'ಪುಲ್ವಾಮಾ ದಾಳಿಯು ಬಿಜೆಪಿಗೆ ಜೈಷೆ ನೀಡಿದ ಚುನಾವಣೆ ಗಿಫ್ಟ್'

ಹೈದರಾಬಾದ್, ಮಾರ್ಚ್ 31: ಪುಲ್ವಾಮಾ ಉಗ್ರ ದಾಳಿಯು ಲೋಕಸಭೆ ಚುನಾವಣೆ ಮುಂದಿರುವಾಗ ಬಿಜೆಪಿಗೆ ದೊರೆತ ಗಿಫ್ಟ್ ಎಂದು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ಎ.ಎಸ್. ದುಲತ್ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನನಗನಿಸುತ್ತದೆ. ಇದು ಬಿಜೆಪಿ ಅಥವಾ ಮೋದಿ ಜೀಗೆ ಜೈಷೆ ನೀಡಿದ ಕೊಡುಗೆ ಎಂದು ದುಲತ್ ಹೇಳಿದ್ದು, ಚುನಾವಣೆ ಕಾರಣಕ್ಕಾಗಿ ಏನಾದರೂ ಒಂದು ಅನಿವಾರ್ಯವಾಗಿ ಆಗಬೇಕಿತ್ತು. ಆದ್ದರಿಂದ ಏನೋ ಮಾಡಬೇಕಿತ್ತು. ಆದ್ದರಿಂದ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ.

ನಾನು ಹೇಳುವುದಕ್ಕೆ ಬಯಸುತ್ತಿರುವುದು, ರಾಷ್ಟ್ರೀಯತೆಯನ್ನು ವಿಶಾಲ ಅರ್ಥದಲ್ಲಿ ನೋಡಿದಾಗ ಸರ್ಜಿಕಲ್ ಸ್ತ್ರೈಕ್ ಸರಿ. ಆದರೆ ಅದನ್ನು ನೇರವಾಗಿ ನೋಡಲು ಆರಂಭಿಸಿದರೆ ಇದರಿಂದ ಜನರ ಮೇಲೆ ಪರಿಣಾಮ ಆಗುತ್ತದೆ. ಏನು ಸಾಕಾಗಿತ್ತೋ ಅದು ದೇಶಭಕ್ತಿ. ನಾವು ರಾಷ್ಟ್ರೀಯತೆ ಬಗ್ಗೆ ಒತ್ತು ನೀಡುವ ಅಗತ್ಯವಿಲ್ಲ. ಇದರ ಸೂಚನೆ ಏನೆಂದರೆ, ಇಂಥ ರಾಷ್ಟ್ರೀಯತೆಯು ಯುದ್ಧಕ್ಕೆ ನಾಂದಿ ಹಾಡುತ್ತದೆ ಎಂದಿದ್ದಾರೆ.

Pulwama terror attack was Jaish’s pre election gift to the Modi

ನ್ಯೂಜಿಲೆಂಡ್ ನಲ್ಲಿ ದಾಳಿ ನಂತರ ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡೆನ್, ಆವರು ಕೂಡ ನಮ್ಮವರೇ ಎಂದು ಹೇಳಿಕೆ ನೀಡಿದ್ದರ ಬಗ್ಗೆ ಹೊಗಳಿದ ದುಲತ್, ಅವರ ಮಾತು ಜಗತ್ತಿಗೆ ಮಾದರಿ ಆಗಬೇಕು. ಅಂತಿಮವಾಗಿ ಎಲ್ಲರೂ ಒಂದೇ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+