ದೇವರಕೊಂಡ ಮನವೊಲಿಕೆಗೆ ಸುಧಾಮೂರ್ತಿ ಸಹಿ ನಕಲು, ಟೆಕ್ಕಿ ಬಂಧನ
ಹೈದರಾಬಾದ್, ಮಾರ್ಚ್ 16: ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಮನವೊಲಿಸುವ ಸಲುವಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಸಹಿ ನಕಲು ಮಾಡಿರುವ ಆರೋಪದಲ್ಲಿ ಹೈದರಾಬಾದ್ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Recommended Video
ತನ್ನ ನೂತನ ಮೊಬೈಲ್ ಆಪ್‌ಗೆ ರಾಯಾಭಾರಿಯಾಗಿ ಎಂದು ವಿಜಯ್ ದೇವರಕೊಂಡ ಅವರನ್ನು ಮನವೊಲಿಸಲು ಪತ್ರ ಬರೆದಿದ್ದಾನೆ. ಅದರಲ್ಲಿ ಸುಧಾಮೂರ್ತಿ ಅವರ ಮನವಿಯೂ ಇರುವಂತೆ ಉಲ್ಲೇಖಿಸಿ ಅವರ ಸಹಿ ನಕಲು ಮಾಡಿದ್ದಾರೆ.
ಸುಧಾಮೂರ್ತಿ ಅವರ ಸಹಿ ನೋಡಿದ ವಿಜಯ್ ದೇವರಕೊಂಡ ಅವರ ಸಿಬ್ಬಂದಿ ವರ್ಗದವರು, ಆತನ ಮೇಲೆ ಅನುಮಾನದಿಂದ ಸುಧಾಮೂರ್ತಿ ಕಚೇರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಬಳಿಕ, ಇದೇ ವಿಚಾರವಾಗಿ ಸುಧಾಮೂರ್ತಿ ಅವರು ಬೆಂಗಳೂರಿನಲ್ಲಿ ದೂರು ನೀಡಿದ್ದರು.

ಈ ದೂರಿನ ಅನ್ವಯ ಹೈದರಾಬಾದ್ ಪೊಲೀಸರು ಸಾಯಿ ಕೃಷ್ಣ ಎಂಬ ಟೆಕ್ಕಿಯನ್ನು ಬಂಧಿಸಿದ್ದಾರೆ. ಸುಧಾಮೂರ್ತಿ ಅವರ ಹೆಸರು ಬಳಸಿದೆ ದೇವರಕೊಂಡ ಅವರನ್ನು ರಾಯಭಾರಿಯನ್ನಾಗಿಸಬಹುದು ಎಂಬ ಕಾರಣಕ್ಕೆ ನಕಲು ಮಾಡಿದೆ ಎಂದು ಒಪ್ಪಿಕೊಂಡಿದ್ದಾನಂತೆ.
ಇನ್ನು ಸುಧಾಮೂರ್ತಿ ಅವರಿಗೆ ವಿಜಯ್ ದೇವರಕೊಂಡ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಇದೆ. ದೇವರಕೊಂಡ ಚಿತ್ರಗಳ ಬಗ್ಗೆ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಹುಶಃ ಈ ಆತ್ಮೀಯತೆಯನ್ನು ಈ ಟೆಕ್ಕಿ ದುರುಪಯೋಗ ಪಡಿಸಿಕೊಳ್ಳಲು ನೋಡಿದ್ದಾನೆ.












Click it and Unblock the Notifications