ತೆಲಂಗಾಣದ ವ್ಯಕ್ತಿ ಪಾಸ್‌ಪೋರ್ಟ್‌ ಇಲ್ಲದೆ 16 ವರ್ಷದ ಬಳಿಕ ದುಬೈನಿಂದ ವಾಪಸ್

ಹೈದರಾಬಾದ್, ಸೆಪ್ಟೆಂಬರ್ 02: ತೆಲಂಗಾಣದ ವ್ಯಕ್ತಿ ಪಾಸ್‌ಪೋರ್ಟ್‌ ಇಲ್ಲದೆಯೇ 16 ವರ್ಷಗಳ ಬಳಿಕ ದುಬೈನಿಂದ ವಾಪಸಾಗಿದ್ದಾರೆ.

Recommended Video

      Sandalwood Drug Mafiaಗೆ ರಾಜಕೀಯ ನಂಟು ಇದೆ - HD Kumaraswamy | Oneindia Kannada

      ಅವರು ಕಳೆದ 16 ವರ್ಷಗಳಿಂದ ದುಬೈನಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ 29 ಲಕ್ಷ ರೂನಷ್ಟು ದಂಡ ವಿಧಿಸಲಾಗಿತ್ತು.

      ನೀಲ ಯಲ್ಲಯ್ಯ ಚಿಂತಮಾನಪಳ್ಳಿಯವರಾಗಿದ್ದು, 2004ರಲ್ಲಿ ಕೆಲಸಕ್ಕೆಂದು ದುಬೈಗೆ ಹೋಗಿದ್ದರು. ಬಳಿಕ ಕೆಲವು ಸನ್ನಿವೇಶಗಳು ಅವರನ್ನು ಅಲ್ಲಿಯೇ ಉಳಿದುಕೊಳ್ಳಬೇಕಾಯಿತು.

      Telangana Man Without Passport Returns Home From Dubai

      ಜೈನ್ ಸೇವಾ ಮಿಷನ್ ಸ್ವಯಂಸೇವಕರಾದ ರೂಪೇಶ್ ಮೆಹ್ತಾ ಎಂಬುವವರು ಅವರಿಗೆ ಸಹಾಯ ಮಾಡಿದ್ದಾರೆ. ದುಬೈನಲ್ಲಿರುವ ಭಾರತೀಯ ಕೌನ್ಸುಲೇಟ್‌ನಲ್ಲಿ ತಾತ್ಕಾಲಿಕ ಪಾಸ್‌ಪೋರ್ಟ್‌ ಪಡೆದು ಅವರನ್ನು ಕರೆತರಲಾಗಿದೆ.

      ಯಲ್ಲಯ್ಯ ಅವರ ಪತ್ನಿ ಒತ್ತಾಯದ ಮೇರೆಗೆ ಹೈರಾಬಾದ್ ಕಚೇರಿಯಲ್ಲಿ ಹಳೆಯ ಪಾಸ್‌ಪೋರ್ಟ್ ಪಡೆಯಲಾಯಿತು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಕರೆಸಿಕೊಳ್ಳಲಾಯಿತು.

      ಅವರ ವೀಸಾ ಅವಧಿ ಮುಗಿದು ಕೂಡ ಅಲ್ಲಿಯೇ ಇದ್ದ ಕಾರಣ ನಿತ್ಯ 500 ರೂ.ನಷ್ಟು ಇಲ್ಲಿಯವರೆಗೆ 29 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ದುಬೈ ಸರ್ಕಾರ ಆ ದಂಡವನ್ನು ಮನ್ನಾ ಮಾಡಿದೆ.

      ಅವರು ಸೋಮವಾರ ಸಂಜೆ ತೆಲಂಗಾಣವನ್ನು ತಲುಪಿದ್ದಾರೆ. ಅವರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಯಲ್ಲಯ್ಯ ಅವರು ದುಬೈಗೆ ಹೊರಡುವ ಸಂದರ್ಭದಲ್ಲಿ ಮಗಳು ಇನ್ನೂ ಚಿಕ್ಕವಳು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ. ಮಂಗಳವಾರ ಅವರು ತಮ್ಮ ಹಳ್ಳಿಯನ್ನು ಸೇರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+