ತಿರುಪತಿಯಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ನಿವೃತ್ತ ಜಡ್ಜ್ ಹಾಗೂ ಪತ್ನಿ ಆತ್ಮಹತ್ಯೆ
ತಿರುಪತಿ, ಅಕ್ಟೋಬರ್ 6: ಚಲಿಸುತ್ತಿದ್ದ ರೈಲಿನ ಮುಂದೆ ಬಿದ್ದು ಆಂಧ್ರಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.
ತಿರುಪತಿ ನಿವಾಸಿಗಳಾಗಿದ್ದ ನಿವೃತ್ತ ನ್ಯಾಯಾಧೀಶರಾದ ಪಿ. ಸುಧಾಕರ್ (65) ಅವರ ಮೃತದೇಹ ತಿರುಪತಿ- ರೆನಿಗುಂಟ ಮಾರ್ಗದ ರೈಲ್ವೆ ಟ್ರ್ಯಾಕ್ ನಲ್ಲಿ ಪತ್ತೆಯಾಗಿತ್ತು. ಅನಾರೋಗ್ಯವೇ ಆತ್ಮಹತ್ಯೆಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇನ್ನು ಪತಿಯ ಆತ್ಮಹತ್ಯೆಯ ವಿಷಯ ಕೇಳಿದ ಪತ್ನಿ ಪಿ. ವರಲಕ್ಷ್ಮಿ(56) ಕೂಡ ಅದೇ ಸ್ಥಳದಲ್ಲಿ ಮತ್ತೊಂದು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications