ಅಂಧ ಮಕ್ಕಳನ್ನು ಬೆತ್ತದಿಂದ ನಿರ್ದಯವಾಗಿ ಬಾರಿಸಿದ ಶಿಕ್ಷಕ

Teacher mercilessly beats up blind students
ಹೈದರಾಬಾದ್, ಜು. 21 : ಇದೊಂದು ದೃಶ್ಯವನ್ನು ಕಣ್ಣು ಮಂಜಾಗಿಸಿಕೊಳ್ಳದೆ ನೋಡಲು ಸಾಧ್ಯವೇ ಇಲ್ಲ. ತಪ್ಪಾಯ್ತು ಕ್ಷಮಿಸಿ ಹೊಡೀಬೇಡಿ ಎಂದು ಗೋಗರೆಯುತ್ತಿದ್ದ ದೃಷ್ಟಿಮಾಂದ್ಯ ಮಕ್ಕಳನ್ನು ಬೆತ್ತದಿಂದ ಆ ಶಿಕ್ಷಕ ನಿರ್ದಯವಾಗಿ ಬಾರಿಸುತ್ತಿದ್ದರೆ ಮಾನವೀಯತೆಗೆ ಬೆಲೆಯೇ ಇಲ್ಲವಾ ಎಂದು ಅಂದುಕೊಂಡರೂ ಅಚ್ಚರಿಯಿಲ್ಲ.

ಹತ್ತು ವರ್ಷಕ್ಕಿಂತ ಕೆಳಗಿನ ಮೂವರು ಅಂಧ ಮಕ್ಕಳ ಬೆನ್ನಿನ ಮೇಲೆ ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ ವ್ಯಕ್ತಿ ಹಿಗ್ಗಾಮುಗ್ಗಾ ಬಾರಿಸುತ್ತಿರುವ ಮೂರು ನಿಮಿಷಗಳ ವಿಡಿಯೋ ಹೃದಯ ಹಿಂಡುವಂತಿದೆ. ಈ ವಿಡಿಯೋ ತುಣುಕನ್ನು ಮೊಬೈಲ್ ಬಳಸಿ ಚಿತ್ರೀಕರಿಸಲಾಗಿದೆ.

ಆ ಬಾಲಕನನ್ನು ಥಳಿಸಲು ಅನುಕೂಲವಾಗಲೆಂದು ಮತ್ತೊಬ್ಬ ವ್ಯಕ್ತಿ ಬಾಲಕನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಕಪ್ಪು ಕನ್ನಡಕ ಧರಿಸಿದ್ದ ವ್ಯಕ್ತಿ ಬೆತ್ತ ಹಿಡಿದುಕೊಂಡು ಬಾರಿಸುತ್ತಿರುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡುತ್ತದೆ. ಈ ರೀತಿ ನಿರ್ದಯವಾಗಿ ಥಳಿಸಲು ಕಾರಣವಾದರೂ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.


ಬಾಲಕನ ಶರ್ಟನ್ನು ಹಿಡಿದು ಎಳೆದಾಡಿದ (ಅ)ಶಿಕ್ಷಕ ಆತನ ತಲೆಯನ್ನು ಗೋಡೆಗೆ ಘಟ್ಟಿಸಿದ್ದಾನೆ. ನೋವನ್ನು ತಡೆಯಲಾರದೆ ಬಾಲಕ ಬೆತ್ತವನ್ನು ಹಿಡಿದು, ಹೊಡೆಯಬೇಡಿರೆಂದು ಗೋಗರೆಯುತ್ತಿದ್ದರೂ ಕೇಳದ ಶಿಕ್ಷಕ ಬೆತ್ತವನ್ನು ಕಸಿದುಕೊಂಡು ಮನಸೋಯಿಚ್ಛೆ ಹೊಡೆದಿದ್ದಾನೆ. [ವಿಬ್ ಗಯಾರ್ ಪ್ರಕರಣ : ಆರೋಪಿ ಮುಸ್ತಫಾ ಬಂಧನ]

ಕಾಕಿನಾಡದ ಪೊಲೀಸರ ಪ್ರಕಾರ, ಈ ಘಟನೆ ಗ್ರೀನ್‌ಫೀಲ್ಡ್ ವಸತಿ ಶಾಲೆಯಲ್ಲಿ ನಡೆದಿದ್ದು, ಮಕ್ಕಳನ್ನು ಮನಬಂದಂತೆ ಥಳಿಸಿದ ವ್ಯಕ್ತಿ ಮತ್ತು ಶಾಲೆಯ ಪ್ರಿನ್ಸಿಪಾಲ್‌ರನ್ನು ಬಂಧಿಸಲಾಗಿದೆ. ರಾಜ್ಯದ ಮಕ್ಕಳ ಹಕ್ಕು ಸಮಿತಿ ಈ ಘಟನೆಯ ತನಿಖೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದೆ. ವಸತಿ ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಶಿಕ್ಷಕನನ್ನು ಥಳಿಸಿದ ಪೋಷಕರು : ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಶಾಲೆಗೆ ನುಗ್ಗಿದ ಮಕ್ಕಳ ಪೋಷಕರು ಶಿಕ್ಷಕನನ್ನು ಮತ್ತು ಮ್ಯಾನೇಜರನ್ನು ಹಿಡಿದು ಯದ್ವಾತದ್ವಾ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+