ಹೈದರಾಬಾದ್; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಇಬ್ಬರು ಆರೋಪಿಗಳ ಬಂಧನ

ಹೈದರಾಬಾದ್, ಸೆ.15: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸೆಪ್ಟೆಂಬರ್ 12 ಮತ್ತು 14 ರ ನಡುವೆ ಎರಡು ಪ್ರತ್ಯೇಕ ಹೋಟೆಲ್‌ಗಳಾದ ಸೃಜನಾ ಇನ್ ಮತ್ತು ತ್ರೀ ಕ್ಯಾಸಲ್‌ಗಳಿಗೆ ಕರೆದೊಯ್ದಿದ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ಹೋಟೆಲ್ ಕೊಠಡಿಗಳಲ್ಲಿ ಹೆಚ್ಚಿನ ಸಾಕ್ಷ್ಯಗಳನ್ನು ಹುಡುಕುತ್ತಿದ್ದು, ಹೋಟೆಲ್‌ಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಹಳೇ ಹೈದರಾಬಾದ್ ನಗರದ ದಬೀರ್‌ಪುರ ಭಾಗದ ವಿದ್ಯಾರ್ಥಿನಿಯಾಗಿದ್ದ ಸೆಪ್ಟೆಂಬರ್ 14 ರಂದು ರಾತ್ರಿ ಚದರ್‌ಘಾಟ್ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಪೊಲೀಸರು ಮನೆಗೆ ಕರೆತಂದಿದ್ದಾರೆ. ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ದಬೀರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಲಾಗಿದೆ

ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಲಾಗಿದೆ

"ನಾವು ಆರೋಪಿಗಳನ್ನು ಗುರುತಿಸಿದ್ದೇವೆ. ಪ್ರಕರಣವು ತನಿಖೆ ಹಂತದಲ್ಲಿದ್ದು, ತನಿಖೆಯ ನಂತರ ನಾವು ಪ್ರಕರಣದ ವಿವರಗಳನ್ನು ಬಹಿರಂಗಪಡಿಸುತ್ತೇವೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜಿ ಕೋಟೇಶ್ವರ್ ರಾವ್ ಹೇಳಿದ್ದಾರೆ.

ಆರೋಪಿಗಳು ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

"ಸಂತ್ರಸ್ತ ಬಾಲಕಿನ್ನು ಸಮಾಲೋಚನ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಬಾಲಕಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವರದಿಯ ಆಧಾರದ ಮೇಲೆ ನಾವು ಈ ಪ್ರಕರಣದಲ್ಲಿ ಮುಂದಿನ ವಿಭಾಗಗಳನ್ನು ಸೇರಿಸುತ್ತೇವೆ" ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಮಾದಕ ದ್ರವ್ಯ ನೀಡಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಮಾದಕ ದ್ರವ್ಯ ನೀಡಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಸೋಮವಾರ, ಸೆಪ್ಟೆಂಬರ್ 12 ರಂದು ರಾತ್ರಿ 8:15 ರ ಸುಮಾರಿಗೆ ಔಷಧ ಖರೀದಿಸಲು ಹೊರಟಿದ್ದ 14 ವರ್ಷದ ಮಗಳು ಮನೆಗೆ ಹಿಂತಿರುಗಿಲ್ಲ ಎಂದು ಬಾಲಕಿಯ ತಾಯಿ ಹೈದರಾಬಾದ್‌ನ ದಬೀರ್‌ಪುರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದರು. ಮಗಳಿಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಕೆಲವರು ವರದಿ ಮಾಡಿದ್ದರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.


"ನನಗೆ ಎದೆನೋವು ಇದ್ದುದರಿಂದ ಕೆಲವು ಔಷಧಗಳನ್ನು ತರಲು ನಾನು ಆಕೆಗೆ 500 ರೂಪಾಯಿ ನೀಡಿ ಕಳುಹಿಸಿದ್ದೇ. ಆದರೆ ಬಹಳ ಸಮಯ ಕಳೆದರೂ ಆಕೆ ವಾಪಸ್ ಬಂದಿಲ್ಲ'' ಎಂದು ಹೇಳಿ ಮರುದಿನ ಬೆಳಗ್ಗೆ ಆಕೆಯ ತಾಯಿ ದೂರು ನೀಡಿದ್ದರು.

ತಾಯಿ ಬಳಿ ಲೈಂಗಿಕ ದೌರ್ಜನ್ಯದ ವಿವರ ಹಂಚಿಕೊಂಡ ಬಾಲಕಿ

ತಾಯಿ ಬಳಿ ಲೈಂಗಿಕ ದೌರ್ಜನ್ಯದ ವಿವರ ಹಂಚಿಕೊಂಡ ಬಾಲಕಿ

"ಸೆಪ್ಟೆಂಬರ್ 14 ರ ಸಂಜೆ ಪೊಲೀಸರು ಅವಳನ್ನು ಮನೆಗೆ ಕರೆತಂದರು. ಆದರೆ, ಆ ಹೊತ್ತಿಗೆ ಆಕೆ ಅರೆ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದಳು. ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ಬಾಲಕಿಯ ತಾಯಿ ಹೇಳಿದರು.


ಪದೇ ಪದೇ ಪ್ರಶ್ನಿಸಿದಾಗ ಬಾಲಕಿ ತನ್ನನ್ನು ಇಬ್ಬರು ಯುವಕರು ಅಪಹರಿಸಿದ್ದರು ಎಂದು ತಾಯಿಗೆ ತಿಳಿಸಿದ್ದಾಳೆ. "ಅವಳನ್ನು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಕೆಲವು ಚುಚ್ಚುಮದ್ದುಗಳನ್ನು ನೀಡಲಾಯಿತು. ಕೆಲವು ಮಾತ್ರೆಗಳೊಂದಿಗೆ ಬೆರೆಸಿದ ತಂಪು ಪಾನೀಯಗಳನ್ನು ಬಲವಂತವಾಗಿ ಕುಡಿಸಲಾಯಿತು. ಇಬ್ಬರು ಯುವಕರು ಆಕೆಯನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಿಂಸಿಸಿದ್ದಾರೆ "ಎಂದು ಬಾಲಕಿಯನ್ನು ಉಲ್ಲೇಖಿಸಿ ತಾಯಿ ಹೇಳಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಇಬ್ಬರು ಆರೋಪಿಗಳಾದ 26 ವರ್ಷದ ನಯೀಮತ್ ಮತ್ತು 20 ವರ್ಷದ ಸೈಯದ್ ರಬೀಶ್ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳ ಅಡಿಯಲ್ಲಿ ಮಕ್ಕಳ ರಕ್ಷಣೆ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.


ಆರೋಪಿ ರಬೀಶ್ ಹೈಸ್ಕೂಲ್ ಡ್ರಾಪ್ ಔಟ್ ಆಗಿದ್ದರೆ, ನಯೀಮತ್ ಸೌದಿ ಅರೇಬಿಯಾದಲ್ಲಿ ಆಪ್ಟಿಕಲ್ ಸ್ಟೋರ್ ನಡೆಸುತ್ತಿದ್ದರು, ಅಲ್ಲಿಂದ ಈ ಮಾರ್ಚ್‌ನಲ್ಲಿ ವಾಪಸ್ ಬಂದಿದ್ದರು.

ಬಾಲಕಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನಾಂಪಲ್ಲಿಯ ಎರಡು ಹೊಟೇಲ್‌ಗಳನ್ನು ಪರಿಶೀಲಿಸಿದ್ದು, ಆರೋಪಿಗಳು ಬಾಲಕಿಯನ್ನು ಅಪಹರಿಸಿ ಹೊಟೇಲ್‌ಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

"ಮೊದಲು ಅವರು ಸೆಪ್ಟೆಂಬರ್ 12 ರ ರಾತ್ರಿ ನಾಂಪಲ್ಲಿ ಸ್ಟೇಷನ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದರು. ಅವರು ಆಕೆಗೆ ನಿದ್ರಾಜನಕ ಚುಚ್ಚುಮದ್ದನ್ನು ನೀಡಿ ಹೊರಗೆ ಹೋದರು. ಅವರೂ ಕುಡಿದ ಸ್ಥಿತಿಯಲ್ಲಿದ್ದರು. ಹೋಟೆಲ್ ಸಿಬ್ಬಂದಿ ಗುರುತಿನ ಚೀಟಿ ಕೇಳಿದಾಗ ಕೊಡಲು ನಿರಾಕರಿಸಿದರು. ಮರುದಿನ, ಹೋಟೆಲ್ ಮ್ಯಾನೇಜ್‌ಮೆಂಟ್ ಗುರುತಿನ ಚೀಟಿಗಳನ್ನು ನೀಡುವಂತೆ ಒತ್ತಾಯಿಸಿದಾಗ, ಅವರು ಹೊಟೇಲ್ ಖಾಲಿ ಮಾಡಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಂತರ, ಸೆಪ್ಟೆಂಬರ್ 13 ರಂದು ರಾತ್ರಿ 9 ಗಂಟೆ ಸುಮಾರಿಗೆ, ಅವರು ಹತ್ತಿರದ ಮತ್ತೊಂದು ಹೋಟೆಲ್‌ಗೆ ಹೋಗಿದ್ದಾರೆ. ಸೆಪ್ಟೆಂಬರ್ 14 ರ ಮಧ್ಯಾಹ್ನ ಚೆಕ್ ಔಟ್ ಮಾಡಿದ್ದಾರೆ. ಆರೋಪಿಗಳು ಆಕೆಯನ್ನು ಚಾದರ್‌ಘಾಟ್ ಬಳಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+