ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ, TRS ನತ್ತ ಅಜರುದ್ದಿನ್?

ಹೈದರಾಬಾದ್, ಜನವರಿ 02: ತೆಲಂಗಾಣದ ಮುಖ್ಯಮಂತ್ರಿಯಾಗಿ ಡಿ.13 ರಂದೇ ಟಿಆರ್ ಎಸ್ ಮುಖಂಡ ಕೆ. ಚಂದ್ರಶೇಖರ್ ರಾವ್ ಪ್ರಮಾಣವಚನ ಸ್ವೀಕರಿಸಿದ್ದರೂ, ಇದುವರೆಗೂ ಸಂಪುಟ ಮಾತ್ರ ರಚನೆಯಾಗಿಲ್ಲ.

ಕಾಂಗ್ರೆಸ್ ನಿಂದ ಹಲವು ಶಾಸಕರು ಟಿಆರ್ ಎಸ್ ತೆಕ್ಕೆಗೆ ಹಾರಲಿರುವುದರಿಂದ ಸಂಪುಟ ವಿಸ್ತರಣೆಯೂ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದರೊಟ್ಟಿಗೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಕ್ರಿಕೆಟಿಗ ಅಜರುದ್ದಿನ್ ಸಹ ಟಿಆರ್ ಎಸ್ ಗೆ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆ ತೆಲಂಗಾಣ ಚುನಾವಣೆಗೂ ಮುನ್ನ ಅಜರುದ್ದಿನ್ ಅವರನ್ನು ಟಿಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅಜರುದ್ದಿನ್ ಅವರನ್ನು ಮಲ್ಕಂಜ್ ಗಿರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಅದಕ್ಕೂ ಮುನ್ನವೇ ಅಜರುದ್ದಿನ್ ಕಾಂಗ್ರೆಸ್ ತೊರೆಯುತ್ತಿರುವುದು ಪಕ್ಷದಲ್ಲಿ ಆಘಾತವನ್ನುಂಟು ಮಾಡಿದೆ.

TRS eyes eight Congress MLAs including Mohammad Azaharuddin

ಟಿಆರ್ ಎಸ್ ಗೆ ಸೇರಿದರೆ ಅಜರುದ್ದಿನ್ ಅವರಿಗೆ ಸಿಕಂದರಾಬಾದ್ ನಿಂದ ಲೋಕಸಭಾ ಟಿಕೆಟ್ ನೀಡಲು ಟಿಆರ್ ಎಸ್ ನಿರ್ಧರಿಸಿದೆ.

ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಮತ್ತು ಅಜರುದ್ದಿನ್ ಉತ್ತಮ ಸ್ನೇಹಿತರು. ಈಗಾಗಲೇ ಓವೈಸಿ ತಮ್ಮ ಬೆಂಬಲವನ್ನು ಕೆ. ಚಂದ್ರಶೇಖರ್ ರಾವ್ ಅವರಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+