ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರದಂದು, ಹಗಲು ವೇಳೆಯಲ್ಲಿ ಮಾತ್ರ ಕದಿಯುತ್ತಿದ್ದ ಕಳ್ಳರು ಅಂದರ್

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 22: ಈ ಇಬ್ಬರು ಕಳ್ಳರ ಬಗೆಗಿನ ವರದಿ ಬಹಳ ಆಸಕ್ತಿಕರವಾಗಿದೆ. ಇವರಿಬ್ಬರು ಮಂಗಳವಾರದ ದಿನ ಮಾತ್ರ ಕಳವು ಮಾಡುತ್ತಿದ್ದರಂತೆ. ಅದು ಕೂಡ ಹಗಲು ಹೊತ್ತಿನಲ್ಲಿ. ಅಂತೂ ಒಂದು ದಿನ ಕೈ ಕೊಟ್ಟಿದೆ. ಇದೀಗ ಇವರಿಬ್ಬರು ಹೈದರಾಬಾದ್ ಪೊಲೀಸರ ಅತಿಥಿಗಳಾಗಿದ್ದಾರೆ.

ಮೊಹಮದ್ ಸಮೀರ್ ಖಾನ್ ಹಾಗೂ ಆತನ ಸಹಚರ ಮೊಹಮದ್ ಶೋಯೆಬ್ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ಬಳಿ 21 ಲಕ್ಷ ಮೌಲ್ಯದ 700 ಗ್ರಾಮ್ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತುಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ಮೊಹಮದ್ ಸಮೀರ್ ಖಾನ್ ನ ಹಿಂದಿನ ತಲೆಮಾರಿನವರು ಮೂಲತಃ ಅಫ್ಘಾನಿಸ್ತಾನದವರು. ಆತನಿಗೆ ದೃಷ್ಟಿ ಸಮಸ್ಯೆ ಇದೆ. ಆದ್ದರಿಂದಲೇ ಹಗಲು ಹೊತ್ತಿನಲ್ಲೇ ಕಳವು ಮಾಡುತ್ತಿದ್ದ. ಮಂಗಳವಾರದಂದು ಕಳವು ಮಾಡಿದರೆ ಅದರಲ್ಲಿ ತಾನು ಯಶಸ್ವಿ ಆಗುತ್ತೇನೆ ಎಂಬುದು ಆತನ ಬಲವಾದ ನಂಬಿಕೆ. ಆ ಕಾರಣಕ್ಕೆ ಹೈದರಾಬಾದ್ ನವನಾದ ಮೊಹಮದ್ ಶೋಯೆಬ್ ಜತೆ ಸೇರಿ ಪ್ರತಿ ಮಂಗಳವಾರ ಕಳವು ಮಾಡುತ್ತಿದ್ದ.

These robbers rob only Tuesdays day time, why?

ಕದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಳ್ಳನ ವಿಡಿಯೋ ವೈರಲ್ಕದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಳ್ಳನ ವಿಡಿಯೋ ವೈರಲ್

ಇಬ್ಬರೂ ಸೇರಿ ಮೋಟಾರ್ ಬೈಕ್ ನಲ್ಲಿ ಹಗಲು ಹೊತ್ತು ಸುತ್ತಾಡುತ್ತಿದ್ದರು. ಯಾವ ಮನೆ ಬಾಗಿಲು ಹಾಕಿರುತ್ತಿತ್ತೋ ಅದೇ ಇವರ ಗುರಿ ಆಗುತ್ತಿತ್ತು. ಒಬ್ಬ ಮನೆಯ ಹೊರಗೆ ಕಾವಲು ನಿಂತಿರುತ್ತಿದ್ದ. ಮತ್ತೊಬ್ಬ ಬೀಗ ಒಡೆದು, ಒಳ ಪ್ರವೇಶಿಸಿ, ಕೈ ಚಳಕ ತೋರಿಸುತ್ತಿದ್ದ. ಇವೆಲ್ಲ ಐದರಿಂದ ಹತ್ತು ನಿಮಿಷದಲ್ಲಿ ಮುಗಿದು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದ ಕಳ್ಳ ಮಾಡಿದ್ದೇನು?: ತಮಾಷೆಯ ವಿಡಿಯೋಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದ ಕಳ್ಳ ಮಾಡಿದ್ದೇನು?: ತಮಾಷೆಯ ವಿಡಿಯೋ

ಇವರಿಬ್ಬರ ವಿರುದ್ಧ ತೆಲಂಗಾಣ ಹಾಗೂ ಬೆಂಗಳೂರಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣವಿದೆ. ಅಂದಹಾಗೆ ಇವರಿಬ್ಬರ ಮೊದಲ ಪರಿಚಯ ಆಗಿದ್ದು ಹೈದರಾಬಾದ್ ನ ಜೈಲಿನಲ್ಲಿಯಂತೆ.

English summary
A superstitious burglar, who used to strike only on Tuesdays because of his superstitious beliefs, and during the day because of his poor vision, has run out of luck as he along with his associate landed in the police net today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X