India
  • search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ವರ್ಷದ ಹಿಂದೆ ಗಡಿ ದಾಟಿದ್ದ ಹೈದರಾಬಾದ್ ಟೆಕ್ಕಿಯನ್ನು ಭಾರತಕ್ಕೆ ವಾಪಾಸ್‌ ಕಳುಹಿಸಿದ ಪಾಕಿಸ್ತಾನ

|
Google Oneindia Kannada News

ಹೈದರಾಬಾದ್‌, ಜೂ. 1: ಎರಡು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಗಡಿ ನಿಯಂತ್ರಣ ರೇಖೆ ದಾಟಿ (ಎಲ್‌ಒಸಿ) ಅಕ್ರಮವಾಗಿ ಪ್ರವೇಶಿಸಿದ್ದ ಕಾರಣಕ್ಕೆ ಪಾಕಿಸ್ತಾನದ ಬಹವಾಲ್ಪುರ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ ಅನ್ನು ಸೋಮವಾರ ಅತ್ತಾರಿ-ವಾಗಾ ಗಡಿಯ ಮೂಲಕ ಪಾಕಿಸ್ತಾನ ವಾಪಸ್ ಕಳುಹಿಸಿದೆ.

ಟೆಕ್ಕಿ, ವೈದಾಮ್‌ ಪ್ರಶಾಂತ್‌ (31), ಮಧ್ಯಪ್ರದೇಶದ ರೈತ ದುರ್ಮಿ ​​ಲಾಲ್ ಎಂಬಾತನೊಂದಿಗೆ 2019 ರ ನವೆಂಬರ್ 14 ರಂದು ಪಂಜಾಬ್ ಪ್ರಾಂತ್ಯದ ಬಹವಾಲ್ಪುರದ ಚೋಲಿಸ್ತಾನ್ ಮರುಭೂಮಿ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದರು.

ಪಾಕಿಸ್ತಾನದ ಸಿಎಸ್‌ಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಹಿಂದೂ ಮಹಿಳೆ ಪಾಕಿಸ್ತಾನದ ಸಿಎಸ್‌ಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಹಿಂದೂ ಮಹಿಳೆ

ಬಹವಾಲ್ಪುರ್ ಪೊಲೀಸರು ಪಾಕಿಸ್ತಾನದ ಕಾನೂನಿನಡಿಯಲ್ಲಿ ಇವರಿಬ್ಬರ ವಿರುದ್ದ ಎಫ್ಐಆರ್ ದಾಖಲಿಸಿದ್ದು ಅಂದಿನಿಂದ ಇಬ್ಬರು ಪಾಕಿಸ್ತಾನದ ವಶದಲ್ಲಿದ್ದರು. ಇಬ್ಬರೂ ಕೂಡಾ ಮಾನ್ಯ ಗುರುತಿನ ಚೀಟಿ, ವೀಸಾ ಮತ್ತು ಪಾಸ್‌ಪೋರ್ಟ್‌ನಂತಹ ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ ಗಡಿ ದಾಟಿದ್ದರು.

ಆ ಸಂದರ್ಭದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಪ್ರಶಾಂತ್‌ನನ್ಜು ಗೂಢಚಾರ ಎಂದು ಅನುಮಾನಿಸಿದ್ದರು. ಆದರೆ ಪ್ರಶಾಂತ್‌ ತನ್ನ ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಸ್ವಿಟ್ಸರ್‌ಲ್ಯಾಂಡ್‌ ತಲುಪಲು ಪಾಕಿಸ್ತಾನದ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶಾಂತ್‌ ಹೇಳಿದ್ದ ಕಥೆಯನ್ನು ನಂಬಿದ್ದರು. ಈ ನಡುವೆ ಪ್ರಶಾಂತ್ ಎರಡು ವರ್ಷಗಳ ಕಾಲ ನಾಪತ್ತೆಯಾಗಿದ್ದು ಎರಡು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದೆ ಪ್ರಶಾಂತ್‌ ತನ್ನ ಕಚೇರಿಗೆ ತೆರಳಿದ್ದು ಬಳಿಕ ಮನೆಗೆ ಹಿಂದಿರುಗದ ಹಿನ್ನೆಲೆ ಪ್ರಶಾಂತ್‌ ತಂದೆ ಬಾಬು ರಾವ್ ಸೈಬರಾಬಾದ್‌ನ ಮಾಧಾಪುರ ಪೊಲೀಸರಿಗೆ ದೂರು ನೀಡಿದ್ದರು. ಏಪ್ರಿಲ್ 11 ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು.

ಎರಡು ವರ್ಷಗಳ ಬಳಿಕ ಪ್ರಶಾಂತ್‌ನ ಪಾಕಿಸ್ತಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಸಂದರ್ಭ ಪ್ರಶಾಂತ್‌ ತಂದೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನಾರ್‌ ಅನ್ನು ಸಂಪರ್ಕಿಸಿದ್ದು ಸಜ್ಜನಾರ್‌, ಪ್ರಶಾಂತ್‌ನನ್ನು ಪಾಕಿಸ್ತಾನದಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಲು ರಾಜ್ಯ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

Pakistan repatriates Hyderabad techie who crossed LOC in 2019

ಹೈದರಾಬಾದ್‌ನ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಪ್ರಶಾಂತ್‌ ಕಾರ್ಯನಿರ್ವಹಿಸುವುದಕ್ಕೂ ಮೊದಲು ಆತ ಒಂದೂವರೆ ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕುಟುಂಬ 2014 ರಲ್ಲಿ ವಿಶಾಖಪಟ್ಟಣಂನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದೆ ಎಂದು ತಂದೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಕೋವಿಡ್ ಸಂಬಂಧಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ ಕೋವಿಡ್ ಸಂಬಂಧಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ

ಇನ್ನು ತಾನು ಪಾಕಿಸ್ತಾನದಿಂದ ತನ್ನ ಮನೆಗೆ ವಾಪಾಸ್‌ ಬಂದಿರುವ ಬಗ್ಗೆ ಮಾತನಾಡಿದ ಟೆಕ್ಕಿ ಪ್ರಶಾಂತ್‌, "ನಾನು ತುಂಬಾ ಸಂತೋಷವಾಗಿದ್ದೇನೆ. ನಾಲ್ಕು ವರ್ಷಗಳಿಗಿಂತ ಅಧಿಕ ಕಾಲದ ಬಳಿಕ ನಾನು ಮನೆಗೆ ಮರಳಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಾಸಿಸುವ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಆ ಹಿನ್ನೆಲೆ ಭೇಟಿಯಾಗಲು ತೆರಳಿದೆ. ಇದು ನನ್ನ ವೈಯಕ್ತಿಕ ವಿಚಾರ ಎಂದು ಕೂಡಾ ಪ್ರಶಾಂತ್‌ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಸಂದರ್ಭದ ಕಾರಣದಿಂದಾಗಿ ಎಲ್ಲಾ ಔಪಚಾರಿಕ ವಿಧಾನಗಳು ಪೂರ್ಣಗೊಂಡ ಬಳಿಕ ಟೆಕ್ಕಿ ಪ್ರಶಾಂತ್‌ 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಪ್ರಶಾಂತ್‌ನನ್ನು ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಶೀಘ್ರದಲ್ಲೇ ಆತ ಹೈದರಾಬಾದ್ ತಲುಪಲಿದ್ದಾನೆ ಎಂದು ಸಜ್ಜನಾರ್‌ ದೃಢಪಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Pakistan repatriates Hyderabad techie who crossed LOC in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X