ತೆಲುಗು ಚಿತ್ರರಂಗದ ಹಿರಿಯ ನಟಿಯ ಮಗಳು ಆತ್ಮಹತ್ಯೆಗೆ ಶರಣು
ಹೈದರಾಬಾದ್, ಜುಲೈ 28: ತೆಲುಗು ಚಿತ್ರರಂಗದ ಹಿರಿಯ ನಟಿ ಅನ್ನಪೂರ್ಣ ಅವರ ಮಗಳು ಕೀರ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಂಜಾರಾ ಹಿಲ್ಸ್‌ನ ಕೃಷ್ಣಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಕೀರ್ತಿ ಅವರು ಇಂದು ಬೆಳಿಗ್ಗೆ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಅನಾರೋಗ್ಯದ ಕಾರಣದಿಂದಲೇ ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಅನುಮಾನಿಸಲಾಗಿದೆ.

ಬೆಂಗಳೂರಿನ ಸಾಯಿಕೃಷ್ಣ ಎಂಬುವರೊಂದಿಗೆ ವಿವಾಹವಾಗಿದ್ದ ಕೀರ್ತಿ ಅವರಿಗೆ ಮಗಳಿದ್ದಳು. ಮಗಳಿಗೆ 4 ವರ್ಷವಾದರೂ ಮಾತು ಸರಿಯಾಗಿ ಬಾರದ ಕಾರಣ ಇದರಿಂದ ಮನನೊಂದಿದ್ದ ಕೀರ್ತಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳೆಯುತ್ತಾ-ಬೆಳೆಯುತ್ತಾ ಮಗಳಿಗೆ ಮಾತು ಬರುತ್ತದೆ ಎಂದು ತಾಯಿ ಅನ್ನಪೂರ್ಣ ಅವರು ಕೀರ್ತಿಗೆ ಧೈರ್ಯ ನೀಡಿದ್ದರು. ಅಲ್ಲದೆ ಮನೋವೈದ್ಯರಿಗೆ ತೋರಿಸಿ ಕೌನ್ಸಲಿಂಗ್ ಸಹ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬಂಜಾರಾಹಿಲ್ಸ್ ಪೊಲೀಸರು ಕೀರ್ತಿ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆ ಪತ್ರಕ್ಕಾಗಿಯೂ ಹುಡುಕಾಟ ನಡೆಸಿದ್ದಾರೆ.












Click it and Unblock the Notifications