"ಭದ್ರತಾ ಲೋಪವಿಲ್ಲದೆ ಇಂಥ ಘಟನೆ ನಡೆಯಲು ಸಾಧ್ಯವೇ ಇಲ್ಲ"
ಹೈದರಾಬಾದ್, ಫೆಬ್ರವರಿ 18: 'ಭದ್ರತಾ ಲೋಪವಿಲ್ಲದೆ ಪುಲ್ವಾಮಾದಂಥ ಘಟನೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಸಂಶೋದನೆ ಮತ್ತು ವಿಶ್ಲೇಷಣಾ ಘಟಕ(RAW)ದ ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಹೇಳಿದ್ದಾರೆ.
"ಎಲ್ಲೋ ಏನೋ ತಪ್ಪಾಗಿದೆ. ಆದರೆ ಎಲ್ಲಿ ಎಂಬುದು ನನಗೂ ಗೊತ್ತಿಲ್ಲ. ಭದ್ರತಾ ಲೋಪವಿಲ್ಲದೆ ಈ ಘಟನೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಘಟನೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದಾರೆ. ಯಾರೋ ಒಬ್ಬ ಸ್ಫೋಟಕವನ್ನು ತಂದಿದ್ದಿರಬಹುದು, ಇನ್ನೊಬ್ಬ ಅವನ್ನು ಕಾರಿನಲ್ಲಿ ಜೋಡಿಸಿರಬಹುದು, ಸಿಆರ್ ಪಿಎಫ್ ಯೋಧರಿರುವ ವಾಹನ ಅಂದು ಆ ಪ್ರದೇಶದಲ್ಲಿ ಹೋಗುತ್ತದೆ ಎಂಬುದು ಅವರಿಗೆ ಮೊದಲೇ ಗೊತ್ತಿದ್ದಿರಬೇಕು" ಎಂದು ಸೂದ್ ಹೇಳಿದರು.
ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು, ಇದು ಬಾಕ್ಸಿಂಗ್ ಮ್ಯಾಚ್ ಅಲ್ಲ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ. ಅದಕ್ಕೆ ಸಮಯ ಬೇಕು, ಜಾಗ ನಿಗದಿಯಾಗಬೇಕು. ಅದು ಇಂದೇ ಅಥವಾ ನಾಳೆಯೇ ಆಗಬೇಕು ಎಂದರೆ ಆಗುವುದಿಲ್ಲ ಎಂದು ಸೂದ್ ಅಭಿಪ್ರಾಯಪಟ್ಟರು.

ಈ ಘಟನೆಗೆ ತಕ್ಕ ಪ್ರತ್ಯುತ್ತರ ನೀಡುವುದು ಇಡೀ ಭಾರತದ ಪ್ರಯತ್ನವಾಗಬೇಕೆ ಹೊರತು ಯಾವೊಂದು ಪಕ್ಷದ ಪ್ರತ್ಯುತ್ತರವಾಗಬಾರದು ಎಂದು ಸೂದ್ ಹೇಳಿದಿರು.












Click it and Unblock the Notifications