ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ

ಹೈದರಾಬಾದ್, ಡಿಸೆಂಬರ್ 06: ತೆಲಂಗಾಣದ ಪಶುವೈದ್ಯೆ ದಿಶಾ ಮೇಲೆ ಅಮಾನವೀಯ ರೀತಿಯನ್ನು ಅತ್ಯಾಚಾರ ಮಾಡಿ, ಪೆಟ್ರೋಲ್ ಎರಚಿ ಸುಟ್ಟುಹಾಕಿದ್ದ ಅತ್ಯಾಚಾರಿಗಳನ್ನು ಇಂದು ಬೆಳಿಗ್ಗೆ ಎನ್‌ಕೌಂಟರ್ ನಲ್ಲಿ ಕೊಲ್ಲಲಾಗಿದೆ.

ಅತ್ಯಾಚಾರ ಆರೋಪಿಗಳು ಅತ್ಯಾಚಾರ ಎಸಗಿದ್ದ ಚತ್ತನಪಲ್ಲಿಯ ಅದೇ ಜಾಗದಲ್ಲಿಯೇ ಅವರನ್ನು ಎನ್‌ಕೌಂಟರ್ ಮಾಡಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಧಾವಿಸಿದ್ದು, ಪೊಲೀಸರ ಪರವಾಗಿ ಘೋಷಗಳನ್ನು ಕೂಗುತ್ತಿದ್ದಾರೆ.

People Showered Flowers On Police Who Encountered Disha Killers

ಬ್ರಿಡ್ಜ್‌ ಮೇಲೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಕೆಳಗೆ ನಿಂತ ಪೊಲೀಸರ ಮೇಲೆ ಹೂಮಳೆ ಸುರಿಸುತ್ತಿದ್ದಾರೆ. ದಿಶಾಳನ್ನು ಜೀವಂತ ಸುಟ್ಟು ಹಾಕಲಾಗಿದ್ದ ಸ್ಥಳದಲ್ಲಿಯೂ ಹೂ ಚೆಲ್ಲಲಾಗಿದೆ.

ಪೊಲೀಸರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆಯನ್ನೂ ಜನರು ಮಾಡಿದ್ದಾರೆ. ಎನ್‌ಕೌಂಟರ್‌ ನಲ್ಲಿ ಮುಖ್ಯಪಾತ್ರ ವಹಿಸಿದ್ದ ಕರ್ನಾಟಕದ ಅಧಿಕಾರಿ ಸಜ್ಜನವರ್ ಅವರ ಪರವಾಗಿ ಭಾರಿ ಜಯಘೊಷಿಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+