Get Updates
Get notified of breaking news, exclusive insights, and must-see stories!

ಡೆಸ್ಟಿನಿ, ಗುಡ್ ಬೈ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಟ!

ಹೈದರಾಬಾದ್, 20: ತೆಲುಗು ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದ ಹಿರಿಯ ನಟ ಕಾಗ ರಂಗನಾಥ್ ಅಲಿಯಾಸ್ ತಿರುಮಲ ಸುಂದರ ಶ್ರೀರಂಗನಾಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 66 ವರ್ಷ ವಯಸ್ಸಿನ ರಂಗನಾಥ್ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಷಿರಾಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದ್‌ನ ಕವಾಡಿಗೂಡದ ತಮ್ಮ ಮನೆಯಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾದ ರಂಗನಾಥ್ ಅವರು, ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ತಮ್ಮ ಆಪ್ತ ಗೆಳೆಯರೊಬ್ಬರಿಗೆ ಗುಡ್ ಬೈ ಎಂದು ಸಂದೇಶ ಕಳಿಸಿದ್ದಾರೆ. ಅಡುಗೆ ಮನೆಯಲ್ಲಿ 'destiny' ಎಂದು ಬರೆದಿದ್ದಾರೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಗನಾಥ್ ಅವರ ಮಕ್ಕಳ ಹೇಳಿಕೆ ಪ್ರಕಾರ ಅವರು ಮಾನಸಿಕ ಒತ್ತಡ ತಾಳಲಾರದೆ ಈ ನಿರ್ಧಾರ ಕೈಗೊಂಡರು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

Telugu character actor Ranganath Kills Self In Hyderabad

ಮಾನಸಿಕ ಒತ್ತಡ ಕಾರಣವೇ?: ರಂಗನಾಥ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ. ಆದರೆ, ಪತ್ನಿ ಸಾವಿನ ನಂತರ ಒಂಟಿಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮನೆಯವರು ಹೇಳಿದ್ದಾರೆ.ಆದರೆ, ರಂಗನಾಥ್ ಅವರ ಪತ್ನಿ 2009ರಲ್ಲೇ ಇಹಲೋಕ ತ್ಯಜಿಸಿದ್ದರು. ರಂಗನಾಥ್ ಇಷ್ಟು ವರ್ಷ ಅದೇ ನೋವಿನಲ್ಲಿ ಇದ್ದರು ಎಂದು ಹೇಗೆ ನಿರ್ಣಯಕ್ಕೆ ಬರಲು ಸಾಧ್ಯ ಎಂಬ ಪ್ರಶ್ನೆಯೂ ಎದ್ದಿದೆ.

ಘಟನೆ ನಡೆದ ದಿನ ಸನ್ಮಾನ ಕಾರ್ಯಕ್ರಮವೊಂದಕ್ಕೆ ತೆರಳಿ ಮನೆಗೆ ವಾಪಸ್ ಬಂದಿದ್ದರು. ನಂತರ ನಿರ್ಮಾಪಕರೊಬ್ಬರಿಗೆ ಗುಡ್ ಬೈ ಎಂದು ಮೆಸೇಜ್ ಮಾಡಿದ್ದಾರೆ. ರಂಗನಾಥ್ ಅವರ ಶವದ ಮರಣೋತ್ತರ ಪರೀಕ್ಷೆ ಉಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ವರದಿ ಬಂದ ನಂತರ ಇನ್ನಷ್ಟು ಮಾಹಿತಿ ತಿಳಿಯಲಿದೆ.

ಮದ್ರಾಸ್(ಈಗಿನ ಚೆನ್ನೈ) ನಲ್ಲಿ ಜನಿಸಿದ ರಂಗನಾಥ್ ಅವರು 1973ರಲ್ಲಿ 'ಚಂದನಾ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಪೌರಾಣಿಕ, ಧಾರ್ಮಿಕ, ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಿ ಜನಮನ್ನಣೆ ಗಳಿಸಿದ್ದರು. 300ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ರಂಗನಾಥ್ ಅವರ ಸಾವಿನ ಕಾರಣ ತಿಳಿಯಲು ಕುಟುಂಬ ವರ್ಗ ಬಯಸಿದೆ. ರಂಗನಾಥ್ ಅವರ ಸಾವಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+