ಎನ್ ಕೌಂಟರ್ ನಲ್ಲಿ ನಕ್ಸಲ್ ನಾಯಕ ನಯೀಮುದ್ದೀನ್ ಸಾವು

By: ವಿಕಾಸ್ ನಂಜಪ್ಪ
Subscribe to Oneindia Kannada

ಹೈದರಾಬಾದ್, ಆಗಸ್ಟ್ 08: ಸುಮಾರು 20ಕ್ಕೂ ಅಧಿಕ ಕೊಲೆ ಪ್ರಕರಣದ ಆರೋಪಿಯಾಗಿ 15 ವರ್ಷಗಳ ಕಾಲ ಪೊಲೀಸರ ಕಣ್ತಪ್ಪಿಸಿ ಅಲೆಯುತ್ತಿದ್ದ ನಕ್ಸಲ್ ನಾಯಕ ಮೊಹಮ್ಮದ್ ನಯೀಮುದ್ದೀನ್ ಹತ್ಯೆಯಾಗಿದೆ.

ನಕ್ಸಲ ನಿಗ್ರಹ ಪಡೆ ಸೋಮವಾರದಂದು ಶಾದ್ ನಗರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಯೀಮುದ್ದೀನ್ ರನ್ನು ಕೊಂದು ಹಾಕಿದೆ.[ಜಾರ್ಖಂಡ್‌ನಲ್ಲಿ 12 ಮಾವೋವಾದಿಗಳ ಹತ್ಯೆ]

ಐಪಿಎಸ್ ಆಫೀಸರ್ ಕೆಎಸ್ ವ್ಯಾಸ್ ಹತ್ಯೆ ಸೇರಿದಂತೆ ಅನೇಕ ಪ್ರಕರಣದ ಆರೋಪಿಯಾಗಿರುವ ನಯೀಮುದ್ದೀನ್ ಸದ್ಯ ಹೈದರಾಬಾದಿನಿಂದ 50 ಕಿ.ಮೀ ದೂರದಲ್ಲಿರುವ ಮೆಹಬೂಬ್ ನಗರದ ಬಳಿಯ ಶಾದ್ ನಗರದ ಮನೆಯೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. [ಹೈದರಾಬಾದ್‌ನಲ್ಲಿ 11 ಐಎಸ್‌ಐಎಸ್ ಉಗ್ರರ ಬಂಧನ]

ಸೋಮವಾರ ಬೆಳಗ್ಗೆ 8.30 ರ ಸುಮಾರಿಗೆ ಹಠಾತ್ ದಾಳಿ ನಡೆಸಿದ ನಕ್ಸಲ ನಿಗ್ರಹ ಪಡೆ ಮೇಲೆ ನಯೀಮುದೀನ್ ಕೂಡಾ ಪ್ರತಿದಾಳಿ ನಡೆಸಿದ್ದ. ಆದರೆ, ಕೆಲ ನಿಮಿಷಗಳಲ್ಲೇ ನಯೀಮುದ್ದೀನ್ ಕೊಂದು ಹಾಕುವಲ್ಲಿ ನಕ್ಸಲ್ ನಿಗ್ರಹ ಪಡೆ ಯೋಧರು ಯಶಸ್ವಿಯಾಗಿದ್ದಾರೆ.

ನಕ್ಸಲ್ ನಾಯಕ ಮೊಹಮ್ಮದ್ ನಯೀಮುದ್ದೀನ್

ನಕ್ಸಲ್ ನಾಯಕ ಮೊಹಮ್ಮದ್ ನಯೀಮುದ್ದೀನ್

ಸುಮಾರು 20ಕ್ಕೂ ಅಧಿಕ ಕೊಲೆ ಪ್ರಕರಣದ ಆರೋಪಿಯಾಗಿ 15 ವರ್ಷಗಳ ಕಾಲ ಪೊಲೀಸರ ಕಣ್ತಪ್ಪಿಸಿ ಅಲೆಯುತ್ತಿದ್ದ ನಕ್ಸಲ್ ನಾಯಕ ಮೊಹಮ್ಮದ್ ನಯೀಮುದ್ದೀನ್ ಹತ್ಯೆಯಾಗಿದೆ.

2007ರಲ್ಲಿ ನಯೀಮ್ ನನ್ನು ಪೊಲೀಸರು ಬಂಧಿಸಿದ್ದರು

2007ರಲ್ಲಿ ನಯೀಮ್ ನನ್ನು ಪೊಲೀಸರು ಬಂಧಿಸಿದ್ದರು

2007ರಲ್ಲಿ ನಯೀಮ್ ನನ್ನು ಪೊಲೀಸರು ಬಂಧಿಸಿದ್ದರು. ಕೋರ್ಟಿಗೆ ಹಾಜರು ಪಡಿಸುವಾಗ ನಯೀಮ್ ತಪ್ಪಿಸಿಕೊಂಡಿದ್ದ. ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಲ್ಲದೆ, ಹೈದರಾಬಾದಿನ ರಿಯಲ್ ಎಸ್ಟೇಟ್ ದಂಧೆಯಲ್ಲೂ ಕೈಯಾಡಿಸಿದ್ದ.

ನಲ್ಗೊಂಡ ಮೂಲದ ನಯೀಮ್

ನಲ್ಗೊಂಡ ಮೂಲದ ನಯೀಮ್

ನಲ್ಗೊಂಡ ಮೂಲದ ನಯೀಮ್ ನನ್ನು ಹಲವು ಬಾರಿ ಇನ್ಫಾರ್ಮರ್ ಆಗಿ ಬಳಸಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ಇದೆ. ನಯೀಮ್ ನೆರವಿನಿಂದ ಸೊಹ್ರಾಬುದ್ದೀನ್ ಶೇಖ್ ನಂಥ ಕ್ರಿಮಿನಲ್ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿತ್ತು.

ಉಗ್ರ ಸಂಘಟನೆಗಳ ಮೂಲಕ ಕಾರ್ಯಾಚರಣೆ

ಉಗ್ರ ಸಂಘಟನೆಗಳ ಮೂಲಕ ಕಾರ್ಯಾಚರಣೆ

ನಲ್ಲಮಲ್ಲ ಕೋಬ್ರಾಸ್, ಕಾಕಾತೀಯ ಕೋಬ್ರಾಸ್ ಹೆಸರಿನ ಉಗ್ರ ಸಂಘಟನೆಗಳ ಮೂಲಕ ನಯೀಮ್ ಕಾರ್ಯಾಚರಣೆ ನಡೆಸುತ್ತಿದ್ದ.

ಗಾಳಿಸುದ್ದಿ ಹಬ್ಬಿಸಿದ್ದ ನಯೀಮ್

ಗಾಳಿಸುದ್ದಿ ಹಬ್ಬಿಸಿದ್ದ ನಯೀಮ್

2011ರಲ್ಲಿ ಪ್ಯಾರಲೀಸಿಸ್ ಗೆ ತುತ್ತಾಗಿ ನಯೀಮ್ ಸಾವನ್ನಪ್ಪಿದ್ದ ಸುದ್ದಿ ಬಂದಿತ್ತು. ಕೇರಳದಲ್ಲಿ ಈ ಕಾಯಿಲೆಗಾಗಿ ಚಿಕಿತ್ಸೆ ಕೂಡಾ ಪಡೆದಿದ್ದ ಮಾಹಿತಿ ಇತ್ತು. ಆದರೆ, ಇದೊಂದು ಗಾಳಿಸುದ್ದಿ ಎಂದು ತಿಳಿಯಲು ಹೆಚ್ಚು ಕಾಲ ಹಿಡಿಯಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Naxal leader, identified as Mohammad Nayeemuddin, has been killed in an encounter in Shadnagar on Monday. Nayeemuddin was a criminal wanted in 20 murder cases. He was also involved in the murder of IPS officer KS Vyas.
Please Wait while comments are loading...