ಮದುವೆ ದೋಖಾ: ಪತ್ನಿ- ಅತ್ತೆಯ ಕೊಂದ ಟೆಕ್ಕಿ

ಸಿಕಂದರಾಬಾದಿನಲ್ಲಿ ಬುಧವಾರ ರಾತ್ರಿ ಈ ಡಬಲ್ ಮರ್ಡರ್ ನಡೆದಿದೆ. 37 ವರ್ಷದ ಸರ್ವಾನಂದ ಆರೋಪಿ ಟೆಕ್ಕಿ. ಸರ್ವಾನಂದ, ಗುರುವಾರ ಬೆಳಗ್ಗೆ ತನ್ನ ಅಂಕಲ್ ಜತೆ ತೆರಳಿದ ಇಲ್ಲಿನ ಮೋಂಡಾ ಮಾರುಕಟ್ಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪತ್ನಿ ಪದ್ಮಪ್ರಿಯಾ ಮತ್ತು ಅತ್ತೆ ಪರಮೇಶ್ವರಿಯನ್ನು ಅಂಕಲ್ ಜತೆಗೂಡಿ ಸರ್ವಾನಂದ ಹತ್ಯೆ ಮಾಡಿದ್ದಾನೆ.
2011ರಲ್ಲಿ ಬೆಂಗಳೂರು ಮೂಲದ ಪದ್ಮಪ್ರಿಯಾ ಮತ್ತು ಸರ್ವಾನಂದ ಅವರ ಮದುವೆಯಾಗಿತ್ತು. ಆದರೆ ಪದ್ಮಪ್ರಿಯಾ 2007ರಲ್ಲಿಯೇ ಮದುವೆಯಾಗಿದ್ದು, ಮೊದಲ ಪತಿಯಿಂದ ವಿಚ್ಛೇದನವನ್ನೂ ಪಡೆದಿದ್ದರು.
ತಡವಾಗಿ ಈ ವಿಷಯ ಬೆಳಕಿಗೆ ಬಂದ ನಂತರ ಪದ್ಮಪ್ರಿಯಾ ಮತ್ತು ಸರ್ವಾನಂದ ಇಬ್ಬರೂ ಬೆಂಗಳೂರು ನ್ಯಾಯಾಲಯದ ಮೊರೆಹೋಗಿದ್ದರು. ಕೋರ್ಟ್ ತೀರ್ಪಿನಂತೆ ಪದ್ಮಪ್ರಿಯಾ ತನ್ನ ತಾಯಿ ಪರಮೇಶ್ವರಿ ಜತೆ ಪ್ರತ್ಯೇಕವಾಗಿ ಜೀವನ ನಡೆಸಲಾರಮಭಿಸಿದ್ದರು.
ಈ ಮಧ್ಯೆ, ಅಮ್ಮ-ಮಗಳು ತನ್ನ ಮೇಲೆ ಸವಾರಿ ಮಾಡತೊಡಗಿದರು. ತನಗೆ ಸಾಕಷ್ಟು ಕಿರುಕುಳ ನೀಡತೊಡಗಿದರು. ಅನ್ಯ ಮಾರ್ಗವಿಲ್ಲದೆ ಅವರಿಬ್ಬರಿಂದ ಮುಕ್ತಿ ಹೊಂದಲು ಅವರನ್ನು ಸಾಯಿಸಿಬಿಟ್ಟೆ ಎಂದು ಟೆಕ್ಕಿ ಸರ್ವಾನಂದ ತನ್ನ ದುರಂತ ಕಥೆಯನ್ನು ಹೇಳಿಕೊಂಡಿದ್ದಾನೆ.












Click it and Unblock the Notifications