ಹೈದರಾಬಾದ್ ಉದ್ಯಮಿ ಅಪಹರಣ: 1 ಕೋಟಿ ಕೊಟ್ಟ ಬಳಿಕ ಬಿಡುಗಡೆ

ಹೈದರಾಬಾದ್, ಜುಲೈ 30: ನಾಲ್ಕು ಮಂದಿ ಮುಸುಕುಧಾರಿಗಳು ಸೇರಿ ಉದ್ಯಮಿಯೊಬ್ಬರನ್ನು ಅಪಹರಿಸಿ, 1 ಕೋಟಿ ರೂ. ನೀಡಿದ ಮೇಲೆ ಬಿಡುಗಡೆ ಮಾಡಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಉದ್ಯಮಿಯೊಬ್ಬರನ್ನು ಭಾನುವಾರ ಅಪಹರಿಸಿ ಗೋಡೌನ್‌ ಒಂದಕ್ಕೆ ಕರೆದೊಯ್ದು ಬಳಿಕ ಮನೆಗೆ ಕರೆ ಮಾಡಿ ಒಂದು ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು. ಒಂದು ಕೋಟಿ ರೂ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

ಗಜೇಂದ್ರ ಪ್ರಕಾಶ್(ಅಪಹೃತ) ರಾತ್ರಿ 11ರ ವೇಳೆಗೆ ಅಪಹರಣ ಮಾಡಿದ್ದರು. ಮೂರು ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು. ಆದರೆ ಕುಟುಂಬದವರು ಅಷ್ಟು ನೀಡಲು ಸಾಧ್ಯವಿಲ್ಲ ಒಂದು ಕೋಟಿ ನೀಡುತ್ತೇವೆ ಎಂದು ಒಪ್ಪಿಕೊಂಡು ಒಂದು ಕೋಟಿ ರೂ ಹಣವನ್ನು ನೀಡಿದ್ದರು.

Kidnapers Released Businessman After Pays 1 crore

ಕೈಕಾಲುಗಳಿಗೆ ಭಾರಿ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಅವರು ಅಪಹರಣವಾದ ಜಾಗದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈಗ ಗಜೇಂದ್ರ ಅವರಿಗಾದ ಪರಿಸ್ಥಿತಿ ನಾಳೆ ನಮಗೂ ಆಗಬಹುದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲೇಬೇಕು ಎಂದು ಗಜೇಂದ್ರ ಅವರ ಸ್ನೇಹಿತ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+