ಕಾರಿನೊಂದಿಗೆ ಹಿಂದೂ ಚಾಲಕ ಬೇಕು, ಓಲಾಗೆ ವಿಚಿತ್ರ ಬೇಡಿಕೆ
ಹೈದರಾಬಾದ್, ಏ. 8 : ಹಿಂದೂ ಚಾಲಕ ಇರುವ ಕಾರನ್ನು ಕಳಿಸುವಂತೆ ಓಲಾ ಕ್ಯಾಬ್‌ಗೆ ಮನವಿ ಮಾಡಿದ್ದ ವ್ಯಕ್ತಿಗೆ ಮುಖಭಂಗವಾಗಿದೆ. ಮನವಿ ಸಲ್ಲಿಸಿದ್ದ ವ್ಯಕ್ತಿಗೆ ಓಲಾ ಕ್ಯಾಬ್ ಸರಿಯಾಗಿಯೇ ತಿರುಗೇಟು ಕೊಟ್ಟಿದೆ. ಈ ಬೇಡಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿದೆ.
ಹೈದರಾಬಾದ್‌ನ ಸೀಲಂ ವೀರಪ್ಪ ನಾಯ್ಡು ಓಲಾ ಕ್ಯಾಬ್‌ಗೆ ಹಿಂದೂ ಚಾಲಕ ಇರುವ ಕಾರು ಕಳಿಸಿ ಎಂದು ಮನವಿ ಮಾಡಿದವರು. 'ಹಿಂದೂವಾಗಿ ನಾನು ಹೈದರಾಬಾದ್‌ನಲ್ಲಿ ಹಿಂದೂ ಚಾಲಕರ ಬಗ್ಗೆ ನಂಬಿಕೆ ಹೊಂದಿದ್ದೇನೆ. ಆದ್ದರಿಂದ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ' ಎಂದು ಮನವಿ ಮಾಡಿದ್ದರು. ನಾಯ್ಡು ಟ್ವೀಟ್ ಮಾಡಿ ತನ್ನ ಬೇಡಿಕೆಯನ್ನು ಓಲಾ ಕ್ಯಾಬ್ ಮುಂದಿಟ್ಟಿದ್ದರು. [2050ಕ್ಕೆ ಹಿಂದೂಗಳ ಸಂಖ್ಯೆ 140 ಕೋಟಿ]

ಓಲಾ ಸ್ಪಷ್ಟನೆ : 'ಕ್ಷಮಿಸಿ ನಾವು ಧರ್ಮದ ಆಧಾರದಲ್ಲಿ ಚಾಲಕರನ್ನು ವಿಂಗಡನೆ ಮಾಡುವುದಿಲ್ಲ ಎಂದು ಓಲಾ ನಾಯ್ಡು ಅವರ ಬೇಡಿಕೆಗೆ ತಿರುಗೇಟು ಕೊಟ್ಟಿದೆ'. ಓಲಾ ದಿಟ್ಟ ಉತ್ತರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. [ಓಲಾ, ಉಬರ್ ಟ್ಯಾಕ್ಸಿ ಮೊಬೈಲ್ ಅಪ್ಲಿಕೇಷನ್ ಗೆ ನಿಷೇಧ?]
@SVeerapaNaidu Sorry, we do not discriminate against our drivers on the basis of their religion.
— Ola (@Olacabs) April 6, 2015 ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾದ ನಂತರ 'ಈ ಬೇಡಿಕೆಯನ್ನು ತಾರತಮ್ಯ ಎನ್ನುವುದರ ಬದಲು ಗ್ರಾಹಕರ ಆಯ್ಕೆ ಎಂದು ಯಾಕೆ ಪರಿಗಣಿಸಬಾರದು?' ಎಂದು ನಾಯ್ಡು ಸಮರ್ಥನೆ ನೀಡಿದ್ದಾರೆ. ಅಂತಿಮವಾಗಿ 'ಯಾರನ್ನೂ ನೋಯಿಸುವ ಉದ್ದೇಶ ನನಗೆ ಇಲ್ಲ' ಎಂದು ಟ್ವೀಟ್ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
Ola cabs I want a Hindu driver as it is #MyChoice ; the liberal paradox.
— kartikeya (@b_kartikeya) April 7, 2015 ನಾಯ್ಡುಗೆ ಟ್ವೀಟರ್‌ನಲ್ಲಿ ಪ್ರಶ್ನೆ
@SVeerapaNaidu Hey mate. Do you make the same requests to Airlines for the pilot to be of a certain faith? @Olacabs
— Sheikh Rehmatullah (@Sheikh_Rehmat) April 7, 2015 ನನಗೆ ದಲಿತ ಡ್ರೈವರ್ ಬೇಕು
Hi Ola Cabs please send me a blue car with Dalit driver ~ #Mayawati
— आप चोर हैं (@AapChorHain) April 7, 2015 











Click it and Unblock the Notifications