• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸಾದುದ್ದೀನ್‍ ಓವೈಸಿ ವಿರುದ್ಧ ಮಾಜಿ ನಾಯಕ ಅಜರುದ್ದೀನ್ ಸ್ಪರ್ಧೆ?

|

ಹೈದರಾಬಾದ್, ಮಾರ್ಚ್ 01: ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿದ್ದು, ಅಚ್ಚರಿಯ ಹೆಸರುಗಳು ಈ ಬಾರಿ ಕೇಳಿ ಬರುತ್ತಿವೆ.

ತೆಲಂಗಾಣ ಕಾಂಗ್ರೆಸ್‍ ಸಮಿತಿಯು ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡಿದ್ದು, ಹೈದರಾಬಾದ್ ಕ್ಷೇತ್ರದಲ್ಲಿ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಕಾಂಗ್ರೆಸ್ ತಯಾರಿಸಿರುವ ಅಂತಿಮ ಪಟ್ಟಿ ಸದ್ಯ ಎಐಸಿಸಿ ಸ್ಕ್ರೀನಿಂಗ್‍ ಸಮಿತಿ ಮುಂದಿದೆ. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಎರಡರಿಂದ ಐದು ಆಕಾಂಕ್ಷಿಗಳ ಹೆಸರನ್ನು ಸೂಚಿಸಲಾಗಿದೆ.

ಹೈದರಾಬಾದ್‍ ಲೋಕಸಭಾ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‍ ಓವೈಸಿ ವಿರುದ್ಧ ಮಾಜಿ ಕ್ರಿಕೆಟರ್ ಹಾಗೂ ತೆಲಂಗಾಣ ಕಾಂಗ್ರೆಸ್‍ ಕಾರ್ಯಕಾರಿ ಅಧ್ಯಕ್ಷ ಮೊಹಮ್ಮದ್‍ ಅಜರುದ್ದೀನ್‍ ಸೇರಿ ಇತರ ಇಬ್ಬರ ಹೆಸರನ್ನು ಸೂಚಿಸಲಾಗಿದ್ದು, ಅಜರುದ್ದೀನ್‍ ಅವರು ಈ ಬಾರಿ ಸ್ಪರ್ಧಿಸುವುದು ಖಚಿತವಾಗಿದೆ.

ತೆಲಂಗಾಣ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಹಾಗೂ ಎಐಎಂಐಎಂ ಮೈತ್ರಿ ಹೊಂದಿದ್ದು, ಹೈದರಾಬಾದ್ ಕ್ಷೇತ್ರದಲ್ಲಿ ಓವೈಸಿಗೆ ಭಾರಿ ಬೆಂಬಲವಿದೆ. ಆದರೂ, ಅಜರುದ್ದೀನ್‍ ಮತ್ತು ಅಸಾದುದ್ದೀನ್‍ ನಡುವೆ ನೇರ ಪೈಪೋಟಿ ನಿರೀಕ್ಷೆಯಿದೆ.

2009ರಲ್ಲಿ ಉತ್ತರ ಪ್ರದೇಶದ ಮರಾಠಾಬಾದ್‍ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಜರುದ್ದೀನ್ ಗೆಲುವು ಸಾಧಿಸಿದ್ದರು. ಆದರೆ, 2014 ರಲ್ಲಿ ರಾಜಸ್ಥಾನದ ಮಾಧೋಪುರ್ ನಿಂದ ಸ್ಪರ್ಧಿಸಿ ಸೋಲು ಕಂಡರು.ಸದ್ಯ ಅಜರುದ್ದೀನ್‍ ಅವರು ತೆಲಂಗಾಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2018 ನವೆಂಬರ್ ನಲ್ಲಿ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

English summary
If things go as planned by the Telangana unit of the Congress, it could well be former cricketer Mohammad Azharuddin versus AIMIM President Asaduddin Owaisi for the Hyderabad Lok Sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X