ಛಿ, ಇದೇನಿದು? ರಾಜಕಾರಣಿಗಳ ಹೊಡೆದಾಟ ವಿಡಿಯೋದಲ್ಲಿ ಸೆರೆ!

Recommended Video

      ಫಲಿತಾಂಶದ ಪ್ರಮಾದಕ್ಕಾಗಿ ಹೊಡೆದಾಟ | Oneindia Kannada

      ಹೈದರಾಬಾದ್, ಮೇ 11: ತೆಲಂಗಾಣದಲ್ಲಿ ಇಂಡಟರ್ ಮೀಡಿಯೇಟ್ ಫಲಿತಾಂಶದಲ್ಲಾದ ಪ್ರಮಾದದ ಕುರಿತು ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ನ ಇಬ್ಬರು ನಾಯಕರು ಬಹಿರಂಗವಾಗಿಯೇ ಹೊಡೆದಾಟ ನಡೆಸಿದ ವಿಡಿಯೋವೊಂದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಕಾಂಗ್ರೆಸ್ ಮುಖಂಡರಾದ ವಿ. ಹನುಮಂತ ರಾವ್ ಮತ್ತು ನಾಗೇಶ್ ಮುಂದಿರಾಜ್ ಅವರು ಸಾರ್ವಜನಿಕವಾಗಿಯೇ ಕೈ ಕೈ ಮಿಸಲಾಯಿಸಿಕೊಂಡರು. ಇದಕ್ಕೆ ನೂರಾರು ಪ್ರತಿಭಟನಕಾರರು ಸಾಕ್ಷಿಯಾದರು. ಪ್ರತಿಭಟನಕಾರರ ನಡುವಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಶಿಯೋವನ್ನು ಸೆರೆ ಹಿಡಿದಿದ್ದು, ಸಾಮಾಜಿ ಮಾಧ್ಯಮಗಳಲ್ಲಿ, 'ಛಿ ಇದೇನಿದು?' ಎಂಬ ಪ್ರಶ್ನೆ ಎದ್ದಿದೆ.

      Telangana: A scuffle broke out between Congress leaders, video goes viral

      ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಇಂಟರ್ ಮೀಡಿಯೇಟ್ ಫಲಿತಾಂಶ ಪ್ರಕಟವಾಗಿತ್ತು. ಈ ಪಳಿತಾಂಶದಲ್ಲಿ 3.5 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿಯಾಗಿತ್ತು. ಆದರೆ ಫಲಿತಾಂಶದಲ್ಲಿ ಪ್ರಮಾದವಾಗಿದೆ ಎಂದು ದೂರಿ ಫಲಿತಾಮಶವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ತೆಲಂಗಾಣದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ವಿರೋಧ ಪಕ್ಷಗಳೂ ಪ್ರತಿಭಟನೆಗೆ ಇಳಿದಿದ್ದವು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ನಡುವಲ್ಲೇ ಮಾರಾಮಾರಿ ಏರ್ಪಟ್ಟಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+