ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಚಾಲಕನನ್ನು ಕೊಂದ ಐಎಎಸ್ ಅಧಿಕಾರಿ ಬಂಧನ

ತನ್ನ ಕಾರು ಚಾಲಕನನ್ನು ಕೊಂದಿದ್ದ ಐಎಎಸ್ ಅಧಿಕಾರಿಯ ಮಗ ಹಾಗೂ ಕೊಲ್ಲಲು ಸಹಕರಿಸಿದ್ದ ಅಧಿಕಾರಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

By Mahesh
|
Google Oneindia Kannada News

ಹೈದರಾಬಾದ್, ಮಾರ್ಚ್ 22: ತನ್ನ ಕಾರು ಚಾಲಕನನ್ನು ಕೊಂದಿದ್ದ ಐಎಎಸ್ ಅಧಿಕಾರಿ ಮಗ ಹಾಗೂ ಕೊಲ್ಲಲು ಸಹಕರಿಸಿದ್ದ ಅಧಿಕಾರಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಧರವತ್ ವೆಂಕಟೇಶ್ವರ ರಾವ್ ಹಾಗೂ ಅವರ ಮಗ ಧರವತ್ ವೆಂಕಟ ಸುಕ್ರುತ್ ಅವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಬಿ ನಾಗರಾಜು ಎಂಬ ಕಾರು ಚಾಲಕನನ್ನು ಕಳೆದ ವಾರ ಕೊಲೆಗೈದ ಇವರಿಬ್ಬರು ನಾಪತ್ತೆಯಾಗಿದ್ದರು ಎಂದು ಹೈದರಾಬಾದಿನ ಪಶ್ಚಿಮ ವಲಯ ಡಿಸಿಪಿ ಎ ವೆಂಕಟೇಶ್ವರ ರಾವ್ ಹೇಳಿದ್ದಾರೆ.

IAS officer, son arrested in driver's murder case

ಕಳೆದ ಭಾನುವಾರದಂದು ಗೋಣಿಚೀಲದಲ್ಲಿ ನಾಗರಾಜು ದೇಹ ಪತ್ತೆಯಾಗಿತ್ತು. ಅಧಿಕಾರಿ ವೆಂಕಟೇಶ್ವರ್ ರಾವ್ ಹಾಗೂ ಕಾರುಚಾಲಕ ನಾಗರಾಜು ಇಬ್ಬರು ಆಪ್ತರಾಗಿದ್ದರು. ಯೂಸುಫ್ ಗಢ ಪ್ರದೇಶದಲ್ಲಿರುವ ಮನೆಯಲ್ಲಿ ಅಧಿಕಾರಿಯ ಮನೆ ತಾರಸಿಯಲ್ಲಿ ಮಾರ್ಚ್ 17ರಂದು ಇಬ್ಬರು ಚೆನ್ನಾಗಿ ಕುಡಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ 19 ವರ್ಷ ವಯಸ್ಸಿನ ಮಗ ಸುಕ್ರುತ್ ಜತೆ ನಾಗರಾಜು ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈಕೈ ಮುಟ್ಟಿದ್ದಾನೆ. ಇದರಿಂದ ಅಸಹ್ಯಗೊಂಡು ನಾಗರಾಜುವಿಗೆ ಸುಕ್ರುತ್ ಬಾರಿಸಿದ್ದಾನೆ. ಇಬ್ಬರ ನಡುವೆ ಜಗಳ ಶುರುವಾಗುತ್ತಿದ್ದಂತೆ ಅಧಿಕಾರಿ ಕೂಡಾ ಕೈಜೋಡಿಸಿದ್ದಾರೆ. ಸಿಟ್ಟಿನಲ್ಲಿ ಇಟ್ಟಿಗೆ ತೆಗೆದುಕೊಂಡು ನಾಗರಾಜು ತಲೆ ಒಡೆದಿದ್ದಾರೆ.
ನಂತರ ನಾಗರಾಜು ಮೊಬೈಲ್ ಫೋನ್ ಧ್ವಂಸಗೊಳಿಸಿ, ಆತನ ಶವವನ್ನು ಗೋಣಿಚೀಲದಲ್ಲಿ ತುಂಬಿ ಅಲ್ಲಿಂದ ಸಾಗಿಸಿದ್ದಾರೆ.

ಅಪ್ಪ -ಮಗನ ಚರ್ಯೆ ಕಂಡ ಅಕ್ಕ ಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಕಾನೂನು ವಿದ್ಯಾರ್ಥಿಯಾಗಿರುವ ವೆಂಕಟ ಹಾಗೂ ಐಎಎಸ್ ಅಧಿಕಾರಿ ಡಿ.ರಾವ್ ಅವರನ್ನು ಬಂಧಿಸಲಾಗಿದೆ.(ಪಿಟಿಐ)

English summary
The Hyderabad Police on March 21 arrested an IAS officer of Telangana and his son in connection with the murder of their driver here last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X