ನಟ ರವಿತೇಜ ಅವರ ಸೋದರ ಭೀಕರ ಅಪಘಾತದಲ್ಲಿ ಸಾವು

ಹೈದರಾಬಾದ್, ಜೂನ್ 25: ನಟ ರವಿತೇಜ ಅವರ ಕಿರಿಯ ಸೋದರ ಭರತ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ.
ಹೈದರಾಬಾದಿನಲ್ಲಿ

ಕಳೆದ ರಾತ್ರಿಯಲ್ಲಿ ಹೈದರಾಬಾದಿನ ಷಂಶಾಬಾದ್ ಮಂಡಲದ ಕೊತ್ವಾಲಗುಡದ ಸಮೀಪ ಈ ಅಪಘಾತ ಸಂಭವಿಸಿದೆ. ಹೈದರಾಬಾದಿನಿಂದ 50 ಕಿ.ಮೀ ದೂರದಲ್ಲಿದೆ. ಹೊರ ವರ್ತುಲ ರಸ್ತೆಯಲ್ಲಿ ಅತಿ ವೇಗದಲ್ಲಿ ಬಂದ ಕಾರು, ನಿಂತಿದ್ದ ಲಾರಿಗೆ ಗುದ್ದಿದೆ.

Ravi Teja's Brother Dies in Car Accident

ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರೂ ಭರತ್ ಅವರ ಪ್ರಾಣ ರಕ್ಷಣೆ ಸಾಧ್ಯವಾಗಲಿಲ್ಲ. ಭರತ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಂತರ ಭರತ್ ಅವರ ಶವವನ್ನು ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದರು ಎನ್ನಲಾಗಿದೆ. ಆದರೆ, ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.

46 ವರ್ಷ ವಯಸ್ಸಿನ ಭರತ್ ಅವರು ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಕೂಡಾ ವೇಗವಾಗಿ ವಾಹನ ಚಾಲನೆ, ಮದ್ಯಪಾನ ಮಾಡಿ ಕಾರು ಚಾಲನೆ ಪ್ರಕರಣದಲ್ಲಿ ಸಿಲುಕಿದ್ದರು.

ಹಿಂದೊಮ್ಮೆ ಡ್ರಗ್ಸ್ ಸೇವನೆ ಆರೋಪದಲ್ಲಿ ಭರತ್ ಅವರನ್ನು ಮಾದಾಪುರ್ ಪೊಲೀಸರು ಬಂಧಿಸಲಾಗಿತ್ತು. ಸ್ಮಗ್ಲಿಂಗ್ ಆರೋಪಗಳಲ್ಲೂ ಅವರು ಭಾಗಿಯಾಗಿದ್ದರು ಎಂಬ ಆರೋಪಗಳೂ ಭರತ್ ಮೇಲಿತ್ತು.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಭರತ್ ನನ್ನು ಪೊಲೀಸರು ತಡೆದು ವಿಚಾರಿಸಿದಾಗ ಅವರ ಮೇಲೆ ಕೈ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆದಿದ್ದರು. ಈ ಹಿಂದೆ ತಿರುಮಲ ತಿರುಪತಿಯಲ್ಲಿ ಧೂಮಪಾನ ಮಾಡಿ ದಂಡತೆತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+