ಸೆ.23 ರಿಂದ ತಿರುಮಲದಲ್ಲಿ ನವರಾತ್ರಿಯ ಬ್ರಹ್ಮೋತ್ಸವ
ತಿರುಮಲ, ಸೆ. 22: ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ವಾರ್ಷಿಕ 'ಬ್ರಹ್ಮೋತ್ಸವ' ತಿರುಪತಿಯ ತಿರುಮಲ ಸಕಲ ರೀತಿಯಿಂದ ಸಜ್ಜಾಗಿದೆ. ಸೆಪ್ಟೆಂಬರ್ 23 ರಿಂದ ಒಂಬತ್ತು ದಿನಗಳವರೆಗೆ ನಡೆಯುವ ವಾರ್ಷಿಕ ಬ್ರಹ್ಮೊತ್ಸವಕ್ಕೆ ಸಂಭಮದ ತಯಾರಿ ಪೂರ್ಣಗೊಂಡಿದೆ.
ಏಳುಮಲೆ ಒಡೆಯ, ಕಲಿಯುಗ ಪರಮ ದೈವ ಬಾಲಾಜಿ ವಾಸಸ್ಥಾನವಾದ ತಿರುಮಲಲ್ಲಿ ತಳಿರು, ತೋರಣ ಹೂವುಗಳು, ವಿದ್ಯುತ್ ದೀಪಗಳಿಂದ ಅಲಂಕಾರ ಕಂಡು ಬಂದಿದೆ.
'ಸಲಕಟ್ಲಾ ಬ್ರಹ್ಮೊತ್ಸವ' ಎಂದು ಕರೆಯುವ ಈ ಉತ್ಸವಕ್ಕೆ ತಿರುಮಲ-ತಿರುಪತಿ ದೇವಸ್ಥಾನದ (ಟಿಟಿಡಿ) ಸುಮಾರು 8 ಕೋಟಿ ರುಗೂ ಅಧಿಕ ಮೊತ್ತ ಖರ್ಚು ಮಾಡುತ್ತಿದೆ.
ದೇಶದೆಲ್ಲೆಡೆಯಿಂದ ಬರುವ ಭಕ್ತಾದಿಗಳಿಗೆ ವಸತಿ, ಉಟೋಪಚಾರ ವ್ಯವಸ್ಥೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇನ್ನಷ್ಟು ವಿವರಗಳು ಮುಂದಿವೆ...

ಸೆಪ್ಟೆಂಬರ್ 23 ರಿಂದ ಒಂಬತ್ತು ದಿನ
ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಮೊದಲ ದಿನ ಧ್ವಜಾರೋಹಣ ಇರುತ್ತದೆ. ಪೆದ್ದ ಶೇಷ ವಾಹನ ರಾತ್ರಿ 9 ರಿಂದ 11 ಗಂಟೆ ತನಕ ವಾಹನ ಸೇವೆ ನಡೆಸಲಾಗಿದೆ.

ಎರಡನೇ ದಿನ : ವಾಹನ ಸೇವೆ
ಎರಡನೇ ದಿನ ಚಿಕ್ಕ ಶೇಷ ವಾಹನ ಸೇವೆ ಬೆಳಗ್ಗೆ 9 ರಿಂದ 11 ಗಂಟೆ ತನಕ ನಡೆಸಲಾಗಿದೆ. ರಾತ್ರಿ ರಾತ್ರಿ 9 ರಿಂದ 11 ಗಂಟೆ ತನಕ ಹಂಸವಾಹನದಲ್ಲಿ ಸ್ವಾಮಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಶ್ರೀಕೃಷ್ಣ ಸ್ವರೂಪಿಯಾಗಿ ತಿಮ್ಮಪ್ಪ
ಶ್ರೀವೆಂಕಟೇಶ್ವರನನ್ನು ಬಾಲಕೃಷ್ಣನ ರೂಪದಲ್ಲಿ ಅಲಂಕರಿಸಿ ಹೂವಿನ ಪಲ್ಲಕ್ಕಿಗಳಲ್ಲಿ ಹೊತ್ತು ಮೆರವಣಿಗೆ ಮಾಡಲಾಗುತ್ತದೆ. ರೋಸ್ ವುಡ್ ಹಾಗೂ ದಂತದಿಂದ ಕೆತ್ತಲ್ಪಟ್ಟ ಸುಂದರವಾದ ಪಲ್ಲಕ್ಕಿಗಳನ್ನು ಮೈಸೂರಿನ ಮಹಾರಾಜರು ತಿಮ್ಮಪ್ಪನ ಸೇವೆಗಾಗಿ ನೀಡಿರುವುದು ವಿಶೇಷ.

3 ಹಾಗೂ 4ನೇ ದಿನ: ವಾಹನ ಸೇವೆ
3ನೇ ದಿನ: ಸಿಂಹವಾಹನರೂಢ ನಾದ ತಿಮ್ಮಪ್ಪನನ್ನು ಮೂರನೇ ದಿನ ಕಾಣಬಹುದು. ರಾತ್ರಿ ವೇಳೆ ಮತ್ಯಾಪು ಪಂಡಿರಿ ವಾಹನ ಸೇವೆ ಕಾಣಬಹುದು.
4ನೇ ದಿನ: ತಿರುಮಲ ತಿರುಪತಿ ಬ್ರಹ್ಮೋತ್ಸವದ ಭಾಗವಾಗಿ ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪನ ಮೆರವಣಿಗೆ ಬೆಳಗ್ಗೆ ಹಾಗೂ ರಾತ್ರಿ ವೇಳೆ ಸರ್ವಭೂಪಾಲ ವಾಹನ ಸೇವೆ

5 ಹಾಗೂ 6ನೇ ದಿನದ ಸೇವೆ
ತಿರುಮಲ ತಿರುಪತಿ ಬ್ರಹ್ಮೋತ್ಸವ ಐದನೇದಿನ ಬೆಳಗ್ಗೆ ಶ್ರೀವಾರಿಗೆ ಮೋಹಿನಿ ಅವತಾರ ವಸ್ತ್ರ ತೊಡಿಸಲಾಗುತ್ತದೆ. ರಾತ್ರಿ ಗರುಢರೂಢನಾಗಿ ಸ್ವಾಮಿ ಕಾಣಿಸಿಕೊಳ್ಳಲಿದ್ದಾನೆ.
ಆರನೇ ದಿನ ಹನುಮಂತ ವಾಹನ ಬೆಳಗ್ಗೆ ನಡೆದರೆ ಸಂಜೆ ಡೋಲೋತ್ಸವ 5 ರಿಂದ 6 ಗಂಟೆ ತನಕ ಹಾಗೂ ಸ್ವರ್ಣರಥ ಉತ್ಸವ ರಾತ್ರಿ ಗಜವಾಹನ ಸೇವೆ
7, 8 ಹಾಗೂ 9ನೇ ದಿನ
ತಿರುಮಲ ತಿರುಪತಿ ಬ್ರಹ್ಮೋತ್ಸವ ಏಳನೇ ದಿನ ದುರ್ಗಾಷ್ಟಮಿ ಹಬ್ಬ ಹಾಗೂ ರಥೋತ್ಸವ ರಾತ್ರಿ ವೇಳೆಗೆ ಅಶ್ವವಾಹನ ರೂಢನಾಗಿ ತಿಮ್ಮಪ್ಪನ ದರ್ಶನ ಸಿಗಲಿದೆ.
ಎಂಟನೇ ದಿನದಂದು ಸೂರ್ಯಪ್ರಭ ವಾಹನ ಸಂಜೆ ವಿವಿಧ ಶುದ್ಧೀಕರಣ ಸ್ನಾನ. ರಾತ್ರಿ ಚಂದ್ರಪ್ರಭ ವಾಹನ.
ಒಂಭತ್ತನೇ ದಿನದಂದು ಸ್ನಾಪಣ ತಿರುಮಂಜನಂ ಹಾಗೂ ಚಕ್ರಸ್ನಾನ ಹಾಗೂ ಚಿನ್ನದ ತಿರುಚಿವುತ್ಸವಂ ಧ್ವಜ ಅಹೋರಣ

ಸಾಂಪ್ರದಾಯಿಕ ನೃತ್ಯ
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ. ಸಂಗೀತ, ನೃತ್ಯದ ಮೂಲಕ ದೇವರಿಗೆ ಸೇವೆ ಸಲ್ಲಿಸಲಾಗುತ್ತದೆ. ಚಿಕ್ಕ ಮಕ್ಕಳು ದೇವ ದಾನವ ಭಾಗವತ, ದೇವರ ವಾಹನರೂಪಿ ದಿರಿಸಿನಲ್ಲಿ ಕಂಗೊಳಿಸುತ್ತಾರೆ.












Click it and Unblock the Notifications