ಗದ್ದೆಯೊಳಗೆ ಬಿದ್ದ ತರಬೇತಿ ವಿಮಾನ: ಪೈಲಟ್ ಅಪಾಯದಿಂದ ಪಾರು
ಹೈದರಾಬಾದ್, ನವೆಂಬರ್ 21: ತರಬೇತಿ ವಿಮಾನವೊಂದು ತಾಂತ್ರಿಕ ಕಾರಣಗಳಿಂದ ಅಪಘಾತಕ್ಕೆ ಒಳಗಾಗಿ ಭತ್ತದ ಗದ್ದೆಯೊಳಗೆ ಪತನಗೊಂಡ ಘಟನೆ ಬುಧವಾರ ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೋಕಿಲಾ ಗ್ರಾಮದಲ್ಲಿ ನಡೆದಿದೆ.
ತರಬೇತಿ ಪಡೆಯುತ್ತಿದ್ದ ಭಾಸ್ಕರ್ ಭೂಷಣ್ (25) ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನಯಾನ ಅಕಾಡೆಮಿಗೆ ಸೇರಿದ ಸೆಸ್ಸೇನಾ ವಿಮಾನ ಅಪಘಾತಕ್ಕೆ ಒಳಗಾಗಿದೆ. ಸಮಸ್ಯೆಗೆ ಒಳಗಾದ ವಿಮಾನ ನಿಯಂತ್ರಣ ತಪ್ಪಿ ಗದ್ದೆಯೊಳಗೆ ಬಿದ್ದಿದೆ.

ಪ್ರಾಥಮಿಕ ವರದಿಗಳ ಪ್ರಕಾರ ವಿಮಾನವು ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ತರಬೇತಿ ಪಡೆಯುತ್ತಿದ್ದ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಎನ್ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.

ಅಕಾಡೆಮಿಯ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದೆ.












Click it and Unblock the Notifications