ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಕೋಟಿ ವೆಚ್ಚದಲ್ಲಿ 'ಕಾಮನಬಿಲ್ಲು' ಆಸ್ಪತ್ರೆ

By Mahesh
|
Google Oneindia Kannada News

ಹೈದರಾಬಾದ್, ನ.15: ಇಲ್ಲಿನ್ ರೈನ್ ಬೋ ಆಸ್ಪತ್ರೆ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ತನ್ನ ಎರಡು ಶಾಖೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ತಾಯಿ ಮತ್ತು ಮಕ್ಕಳ ಆರೈಕೆಗೆ ಹೆಸರುವಾಸಿಯಾಗಿರುವ ರೈನ್ ಬೋ ಹೈದರಾಬಾದ್ ಅಲ್ಲದೆ ವಿಜಯವಾಡದಲ್ಲೂ ಆಸ್ಪತ್ರೆ ಹೊಂದಿದೆ.

ಸುಮಾರು 15ವರ್ಷಗಳ ವೈದ್ಯಕೀಯ ಅನುಭವವುಳ್ಳ ಹೈದರಾಬಾದಿನಲ್ಲಿ 460 ಬೆಡ್ ಗಳುಳ್ಳ ಆಸ್ಪತ್ರೆ ಹೊಂದಿರುವ ರೈನ್ ಬೋ ಸಂಸ್ಥೆ ಬೆಂಗಳೂರಿನಲ್ಲಿ ಒಟ್ಟು 100 ಕೋಟಿ ರು ವೆಚ್ಚದಲ್ಲಿ ವೈಟ್ ಫೀಲ್ಡ್ ಹಾಗೂ ಜಯನಗರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಿದೆ. ವೈಟ್ ಫೀಲ್ಡ್ ನಲ್ಲಿ 200ಬೆಡ್ ಗಳುಳ್ಳ ಆಸ್ಪತ್ರೆ ಹಾಗೂ ಜಯನಗರದಲ್ಲಿ 100 ಬೆಡ್ ಗಳುಳ್ಳ ಆಸ್ಪತ್ರೆ ಜೂನ್ 2015ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ರೈನ್ ಬೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೇರ್ಮನ್ ರಮೇಶ್ ಕಂಚರ್ಲಾ ಹೇಳಿದ್ದಾರೆ.[ದಾಖಲೆ ಬರೆದ ಮಂಗಳೂರು ಕೆಎಂಸಿ ಕಾಲೇಜು]

Rainbow Hospitals to invest Rs. 100 cr for expansion in Bengaluru

ಮುಂದಿನ ವಿಸ್ತರಣಾ ಯೋಜನೆಯಲ್ಲಿ ಚೆನ್ನೈ, ವಿಶಾಖಪಟ್ಟಣಂ ಹಾಗೂ ಹೈದರಾಬಾದಿನಲ್ಲಿ ಮತ್ತೊಂದು 100 ಬೆಡ್ ಗಳುಳ್ಳ ಆಸ್ಪತ್ರೆಯನ್ನು ರೈನ್ ಬೋ ಸಂಸ್ಥೆ ಸ್ಥಾಪಿಸಲಿದೆ.ಹೈದರಾಬಾದಿನಲ್ಲಿ ನಾಲ್ಕು ಯೂನಿಟ್ ಹೊಂದಿರುವ ರೈನ್ ಬೋ ಸಂಸ್ಥೆ National Accreditation Board of Hospitals (NABH) ಪ್ರಮಾಣೀಕೃತ ಆಸ್ಪತ್ರೆಯಾಗಿದೆ. 2016ರಲ್ಲಿ ಚೆನ್ನೈ ಹಾಗೂ 2017ರಲ್ಲಿ 150 ಬೆಡ್ ಗಳುಳ್ಳ ಆಸ್ಪತ್ರೆಯನ್ನು ವಿಶಾಖಪಟ್ಟಣಂನಲ್ಲಿ ಸ್ಥಾಪಿಸಲಿದೆ. [ಈ ಮಣಿಪಾಲ್ ಆಸ್ಪತ್ರೆ ಮುಚ್ಚಲಾಗುತ್ತೆ]

ಯುಕೆಯ ಸಂಸ್ಥೆ ಸಿಡಿಸಿಯಿಂದ 100 ಕೋಟಿ ರು ಹೂಡಿಕೆ ಮೊತ್ತ ಹಾಗೂ ಅಬ್ರಾಜ್ ಸಮೂಹದ ಪಾಲನ್ನು ರೈನ್ ಬೋ ಸಂಸ್ಥೆ ಈ ಎಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ನವಜಾತ ಶಿಶುಗಳ ವಿಶೇಷ ಆರೈಕೆಗಾಗಿ ಆಸ್ಪತ್ರೆಗಳ ಅಗತ್ಯ ಹೆಚ್ಚಿದೆ ಎಂದು ರಮೇಶ್ ವಿವರಿಸಿದ್ದಾರೆ. ಹೆಚ್ಚಿನ ವಿವರಕ್ಕಾಗಿ ವೆಬ್ ತಾಣ ವೀಕ್ಷಿಸಿ

English summary
Rainbow Hospitals, which has 460 beds in four units in Hyderabad and Vijayawada, will invest Rs. 100 crore to open two facilities in Bangalore — one near Whitefield and another in Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X