ಟಿಆರ್ ಎಸ್ ಮುಖಂಡನನ್ನು ಕಲ್ಲುಹೊಡೆದು ಕೊಂದ ದುಷ್ಕರ್ಮಿಗಳು
ಹೈದರಾಬಾದ್, ನವೆಂಬರ್ 06: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯ ಸ್ಥಳೀಯ ಪ್ರಭಾವೀ ಮುಖಂಡ ನಾರಾಯಣ ರೆಡ್ಡಿ ಎಂಬುವವರನ್ನು ಕೆಲ ದುಷ್ಕರ್ಮಿಗಳು ಕಲ್ಲುಹೊಡೆದು ಕೊಂದ ಘಟನೆ ಮಂಗಳವಾರ ವರದಿಯಾಗಿದೆ.
ಆದರೆ ನಾರಾಯಣ ರೆಡ್ಡಿ ಸಾವಿಗೂ, ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿರುವ ಪೊಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಿರೋಧಿ ಗುಂಪೊಂದರ ಜೊತೆ ವೈಯಕ್ತಿಕ ಕಲಹವೊಂದು ನಡೆಯುತ್ತಿದ್ದ ಸಮಯದಲ್ಲಿ, ವಿರೋಧಿಗಳ ಗುಂಪು ಅವರನ್ನು ಕಲ್ಲು ಹೊಡೆದು ಸಾಯಿಸಿದೆ ಎನ್ನಲಾಗಿದೆ. ತೆಲಂಗಾಣದ ವಿಕಾರಬಾದ್ ನ ಸುಲ್ತಾನ್ಪುರ ಎಂಬ ಹಳ್ಳಿಯಲ್ಲಿ ರೆಡ್ಡಿ ಅವರ ಶವ ಪತ್ತೆಯಾಗಿದೆ.

ರೆಡ್ಡಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲ ಟಿಆರ್ ಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆಯಿತು. ಆದರೆ ರೆಡ್ಡಿ ಸಾವಿಗೆ, ರಾಜಕೀಯ ವೈಷಮ್ಯ ಕಾರಣವಲ್ಲ ಎಂದು ಪೊಲೀಸರು ದೃಢಪಡಿಸಿದ ಮೇಲೆ ಕಾರ್ಯಕರ್ತರ ಕೋಪ ಕೊಂಚ ತಣ್ಣಗಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications