ವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿ

Recommended Video

      Public talk on Dr Priyanka Reddy case | OneIndia Kannada

      ಹೈದರಾಬಾದ್, ಡಿಸೆಂಬರ್ 2: ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಪರವಾನಗಿ ಇಲ್ಲದ ಟ್ರಕ್ ಚಲಾಯಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

      ಪಶುವೈದ್ಯೆ ಕೆಲಸಕ್ಕೆಂದು ಸ್ಕೂಟಿಯಲ್ಲಿ ತೆರಳಿದ್ದರು, ಒಂದು ಕಡೆ ಸ್ಕೂಟಿ ನಿಲ್ಲಿಸಿ ಅಲ್ಲಿಂದ ಕ್ಯಾಬ್‌ನಲ್ಲಿ ತೆರಳಿ ಮತ್ತೆ ಹಿಂದಿರುಗುವಾಗ ತನ್ನ ಸ್ಕೂಟರ್ ಹತ್ತಿದ್ದರು.

      ಸ್ವಲ್ಪ ಸೂರದಲ್ಲೇ ಸ್ಕೂಟಿ ಪಂಕ್ಚರ್ ಆಗಿತ್ತು. ಅಲ್ಲೇ ಘೋರ ದುರಂತ ನಡೆದೇ ಹೋಯಿತು. ಆಕೆಯನ್ನು ಟ್ರಕ್ ಕ್ಲೀನರ್, ಡ್ರೈವರ್ ಎಲ್ಲಾ ಸೇರಿ ಅತ್ಯಾಚಾರ ಮಾಡಿಬಿಟ್ಟಿದ್ರು. ಅಷ್ಟೇ ಅಲ್ಲ ಆಕೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

      ಈ ಪ್ರಮುಖ ಆರೋಪಿಗಳು ಘಟನೆ ನಡೆದ 48 ಗಂಟೆಯೊಳಗಾಗಿ ಪೊಲೀಸರ ಕೈಗೆ ಸಿಕ್ಕಿದ್ದಾರೆ.ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

      ಸಂತ್ರಸ್ತೆ ಪ್ರಿಯಾಂಕ ರೆಡ್ಡಿ ಕುಟುಂಬದವರು ರಾತ್ರಿಯೇ ದೂರು ಸಲ್ಲಿಸಿದರೂ ಎಫ್‌ಐಆರ್ ದಾಖಲು ಮಾಡಲು ವಿಳಂಬ ಮಾಡಿದ ಕಾರಣಕ್ಕೆ ಮೂವರನ್ನು ಅಮಾನತುಗೊಳಿಸಲಾಗಿದೆ. ಅತ್ಯಾಚಾರ ಹತ್ಯೆ ಮಾಡಿದ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

      ಎರಡು ವರ್ಷಗಳಿಂದ ಪರವಾನಗಿ ಇಲ್ಲದೆ ಟ್ರಕ್ ಚಾಲನೆ

      ಎರಡು ವರ್ಷಗಳಿಂದ ಪರವಾನಗಿ ಇಲ್ಲದೆ ಟ್ರಕ್ ಚಾಲನೆ

      ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಪರವಾನಗಿ ಇಲ್ಲದೆಯೇ ಟ್ರಕ್ ಚಲಾಯಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

      ನವೆಂಬರ್ 24ರಂದು ಆರೋಪಿಗಳು ಮಾಡಿದ್ದೇನು?

      ನವೆಂಬರ್ 24ರಂದು ಆರೋಪಿಗಳು ಮಾಡಿದ್ದೇನು?

      ನವೆಂಬರ್ 24ರಂದು ಆರೋಪಿಗಳಾದ ಅಲಿ ಹಾಗೂ ಟ್ರಕ್ ಕ್ಲೀನರ್ ಜೊಲ್ಲು ಶಿವ ಕರ್ನಾಟಕದಿಂದ ಒಂದು ಲೋಡ್ ಇಟ್ಟಿಗೆಯನ್ನು ಟ್ರಕ್‌ಗೆ ಹಾಕಿ ಹೈದರಾಬಾದ್‌ ಕಡೆಗೆ ತೆರಳುತ್ತಿದ್ದ. ಅಲಿ ತನ್ನನ್ನು ತೆಲಂಗಾಣದ ಗುಡಿಗಾಂಡ್ಲಾ ಹಳ್ಳಿಯಲ್ಲಿ ಭೇಟಿಯಾಗುವಂತೆ ಚೆನ್ನಕೇಶವ, ಜೊಲ್ಲು ನವೀನ್‌ಗೆ ತಿಳಿಸಿದ್ದ.

      ಸ್ಟೀಲ್‌ ಹೊತ್ತು ಬರುತ್ತಿದ್ದ ಟ್ರಕ್‌ನ್ನು ಪೊಲೀಸರು ಹಿಡಿದಿದ್ದರು

      ಸ್ಟೀಲ್‌ ಹೊತ್ತು ಬರುತ್ತಿದ್ದ ಟ್ರಕ್‌ನ್ನು ಪೊಲೀಸರು ಹಿಡಿದಿದ್ದರು

      ಚಿಂತಕುಂಟ ಚೆನ್ನಕೇಶವ ಹಳ್ಳಿಯಿಂದ ಸ್ಟೀಲ್‌ನ್ನು ಹೊತ್ತು ಹಿಂದಿರುಗುತ್ತಿದ್ದ. ಸ್ಟೀಲ್ ಲೋಡ್ ಮಾಡಿದ ಬಳಿಕ ಚಿಂತಕುಂಟ ಮನೆಗೆ ಹಿಂತಿರುಗಿದ್ದ. ಹೆಚ್ಚಿನ ಸ್ಟೀಲ್ ನ್ನು ಅಕ್ರಮವಾಗಿ ಸಾಗಣೆ ಮಾಡುವ ಉದ್ದೇಶವನ್ನು ಆತ ಹೊಂದಿದ್ದ. ಆದರೆ ಗುಡಗಂಡ್ಲಾದಿಂದ ಹಿಂದಿರುಗುತ್ತಿದ್ದಾಗ ಮೆಹಬೂಬ್ ನಗರದ ಸಮೀಪ ಪೊಲೀಸರು ಟ್ರಕ್‌ನ್ನು ಹಿಡಿದು ತಪಾಸಣೆ ನಡೆಸಿದ್ದರು.

      ಪೆಟ್ರೋಲ್ ಬಂಕ್ ಬಳಿ ಟ್ರಕ್ ಪಾರ್ಕ್ ನಿಲ್ಲಿಸಿದ್ದರು

      ಪೆಟ್ರೋಲ್ ಬಂಕ್ ಬಳಿ ಟ್ರಕ್ ಪಾರ್ಕ್ ನಿಲ್ಲಿಸಿದ್ದರು

      ಮೆಹಬೂಬ್‌ನಗರದ ಪೆಟ್ರೋಲ್ ಬಂಕ್ ಬಳಿ ಟ್ರಕ್ ನಿಲ್ಲಿಸಿದ್ದರು. 26ರ ರಾತ್ರಿ 9 ಗಂಟೆ ವೇಳೆಗೆ ಶಂಶಾಬಾದ್‌ನ ತೊಂಡುಪಳ್ಳಿಗೆ ತಲುಪಿದ್ದರು. ಟ್ರಕ್‌ನ್ನು ರಸ್ತೆಪಕ್ಕದಲ್ಲಿ ನಿಲ್ಲಿಸಿ ಅಲ್ಲಿಯೇ ಮಲಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+