ರಾಹುಲ್‌ಗೆ ಹೈದರಾಬಾದ್‌ನಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ ಓವೈಸಿ
ತೆಲಂಗಾಣ ಮೇ 8: ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿಗೆ ಹೈದರಾಬಾದ್‌ನಿಂದ ಸ್ಪರ್ಧಿಸುವಂತೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
ರಾಹುಲ್ ಗಾಂಧಿ ನೇಪಾಳಕ್ಕೆ ವೈಯಕ್ತಿಕ ಭೇಟಿ ನಂತರ ತೆಲಂಗಾಣಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಜೆಪಿ, ಟಿಆರ್‌ಎಸ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮೂವರಿಗೆ ಸವಾಲು ಹಾಕಲು ತೆಲಂಗಾಣಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ ಇದೀಗ ಮುನ್ನೆಲೆಗೆ ಬಂದಿದೆ. ಇದೇ ವೇಳೆ ಓವೈಸಿ ಮುಂದೆ ಹೋರಾಟ ಮಾಡೋಣ ಎಂದು ರಾಹುಲ್ ಗಾಂಧಿ ಸವಾಲಿಗೆ ಪ್ರತಿಯಾಗಿ ಸವಾಲು ಹಾಕಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ರಾಹುಲ್ ಗಾಂಧಿಗೆ ಹೈದರಾಬಾದ್‌ನಿಂದ ಸ್ಪರ್ಧಿಸುವಂತೆ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. ವಯನಾಡಿನಿಂದ ಅವರು ಸ್ಪರ್ಧಿಸಿದರೆ ರಾಹುಲ್ ಗಾಂಧಿ ಸೋಲುತ್ತಾರೆ ಎಂದು ಒವೈಸಿ ಹೇಳಿಕೊಂಡಿದ್ದಾರೆ. ನೀವು ಬಂದು ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಿ. ನಿಮ್ಮ ಅದೃಷ್ಟವನ್ನು ಇಲ್ಲಿ ತೋರಿಸಿ. ನೀವು ಮೇದಕ್‌ನಿಂದಲೂ ಸ್ಪರ್ಧಿಸಬಹುದು ಎಂದು ಸವಾಲು ಹಾಕಿದ್ದಾರೆ.

ಇದಲ್ಲದೇ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಒವೈಸಿ ಬಾಬರಿ ಧ್ವಂಸದ ನಂತರವೂ ನಾವು ಏನನ್ನೂ ಕಲಿತಿಲ್ಲ, ಬಿಜೆಪಿ ಮತ್ತೊಮ್ಮೆ ಮಸೀದಿ ಕೆಡವಲು ಪ್ರಯತ್ನಿಸುತ್ತಿದೆ. ಬಿಜೆಪಿ ಕೇವಲ ದ್ವೇಷದ ರಾಜಕಾರಣ ಮಾಡುತ್ತದೆ. ಬಿಜೆಪಿ ಮತ್ತು ಅದರ ಸರ್ಕಾರ ಜನರ ಮನೆಗಳನ್ನು ಕೆಡವುತ್ತದೆ ಎಂದು ಅವರು ದೂರಿದ್ದಾರೆ. ಮಸೀದಿಗಳ ದರ್ಗಾಗಳಲ್ಲಿ, ಧಾರ್ಮಿಕ ಮೆರವಣಿಗೆಗಳಲ್ಲಿ ಕಲ್ಲು ತೂರಾಟಗಾರರ ತಂಡ ಕಟ್ಟಿಕೊಂಡು ಹಿರಿಯರನ್ನು ಶಿಕ್ಷಿಸುತ್ತಿದ್ದಾರೆ. ಇಂಥವರನ್ನು ಸೆರೆ ಹಿಡಿಯಲು ಹೈ ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.












Click it and Unblock the Notifications