ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪತ್ತೆಗೆ ಪ್ರತಿಯೊಬ್ಬರೂ ಸಿಟಿಸ್ಕ್ಯಾನ್ ಮೊರೆ ಹೋಗುವುದು ಬೇಡ

|
Google Oneindia Kannada News

ಹೈದರಾಬಾದ್, ಜೂನ್ 08: ಸೌಮ್ಯ ತರದ ಕೊರೊನಾ ಸೋಂಕಿನ ಲಕ್ಷಣ ಹೊಂದಿರುವವವರು ಸೋಂಕು ಪತ್ತೆಗೆ ಸಿಟಿ ಸ್ಕ್ಯಾನ್ ಮೊರೆ ಹೋಗುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೆಲವು ಮಾಹಿತಿಯನ್ನು ನೀಡಿದ್ದು, ವೈದ್ಯರು ಸೌಮ್ಯ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಕೊರೊನಾ ಸೋಂಕಿತರಿಗೆ ಸಿಟಿಸ್ಕ್ಯಾನ್ ಮಾಡಿಸಲು ಸಲಹೆ ನೀಡಬೇಡಿ ಎಂದು ಹೇಳಿದೆ.

ಪೂರ್ವ ಲಡಾಖ್‌ನಲ್ಲಿ ಹತ್ತಾರು ಚೀನಾ ಮಿಲಿಟರಿ ವಿಮಾನಗಳ ಹಾರಾಟಪೂರ್ವ ಲಡಾಖ್‌ನಲ್ಲಿ ಹತ್ತಾರು ಚೀನಾ ಮಿಲಿಟರಿ ವಿಮಾನಗಳ ಹಾರಾಟ

ಕೊರೊನಾ ಎರಡನೇ ಅಲೆಯಲ್ಲಿ ಸಿಟಿಸ್ಕ್ಯಾನ್ ಮಾಡಿಸುವ ಸಂಖ್ಯೆ ಹೆಚ್ಚಾಗಿದೆ, ಎದೆಯ ಸಿಟಿಸ್ಕ್ಯಾನ್ ಮಾಡುವುದು ಉತ್ತಮವಲ್ಲ. ತೆಲಂಗಾಣದ ಬೋಧನಾ ಆಸ್ಪತ್ರೆಗಳಲ್ಲಿರುವ ಸರ್ಕಾರಿ ವೈದ್ಯರು ಸಿಟಿಸ್ಕ್ಯಾನ್ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ, ಆದರೆ ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲಾಗುವ ದುಷ್ಪರಿಣಾಮವನ್ನು ಗಮನಿಸದೆ ಸಿಟಿ ಸ್ಕ್ಯಾನ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

MOHFW Says Avoid CT Scan For Covid Diagnosis

ಎದೆಯ ಎಚ್‌ಆರ್‌ಸಿಟಿ ಸ್ಕ್ಯಾನ್ ಕೋವಿಡ್ 19 ರೋಗಿಗಳಲ್ಲಿ ಶ್ವಾಸಕೋಶದ ಒಳಗೊಳ್ಳುವಿಕೆಯ ವ್ಯಾಪ್ತಿ ಮತ್ತು ಸ್ವರೂಪವನ್ನು ದೃಶ್ಯೀಕರಿಸುತ್ತದೆ.

ತೀವ್ರವಲ್ಲದ ಕೋವಿಡ್ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಅವಶ್ಯಕತೆ ಇರುವುದಿಲ್ಲ, ಅತಿಯಾದ ಸಿಟಿ ಸ್ಕ್ಯಾನ್ ಬಳಕೆಯಿಂದ ಹಲವು ರೋಗಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ.

ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300 ರಿಂದ 400 ಎಕ್ಸರೇಗಳಿಗೆ ಸಮಾನ ಎಂದು ಅಧ್ಯಯನ ಹೇಳಿದೆ. ಕಡಿಮೆ ವಯಸ್ಸಿನವರು ಪದೇ ಪದೇ ಸಿಟಿ ಸ್ಕ್ಯಾನ್‌ಗೆ ಓಲಗಾಗುವುದರಿಂದ ಮುಂದಿನ ದಿನಗಳಲ್ಲು ಗಂಭೀರತರದ ಕಾಯಿಲೆಗೆ ತುತ್ತಾಗಬಹುದು.

ವಿಕರಣಗಳಿಗೆ ಒಡ್ಡಿಕೊಳ್ಳುವುದರಿಂದ ಹಾನಿ ಉಂಟಾಗುತ್ತದೆ. ತೀವ್ರವಲ್ಲದ ಕೋವಿಡ್ ಪ್ರಕರಣಗಳಲ್ಲಿ ದೇಹದಲ್ಲಿ ಆಮ್ಲಜನಕ ಪ್ರಮಾಣ ಸಹಜ ಸ್ಥಿತಿಯಲ್ಲಿದ್ದರೆ ಸಿಟಿ ಸ್ಕ್ಯಾನ್ ಮಾಡಿಸುವುದರಲ್ಲಿ ಅರ್ಥವಿಲ್ಲ.

ಅತಿಯಾದ ಆಯಾಸ, ದೇಹದಲ್ಲಿನ ಆಮ್ಲಜನಕ ಪ್ರಮಾಣ ಇಳಿಮುಖವಾಗುವುದು, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದುಆಸ್ಪತ್ರೆಯ ಅವಶ್ಯಕತೆಯನ್ನು ಸೂಚಿಸುತ್ತದೆ. ಹೋಂ ಕ್ವಾರಂಟೈನ್‌ನಲ್ಲಿರುವ ರೋಗಿಗಳು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಲಾಗಿದೆ.

English summary
The Director General of Health Services (DGHS), MOHFW, New Delhi has advised physicians involved in treatment of Covid-19 patients to avoid prescribing frequent High-Resolution CT (HRCT) scan of the chest. The DGHS made it clear that the CT chest scan should not be conducted for asymptomatic and mild Covid-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X