• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಕಲ್ಯಾಣಕ್ಕಾಗಿ ಅಖಂಡ ಭಾರತವನ್ನು ಮತ್ತೆ ಒಗ್ಗೂಡಿಸಬೇಕು:ಮೋಹನ್ ಭಾಗವತ್

|

ಹೈದರಾಬಾದ್,ಫೆಬ್ರವರಿ 25: ವಿಶ್ವದ ಕಲ್ಯಾಣಕ್ಕಾಗಿ ಮತ್ತೆ ಅಖಂಡ ಭಾರತವನ್ನು ಒಗ್ಗೂಡಿಸಲೇಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇದಕ್ಕಾಗಿ ರಾಷ್ಟ್ರಪ್ರೇಮ ಮೊದಲು ಜಾಗೃತವಾಗಬೇಕು, ಅಖಂಡ ಭಾರತ ಒಗ್ಗೂಡುವಿಕೆಯು ಬಲ ಪ್ರಯೋಗದಿಂದ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

RSS ಕ್ಯಾನ್ಸರ್ ಇದ್ದ ಹಾಗೆ, ರಾಮ ಮಂದಿರ ನಿರ್ಮಾಣಕ್ಕೆ ನಯಾ ಪೈಸೆ ಕೊಡಬೇಡಿ RSS ಕ್ಯಾನ್ಸರ್ ಇದ್ದ ಹಾಗೆ, ರಾಮ ಮಂದಿರ ನಿರ್ಮಾಣಕ್ಕೆ ನಯಾ ಪೈಸೆ ಕೊಡಬೇಡಿ

ಭಾರತದಿಂದ ಪ್ರತ್ಯೇಕವಾಗಿ ಹೋದವರನ್ನು ಒಟ್ಟುಗೂಡಿಸುವುದು ಎಂದರೆ ಅವರನ್ನು ಮಟ್ಟ ಹಾಕುವುದು ಅಥವಾ ಅವರನ್ನು ತುಳಿಯುವುದು ಎಂದು ಅರ್ಥವಲ್ಲ, ಏಕೆಂದರೆ ಎಂಥದ್ದೇ ಸವಾಲುಗಳನ್ನು ಮೆಟ್ಟಿನಿಲ್ಲುವ ಧಾರಣ ಶಕ್ತಿ ಭಾರತಕ್ಕಿದೆ. ಕಠಿಣ ಸಮಸ್ಯೆಗಳನ್ನು ನಿವಾರಿಸಲುಇಂದು ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ.

ದೇಶ ವಿಭಜನೆಗೂ ಮೊದಲು ವಿಭಜನೆ ಸಾಧ್ಯವೇ ಎಂದು ಕೆಲವರು ಪ್ರರ್ಶನಿಸಿದ್ದರು, ಅನುಮಾನವಿತ್ತು, ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಮುಂದೆ ಯಾರಾದರೂ ಪಾಕಿಸ್ತಾನ ಉದಯಿಸುತ್ತದೆಯೇ ಎನ್ನುವ ಪ್ರಶ್ನೆ ಮುಂದಿಟ್ಟರೆ ಅದು ಮೂರ್ಖರ ಕನಸು ಎಂಬಂತೆ ಉತ್ತರ ನೀಡುತ್ತಿದ್ದರು.

ದೇಶದಿಂದ ವಿಭಜನೆಗೊಂಡು ದೀರ್ಘ ಸಮಯದಿಂದ ಹೊರಗುಳಿದಿರುವ ಪಾಕಿಸ್ತಾನದಂತಹ ದೇಶಗಳು ಇಂದು ಸಂಕಷ್ಟದಲ್ಲಿವೆ. ಈ ಎಲ್ಲಾ ದೇಶಗಳಿಗೂ ಇನ್ನು ಮುಂದೆ ಅಖಂಡ ಭಾರತದ ಅಗತ್ಯ ಹೆಚ್ಚಿದೆ ಎಂದರು.

ಗಾಂಧಾರ ಅಫ್ಘಾನಿಸ್ತಾನವಾಯಿತು, ಪಾಕಿಸ್ತಾನದ ಉದಯವೂ ಆಗಿ ಹೋಯಿತು. ದೇಶದಿಂದ ವಿಭಜನೆಯಾಗಿ ಹೋದವರು ಸಂತೋಷವನ್ನಷ್ಟೇ ಅಲ್ಲ ತಮ್ಮತನವನ್ನು ತ್ಯಾಗ ಮಾಡಿದ್ದರು ಎಂದು ಹೇಳಿದರು.

English summary
Advocating the need for 'Akhand Bharat' (undivided India), RSS chief Mohan Bhagwat on Thursday said countries such as Pakistan which broke away from India are now in distress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X