ಗಾಂಧಿ ಜಯಂತಿಯಂದೇ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು
ವಿಶಾಖಪಟ್ಟಣ, ಸೆಪ್ಟೆಂಬರ್ 02: ಮಹಾತ್ಮಾ ಗಾಂಧಿ ಅವರ 150ನೇ ಜಯಂತೋತ್ಸವದ ದಿನವೇ ಆಂಧ್ರದಲ್ಲಿ ವಿಶಾಖಪಟ್ಟಣಂ ನಲ್ಲಿ ಮಾನಗೇಡಿ ಕೃತ್ಯವೊಂದು ನಡೆದಿದೆ.
ನಿನ್ನೆ ರಾತ್ರಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮಧುರವಾಡ ಎಂಬಲ್ಲಿ ಮಹಾತ್ಮಾ ಗಾಂಧಿ ಅವರ ಪುತ್ಥಳಿಗೆ ಭಂಗ ಮಾಡಲಾಗಿದೆ. ಇತರ ಸ್ವಾತಂತ್ರ್ಯ ನಾಯಕರ ಪುತ್ಥಳಿ ಜೊತೆ ಇದ್ದ ಗಾಂಧಿ ಅವರ ಪುತ್ಥಳಿಯ ಕಾಲುಗಳನ್ನು ಮುರಿಯಲಾಗಿದೆ.

ಮಹಾತ್ಮಾ ಗಾಂಧಿ ಜಯಂತಿಯ ಹಿಂದಿನ ದಿನವೇ ಇಂತಹಾ ಹೀನ ಕೃತ್ಯ ನಡೆದಿರುವುದು ಖೇದಕರ. ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಘಟನೆ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಆದರೆ ಇನ್ನೂ ಯಾರನ್ನೂ ಬಂಧಿಸಿಲ್ಲ. ಕಳೆದ ಗುರುವಾರಷ್ಟೆ ಕೊಚ್ಚಿಯಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಒಡೆದು ಹಾಕಲಾಗಿತ್ತು. ಕೃತ್ಯ ಎಸಗಿದವನು ಬುದ್ದಿಮಾಂದ್ಯ ಎಂದು ವರದಿಯಾಗಿತ್ತು.












Click it and Unblock the Notifications