ವೇಶ್ಯಾವಾಟಿಕೆ ಜಾಲದಲ್ಲಿ ಜ್ಯೂನಿಯರ್ ನಟಿ
ಹೈದರಾಬಾದ್, ನ.26: ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ವೇಶ್ಯಾವಾಟಿಕೆ ಜಾಲದ ಲಿಂಕ್ ಕಂಡು ಬಂದಿದೆ. ಹೈದರಾಬಾದ್ ಪೊಲೀಸರು ಸೆರೆಹಿಡಿದ ಹೈಟೆಕ್ ವೇಶ್ಯೆಯರ ಗುಂಪಿನಲ್ಲಿ ಟಾಲಿವುಡ್ ನ ಜ್ಯೂನಿಯರ್ ನಟಿಯೊಬ್ಬಳು ಇರುವುದು ದೃಢಪಟ್ಟಿದೆ.
ಹೈದರಾಬಾದಿನ ಮೋತಿನಗರದ ವೇಶ್ಯಾವಾಟಿಕೆ ಅಡ್ದಾವೊಂದರ ಮೇಲೆ ದಾಳಿ ನಡೆಸಿದ ಕ್ರೈಂ ಬ್ಯ್ರಾಂಚ್ ಪೊಲೀಸರು ವೇಶ್ಯೆಯರು, ಗ್ರಾಹಕರು, ಪಿಂಪ್ ಗಳನ್ನು ಬಂಧಿಸಿದ್ದಾರೆ. ಅಪಾರ್ಟ್ ಮೆಂಟ್ ವೊಂದರಲ್ಲಿ ನಿರಂತರವಾಗಿ ವ್ಯಭಿಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ದಿಢೀರ್ ದಾಳಿ ನಡೆಸಿ ಎಲ್ಲರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. [ಶ್ವೇತಾ ಬಸುರನ್ನು ವೇಶ್ಯೆ ಎಂದವರಿಗೆ ಆಪತ್ತು?]

ಬಂಧಿತರಲ್ಲಿ ಜ್ಯೂನಿಯರ್ ನಟಿ ಸ್ವಾತಿ ಎಂಬುವರು ಇರುವುದು ಪತ್ತೆಯಾಗಿದೆ. ಎಲ್ಲರನ್ನು ಎಸ್ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ದಾಳಿ ನಡೆದ ಪ್ರದೇಶ ಜನವಸತಿ ಪ್ರದೇಶವಾಗಿದ್ದು, ಅಲ್ಲಿನ ಸ್ಥಳೀಯರ ಸಹಕಾರದಿಂದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಬಯಲಿಗೆಳೆಯಲಾಗಿದೆ.
ಈ ಹಿಂದೆ ದಕ್ಷಿಣದ ಹಿರಿಯ ನಟಿ ಕಿನ್ನೆರಾ, ಯಮುನಾ ಸೇರಿದಂತೆ ಭುವನೇಶ್ವರಿ, ಸಯೀರಾ ಭಾನು, ಜ್ಯೋತಿ,ತೆಲುಗು ಕಿರುತೆರೆ ನಟಿ ಶ್ರಾವಣಿ ಸೇರಿದಂತೆ ಹಲವು ಹತ್ತು ಮಂದಿ ತಾರೆಗಳು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದರು.[ ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]
ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ನಟಿ ಶೇತಾ ಬಸು ಪ್ರಸಾದ್ ಅವರು ಪುನರ್ವಸತಿ ಕೇಂದ್ರದಲ್ಲಿ ಕೆಲ ಕಾಲ ನೆಲೆಸಿ ಹೊರಕ್ಕೆ ಬಂದಿದ್ದರು. ಅದರೆ, 23 ವರ್ಷ ನಟಿ ನಾನು ಯಾವುದೇ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿರಲಿಲ್ಲ ಈ ಬಗ್ಗೆ ಬಂದಿರುವ ವರದಿಗಳೆಲ್ಲ ಸುಳ್ಳು ಎಂದು ಅಲ್ಲಗೆಳೆದಿದ್ದರು.












Click it and Unblock the Notifications