ಕೊರೊನಾ ಬಗ್ಗೆ ಆರ್.ಜಿ.ವಿ ಕುಹಕ: ಸಾವು ಕೂಡ ಮೇಡ್ ಇನ್ ಚೀನಾ!
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಡೆಡ್ಲಿ ಕೊರೊನಾ ಭಾರತಕ್ಕೂ ಕಾಲಿಟ್ಟಿರುವುದರಿಂದ ಇಡೀ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೂ ಭಾರತದಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಅತ್ತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿರುವುದು ದೃಢ ಪಟ್ಟ ಮೇಲೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿರುವಾಗಲೇ, ಕೊರೊನಾ ಬಗ್ಗೆ ತೆಲುಗು ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕುಹಕವಾಡಿದ್ದಾರೆ.
''ನಮ್ಮ ಸಾವು ಕೂಡ 'ಮೇಡ್ ಇನ್ ಚೀನಾ' ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ'' ಅಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ 'ಮೇಡ್ ಇನ್ ಚೀನಾ' (ಚೀನಾದಲ್ಲಿ ತಯಾರಾದ ಪ್ರಾಡಕ್ಟ್ಸ್) ಉತ್ಪನ್ನಗಳೇ ಹೆಚ್ಚಾಗಿ ಸಿಗುತ್ತವೆ. ಚೀನಾ ಪ್ರಾಡಕ್ಟ್ ಗಳಿಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಕೂಡ ಇದೆ. ಈಗ ನೋಡಿದ್ರೆ, ಚೀನಾದಲ್ಲಿ ಮಹಾ ಮಾರಿಯಾಗಿ ವ್ಯಾಪಿಸಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಇದರಿಂದ ಭಾರತೀಯರ ಸಾವು ಕೂಡ ಮೇಡ್ ಇನ್ ಚೀನಾ ಆಗುತ್ತಿದೆ ಎಂಬರ್ಥದಲ್ಲಿ ರಾಮ್ ಗೋಪಾಲ್ ವರ್ಮಾ ಟ್ವೀಟಿಸಿದ್ದಾರೆ.
— Ram Gopal Varma (@RGVzoomin) March 3, 2020
ಕೊರೊನಾ ವೈರಸ್ ನಿಂದಾಗಿ ಭಾರತದಲ್ಲಿ ಈವರೆಗೂ ಯಾರೂ ಮೃತಪಟ್ಟಿಲ್ಲ. ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.












Click it and Unblock the Notifications