ಹೈದರಾಬಾದಿನಲ್ಲಿ ಪತ್ತೆಯಾಯ್ತು ಹಳದಿ ಕಂಠದ ಅಪರೂಪದ ಹಾವು
ಹೈದರಾಬಾದ್, ಆಗಸ್ಟ್ 3: ಹೈದರಾಬಾದಿನ ನೆಹರೂ ಜೂಲಾಜಿಕಲ್ ಪಾರ್ಕಿನಲ್ಲಿ ಅಪರೂಪದ ಪ್ರಭೇದದ ಹಾವೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಹಳದಿಬಣ್ಣದ ಕೊರಳಿನ ಈ ಹಾವು 46 ಸೆಂ.ಮೀ.ಉದ್ದವಿದ್ದು, ಮೈಯೆಲ್ಲ ಚಾಕೋಲೇಟ್ ಬಣ್ಣದ್ದಾಗಿದೆ. ಲೈಕೋಡನ್ ಫ್ಲಾವಿಕೊಲಿಸ್ ಎಂಬುದು ಇದರ ಪ್ರಾಣಿಶಾಸ್ತ್ರೀಯ ಹೆಸರು.
ಹಳದಿ ಬಣ್ಣದ ಕೊರಳಿನ ಈ ಹಾವು 2007 ರಲ್ಲಿ ತಮಿಳುನಾಡಿನ ಪಶ್ಚಿಮ ಘಟ್ಟದ ಅಣೈಕಟ್ಟಿ ಮೀಸಲು ಅರಣ್ಯದಲ್ಲೂ ಕಂಡುಬಂದಿತ್ತು. 2014 ರಲ್ಲಿ ತಿರುಪತಿ ಬೆಟ್ಟದಲ್ಲೂ ಕಂಡುಬಂದಿತ್ತು.

ಇದೀಗ ಹೈದರಾಬಾದಿನ ನೆಹರೂ ಜೂಲಾಜಿಕಲ್ ಪಾರ್ಕಿನಲ್ಲಿ ಕಾಣಿಸಿಕೊಂಡಿರುವ ಈ ಹಾವಿನ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದೆ.












Click it and Unblock the Notifications