ನ್ಯೂಜೆರ್ಸಿ: ದುಷ್ಕರ್ಮಿಗಳ ಗುಂಡಿಗೆ ತೆಲಂಗಾಣದ ವ್ಯಕ್ತಿ ಬಲಿ
ನ್ಯೂಜೆರ್ಸಿ, ನವೆಂಬರ್ 18: ತೆಲಂಗಾಣದ ಮೂಲದ 61 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು 16 ವರ್ಷ ವಯಸ್ಸಿನ ಯುವಕನೊಬ್ಬನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ನ್ಯೂಜೆರ್ಸಿಯ ವೆಂಟರ್ ಸಿಟಿಯಲ್ಲಿ ಸುನೀಲ್ ಎಡ್ಲಾ(61) ಅವರನ್ನು ನವೆಂಬರ್ 15ರಂದು ಸ್ಥಳೀಯ ಕಾಲಮಾನದ ಪ್ರಕಾರ 8 ಗಂಟೆ ವೇಳೆಗೆ ಹತ್ಯೆ ಮಾಡಲಾಗಿದೆ. ತೆಲಂಗಾಣದ ಮೇದಕ್ ಜಿಲ್ಲೆಯವರಾದ ಸುನೀಲ್ ಅವರು ಅಟ್ಲಾಂಟಿಕ್ ಸಿಟಿಯಲ್ಲಿ ನೈಟ್ ಆಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಬಂದ ಯುವಕನು, ಏಕಾಏಕಿ ಗುಂಡು ಹಾರಿಸಿ, ಪರಾರಿಯಾಗಿದ್ದಾನೆ. ಆರೋಪಿಯನ್ನು ಹುಡುಕಿ, ಬಂಧಿಸಲಾಗಿದೆ. ಹತ್ಯೆ, ಕಳ್ಳತನ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಹೊರೆಸಲಾಗಿದೆ.

ಎಡ್ಲಾ ಅವರು 1987ರಲ್ಲೇ ಯುಎಸ್ ಗೆ ಬಂದು ನೆಲೆಸಿದ್ದರು. ಮುಂದಿನ ಎರಡು ತಿಂಗಳು ಭಾರತ ಪ್ರವಾಸ ಕೈಗೊಳ್ಳಲು ಯೋಜನೆ ಹಾಕಿಕೊಂಡಿದ್ದರು. ಅವರ ತಾಯಿಯ 95ನೇ ಹುಟ್ಟುಹಬ್ಬ ಆಚರಣೆಗೆ ಎಲ್ಲವೂ ಸಿದ್ಧತೆಯಾಗಿತ್ತು. ಈ ನಡುವೆ ಈ ದುರಂತ ಸಂಭವಿಸಿದೆ.












Click it and Unblock the Notifications