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ. ಸಮಾಜದಲ್ಲಿ ಸಾಮರಸ್ಯ ನೆಲೆಸಿದೆ ಎಂದು ತೋರಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ.

Video: Hyderabad priest carries Dalit man on his shoulders to send strong message

ಆದಿತ್ಯ ಅವರಿಗೆ ದಲಿತ ಎಂಬ ಕಾರಣಕ್ಕೆ ದೇಗುಲ ಪ್ರವೇಶ ನಿರಾಕರಿಸಲಾಗಿತ್ತು. ಈ ಪದ್ಧತಿಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿ, ಇನ್ನಾದರೂ ದೇವರ ಮುಂದೆ ನಾವೆಲ್ಲರೂ ಸಮಾನರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಎಂಬ ಸಂದೇಶ ಸಾರೋಣ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+