ಹೈದರಾಬಾದ್ ಸಾಮೂಹಿಕ ಅತ್ಯಾಚಾರ: 1 ಬಂಧನ, 5 ಆರೋಪಿಗಳ ಗುರುತು ಪತ್ತೆ

ಹೈದರಾಬಾದ್

ಜೂನ್
4:
ಹೈದರಾಬಾದ್‌ನಲ್ಲಿ
ಮರ್ಸಿಡಿಸ್‌ನಲ್ಲಿ
17
ವರ್ಷದ
ಬಾಲಕಿಯ
ಮೇಲೆ
ಸಾಮೂಹಿಕ
ಅತ್ಯಾಚಾರ
ಎಸಗಿದ
(ಜೂನ್
3)
ಪ್ರಕರಣದಲ್ಲಿ
ಒಬ್ಬ
ವ್ಯಕ್ತಿಯನ್ನು
ಬಂಧಿಸಲಾಗಿದ್ದು,
ಐವರು
ಆರೋಪಿಗಳನ್ನು
ಗುರುತಿಸಲಾಗಿದೆ
ಎಂದು
ಪೊಲೀಸರು
ಮಾಹಿತಿ
ನೀಡಿದ್ದಾರೆ.
ಆರೋಪಿಗಳಲ್ಲಿ
ಮೂವರು
ಅಪ್ರಾಪ್ತರು
ಎಂದು
ಗುರುತಿಸಲಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಅತ್ಯಾಚಾರ
ಪ್ರಕರಣದಲ್ಲಿ
ಗೃಹ
ಸಚಿವರ
ಅಳಿಯ
ಶಾಮೀಲಾಗಿದ್ದಾರೆ
ಎಂಬ
ಆರೋಪ
ನಿರಾಧಾರ
ಎಂದು
ಹೈದರಾಬಾದ್
ಪಶ್ಚಿಮ
ವಲಯ
ಡಿಸಿಪಿ
ಜೋಯಲ್
ಡೇವಿಸ್
ಹೇಳಿದ್ದಾರೆ.

id='are-slot-2'
class='oiad
oi-axt
oiadv'>

ವಿಶೇಷ ತಂಡ ರಚನೆ

ವಿಶೇಷ ತಂಡ ರಚನೆ

"ವಿಕ್ಟಿಮ್ ಅಪರಾಧಿಗಳ ಬಗ್ಗೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಅತ್ಯಚಾರಕ್ಕೊಳಗಾದ ಬಾಲಕಿ ಕೇವಲ ಒಂದು ಹೆಸರನ್ನು ಬಹಿರಂಗಪಡಿಸಿದ್ದಾಳೆ. ಅವರನ್ನು ಬಂಧಿಸಲು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಲಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಮತ್ತು ಸಂತ್ರಸ್ತೆಯ ಹೇಳಿಕೆಯಂತೆ ನಾವು 5 ಆರೋಪಿಗಳನ್ನು ಗುರುತಿಸಿದ್ದೇವೆ'' ಎಂದು ಡೇವಿಸ್ ಹೇಳಿದ್ದಾರೆ.

ಪ್ರಭಾವಿ ವ್ಯಕ್ತಿಗಳ ಮಕ್ಕಳು ಭಾಗಿ

ಪ್ರಭಾವಿ ವ್ಯಕ್ತಿಗಳ ಮಕ್ಕಳು ಭಾಗಿ

ಕಳೆದ ಶನಿವಾರ ಹೈದರಾಬಾದ್‌ನ ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಐವರು ಹದಿಹರೆಯದವರು ಐಷಾರಾಮಿ ಕಾರಿನೊಳಗೆ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೂಲಗಳ ಪ್ರಕಾರ, ಪ್ರಭಾವಿ ಕುಟುಂಬಗಳ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪಾರ್ಟಿಯಲ್ಲಿ ಬಾಲಕಿ

ಪಾರ್ಟಿಯಲ್ಲಿ ಬಾಲಕಿ

ಅಪ್ರಾಪ್ತ ಬಾಲಕಿ ಸ್ನೇಹಿತನೊಂದಿಗೆ ಪಬ್‌ಗೆ ಹೋಗಿದ್ದಳು. ಅವಳ ಸ್ನೇಹಿತೆ ಬೇಗ ಹೊರಟು ಹೋಗಿದ್ದರಿಂದ, ಪಾರ್ಟಿಯ ಸಮಯದಲ್ಲಿ ಅವಳು ಹುಡುಗನೊಂದಿಗೆ ಸ್ನೇಹ ಬೆಳೆಸಿದಳು. ಅವನು ತನ್ನ ಸ್ನೇಹಿತರೊಂದಿಗೆ ಅವಳನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿದನು. ಅವರು ದಾರಿಯಲ್ಲಿ ಪೇಸ್ಟ್ರಿ ಅಂಗಡಿಯಲ್ಲಿ ನಿಲ್ಲಿಸಿದರು. ನಂತರ ಜೂಬಿಲಿ ಹಿಲ್ಸ್‌ನಲ್ಲಿ ಮರ್ಸಿಡಿಸ್ ಕಾರನ್ನು ನಿಲ್ಲಿಸಿದರು. ಅಲ್ಲಿ ಐವರು ಹುಡುಗರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ಕಾದಿದ್ದಾರೆ ಎಂದು ತಿಳಿದು ಬಂದಿದೆ.

Recommended Video

    ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ವಿರುದ್ಧ ಹೊಸ ಪ್ರತಿಭಟನೆ | OneIndia Kannada
    ತಂದೆಯಿಂದ ದೂರು

    ತಂದೆಯಿಂದ ದೂರು

    ಬಾಲಕಿಯ ಕುತ್ತಿಗೆಯಲ್ಲಿ ಗಾಯಗಳಿರುವುದನ್ನು ಗಮನಿಸಿದ ಬಾಲಕಿಯ ತಂದೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪಬ್‌ನಲ್ಲಿ ಪಾರ್ಟಿಯ ನಂತರ ಕೆಲವು ಹುಡುಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವಳು ತಂದೆಗೆ ಹೇಳಿದ್ದಾಳೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಬುಧವಾರ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+