ಶಾಲೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಲಕಿ

ಹೈದ್ರಾಬಾದ್, ಡಿಸೆಂಬರ್. 01: ಹೈದ್ರಾಬಾದ್ ಸಮೀಪದ ಮಾಧಾಪುರದಲ್ಲಿ 13 ವರ್ಷದ 9ನೇ ತರಗತಿಯ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಹೌದು..ಇಂಥದ್ದೊಂದು ಆಘಾತಕಾರಿ ಸುದ್ದಿ ಇದೀಗ ಬಹಿರಂಗವಾಗಿದೆ.

ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಶಾಲೆಯ ಶಿಕ್ಷಕರಿಗೆ ಮತ್ತು ಬಾಲಕಿ ಪಾಲಕರಿಗೆ ಆಕೆ ಗರ್ಭಿಣಿ ಎಂಬುದೇ ತಿಳಿದಿಲ್ಲ. ಸದ್ಯ ಬಾಲಕಿ ಮತ್ತು ಮಗು ಇಬ್ಬರು ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ.[ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ: ವಿಡಿಯೋ]

rape

ಶೌಚಾಲಯದಲ್ಲೇ ಜನ್ಮ ನೀಡಿದಳು!
ತರಗತಿ ನಡೆಯುತ್ತಿದ್ದಾಗ ಬಾಲಕಿಗೆ ಹೆರಿಗೆ ನೋವು ಆರಂಭವಾಗಿದೆ. ಹೊಟ್ಟೆ ನೋವು ಬರುತ್ತಿದೆ ಎಂದು ವಿದ್ಯಾರ್ಥಿನಿಯು ಶಿಕ್ಷಕಿಯಲ್ಲಿ ಹೇಳಿಕೊಂಡಾಗ ಶಿಕ್ಷಕಿ ಶೌಚಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ.[ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಒಳಗಾದ ಮಗು]

ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆಯನ್ನು ಶಿಕ್ಷಕರು ಬಾಲಕಿಯ ಪಾಲಕರಿಗೆ ತಿಳಿಸಿದ್ದಾರೆ. ಪತ್ರಿಕೆ ಒಂದು ವರದಿ ಮಾಡಿರುವಂತೆ ಬಾಲಕಿ ತಾಯಿ ಬದುಕಿಲ್ಲ. ಆಕೆ ತಂದೆಯಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ಬಾಲಕಿಯೊಂದಿಗೆ ಸದಾ ಓಡಾಡಿಕೊಂಡಿದ್ದ ದಿನೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಧ್ವನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+