ರೋಹಿತ್ ದಲಿತನಲ್ಲ, ಆತ್ಮಹತ್ಯೆಗೆ ವೈಯಕ್ತಿಕ ಕಾರಣ: 8 ಅಂಶದ ವರದಿ

Posted By:
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 6: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯ್ರೆ ತನಿಖೆಯ ವರದಿ ಬಂದಿದ್ದು, ರೋಹಿತ್ ನ ತಾಯಿ ರಾಧಿಕಾ ಅವರು ಮೀಸಲಾತಿಯ ಲಾಭಕ್ಕಾಗಿ ದಲಿತರು ಎಂದು 'ಬ್ರ್ಯಾಂಡ್' ಮಾಡಿಕೊಂಡಿದ್ದರು. ರೋಹಿತ್ ಆತ್ಮಹತ್ಯೆಗೆ ಆತನೇ ಕಾರಣ ಹೊರತು ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮೃತಿ ಇರಾನಿ ತಮ್ಮ ಜವಾಬ್ದಾರಿಯನ್ನಷ್ಟೇ ನಿರ್ವಹಿಸಿದ್ದಾರೆ ಎನ್ನಲಾಗಿದೆ.

ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ರೂಪನ್ ವಾಲ್ ನಿಯೋಗ ರಚಿಸಲಾಗಿತ್ತು. ಜಾತಿಯ ಬಗ್ಗೆ ತುಂಬ ವಿಸ್ತೃತವಾಗಿ ವರದಿಯಲ್ಲಿ ತಿಳಿಸಲಾಗಿದ್ದು, ರಾಧಿಕಾ ವೇಮುಲ ಅವರು ಜಾತಿಯ ವಿಚಾರವಾಗಿ ಹೇಳುವ ಮಾಹಿತಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಲಾಗಿದೆ.[ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ]

ರೋಹಿತ್ ವೇಮುಲ ಸಾವಿನ ನಂತರ ರಾಜಕೀಯವಾಗಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಆ ಹಿನ್ನೆಲೆಯಲ್ಲಿ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತನಿಖೆಗೆ ಆದೇಶಿಸಿತ್ತು. ಕಳೆದ ಜನವರಿ 17ರಂದು ರೋಹಿತ್ ವೇಮುಲ ವಿ.ವಿಯ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ರೋಹಿತ್ ವೇಮುಲಗೆ ವೈಯಕ್ತಿಕ ಸಮಸ್ಯೆಗಳಿದ್ದವು. ಕೆಲವು ಅಸಮಾಧಾನಗಳಿದ್ದವು. ಆತ ಆತ್ಮಹತ್ಯೆಗೆ ಯಾರನ್ನೂ ದೂಷಿಸಿಲ್ಲ. ಆತನಿಗೆ ವಿ.ವಿ. ನಿರ್ಧಾರದ ಬಗ್ಗೆ ಅಸಮಾಧಾನ ಇದ್ದರೆ ನಿರ್ದಿಷ್ಟವಾಗಿ ಬರೆದಿರಬಹುದಿತ್ತು. ವೇಮುಲನಿಗೆ ಜೀವನದ ಬಗ್ಗೆ ಇದ್ದ ಅಸಮಾಧಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ. ವಿ.ವಿಯು ಸಮಿತಿ 'ಸಕಾರಣ' ವಾಗಿಯೇ ರೋಹಿತ್ ವೇಮುಲ ಹಾಗೂ ಇತರ ನಾಲ್ವರನ್ನು ಅಮಾನತು ಮಾಡಿದೆ ಎಂದು ಕೂಡ ಹೇಳಲಾಗಿದೆ.[ಸ್ಮೃತಿ ಸಮರ್ಥನೆ ನಂತರವೂ 10 ಪ್ರೊಫೆಸರ್ ಗಳು ರಿಸೈನ್]

Vemula killed himself, not discrimination: Enquiry report

ಇನ್ನು ವರದಿಯಲ್ಲಿರುವ ಪ್ರಮುಖ ಅಂಶಗಳು ಹೀಗಿವೆ:
1. ರಾಧಿಕಾ ತಾವು ದಲಿತರು ಎಂದು ಬ್ರ್ಯಾಂಡ್ ಮಾಡಿಕೊಂಡಿದ್ದರು.
2. ಆಕೆ ದಲಿತರಲ್ಲ.
3. ರೋಹಿತ್ ಯಾವುದೇ ತಾರತಮ್ಯ ಎದುರಿಸಿಲ್ಲ.
4. ಅಮಾನತಿಗೂ ರೋಹಿತ್ ಅತ್ಮಹತ್ಯೆಗೂ ಸಂಬಂಧವಿಲ್ಲ.
5. ಹಾಸ್ಟೆಲ್ ನಿಂದ ರೋಹಿತ್ ನನ್ನು ಹೊರಹಾಕಿರುವುದಕ್ಕೆ 'ಸಕಾರಣ'ವಿದೆ.
6. ವೈಯಕ್ತಿಕ ಅಸಮಾಧಾನ ಆತ್ಮಹತ್ಯೆಗೆ ಪ್ರೇರಣೆ ನೀಡಿದೆಯೇ ಹೊರತು ತಾರತಮ್ಯವಲ್ಲ,
7. ಎಂಎಲ್ ಸಿ ರಾಮಚಂದ್ರರಾವ್, ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ತಮ್ಮ ಜವಾಬ್ದಾರಿಯನ್ನಷ್ಟೇ ನಿರ್ವಹಿಸಿದ್ದಾರೆ.
8 ವಿ.ವಿ.ಸಾಮಾಜಿಕ ನ್ಯಾಯ ವಿಭಾಗದ ತಾರತಮ್ಯ ವಿರೋಧಿ ಅಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಕುಂದು-ಕೊರತೆ ನಿವಾರಣೆ ಸಮಿತಿ ಹೊಣೆ ಹೊತ್ತಿರುವ ಒಂಬುಡ್ಸ್ ಮನ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು.

ಇನ್ನು ಈ ವರದಿ ಬಹಿರಂಗವಾದ ನಂತರ, ಇದು 'ತಿಪ್ಪೆ ಸಾರಿಸಲು' ಮಾಡಿದ ವರದಿಯಂತಿದೆ. ನಿರೀಕ್ಷೆಯಂತೆಯೇ ವರದಿ ಬಂದಿದ್ದು, ಕೇಂದ್ರ ಸಚಿವರು ಹಾಗೂ ತಪ್ಪಿತಸ್ಥರನ್ನು ಉಳಿಸುವ ಹುನ್ನಾರವಿದು ಎಂಬ ಆರೋಪಗಳು ಕೇಳಿಬಂದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Commission set up to investigate the death of Hyderabad University scholar Rohith Vemula has stated that, himself blame for suicide. union ministers Bandaru Dattatreya and Smriti Irani were only discharged their duties.
Please Wait while comments are loading...