ಆಂಧ್ರದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ ಬದುಕಿ ಬರಲಿಲ್ಲ
ಹೈದ್ರಾಬಾದ್, ನವೆಂಬರ್, 29: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ. ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿದ ನ್ಡಿಆರ್ಎಫ್ ತಂಡ ಬಾಲಕನ ಶವ ಹೊರತೆಗೆದಿದೆ. ಬಾಲಕನನ್ನು ಬದುಕಿಸುವ ಹೋರಾಟ ಸಫಲವಾಗಲಿಲ್ಲ.[ಆಂಧ್ರದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 1 ವರ್ಷದ ಬಾಲಕ]

ಮೇದಕ್ ಜಿಲ್ಲೆಯ ಬೊಮ್ಮರೆಡ್ಡಿಗೂಡಂ ಗ್ರಾಮದಲ್ಲಿ ದುರಂತ ನಡೆದಿದ್ದು ರಾಕೇಶ್ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜ್ ರತ್ನಮ್ ತಿಳಿಸಿದರು.[ಕೊಳೆವೆ ಬಾವಿ ದುರಂತ ಏಕೆ ತಡೆಯಲಾಗುತ್ತಿಲ್ಲ?]
ಕೊಳವೆ ಬಾವಿಯೊಳಗೆ ಆಮ್ಲಜನಕ ಬಿಡಲಾಗಿತ್ತು ಜತೆಗೆ ರಾತ್ರಿಯಿಡೀ ಬಾಲಕನನ್ನು ಬದುಕಿಸಲು ನಿರಂತರ ಯತ್ನ ನಡೆಸಲಾಯಿತು.
ಕೃಷಿ ಉದ್ದೇಶಕ್ಕೆ ಸ್ಥಳೀಯರೊಬ್ಬರು ಕೊಳವೆ ಬಾವಿ ತೆರೆಸಿದ್ದರು. 150 ಅಡಿ ಆಳದ ಕೊಳವೆ ಬಾವಿ ನೀರು ಬರದ ಕಾರಣ ತೆರೆದೇ ಇತ್ತು. ಇದೀಗ ಬಾಲಕನ ಪ್ರಾಣವನ್ನು ಬಲಿಪಡೆದಿದೆ.












Click it and Unblock the Notifications