Breaking: ಬಿಜೆಪಿ ಶಾಸಕ ರಾಜಾ ಸಿಂಗ್ 'ತಲೆ ಕಡಿಯಿರಿ' ಎಂದವನ ಬಂಧನ!

ಹೈದ್ರಾಬಾದ್, ಆಗಸ್ಟ್ 25: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಟಿ ರಾಜಾಸಿಂಗ್ ತಲೆ ಕಡಿಯಿರಿ ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಸ್ವಯಂ ಘೋಷಿತ ಸಾಮಾಜಿಕ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಸೈಯದ್ ಅಬ್ದಾಹು ಕಶಾಫ್ ಬಂಧಿತ ವ್ಯಕ್ತಿ ಆಗಿದ್ದಾನೆ. ತೆಲಂಗಾಣದಲ್ಲಿ ಅಮಾನತುಗೊಂಡ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿಕೆಗಾಗಿ 'ಸರ್ ತಾನ್ ಸೆ ಜುದಾ (ತಲೆಕಡಿಯುವಿಕೆ)' ಘೋಷಣೆಯನ್ನು ಕೂಗಿದ್ದರು ಎಂದು ಗೊತ್ತಾಗಿದೆ.

ಈ ಹಿನ್ನೆಲೆ ಕಶಾಫ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸೈಬರ್ ಕ್ರೈಂ ವಿಭಾಗದ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Hyderabad Man Syed Abdahu is arrested for beheading slogan against BJPs T Raja Singh

ಶಿರಚ್ಛೇಧನದ ವಿಡಿಯೋ ಪೋಸ್ಟ್:

ಹೈದರಾಬಾದ್‌ನ ದಕ್ಷಿಣ ವಲಯ ಡಿಸಿಪಿ ಕಚೇರಿಯ ಹೊರಗೆ ಟಿ ರಾಜಾ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವಂತೆ ಒತ್ತಾಯಿಸಿದ ಸೈಯದ್ ಅಬ್ದಾಹು ಕಶಾಫ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ರಾಜಾ ಸಿಂಗ್ 'ಸರ್ ತಾನ್ ಸೆ ಜುದಾ'(ಶಿರಚ್ಛೇಧನ)ದ ಘೋಷಣೆಗಳನ್ನು ಕೂಗಿದ್ದರು.

ಆರೋಪಿ ಕಶಾಫ್ ವಿಡಿಯೋದಲ್ಲಿ ಏನಿದೆ?:

"ಹೈದರಾಬಾದ್ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ" ಎಂದು ಸೈಯದ್ ಅಬ್ದಾಹು ಕಶಾಫ್ ತಮ್ಮ ಘೋಷಣೆ ಬಗ್ಗೆ ಹೇಳಿದ್ದರು. ರಾಜಸ್ಥಾನದ ಉದಯಪುರದಲ್ಲಿ, ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್‌ಗಾಗಿ ಟೈಲರ್‌ನ ಶಿರಚ್ಛೇದ ಮಾಡಲಾಗಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.

ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಬಂಧನ:

ನ್ಯಾಯಾಲಯದ ನಿರ್ಬಂಧದ ನಡುವೆಯೂ ಕೋಮು ವಾತಾವರಣ ಕುರಿತು ಹೊಸ ವಿಡಿಯೊವನ್ನು ಬಿಡುಗಡೆ ಮಾಡಿದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಇಂದು ಮತ್ತೆ ಬಂಧಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಮೇಲಿನ ಟೀಕೆಗಳ ಪ್ರಕರಣದಲ್ಲಿ ಮಂಗಳವಾರ ಬಂಧನಕ್ಕೊಳಗಾದ ಟಿ ರಾಜಾ ಸಿಂಗ್ ಕೆಲವೇ ಗಂಟೆಗಳ ನಂತರ ಜಾಮೀನು ಪಡೆದರು. ಅವರ ಬಿಡುಗಡೆಯಿಂದಾಗಿ ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿತ್ತು. ಪ್ರತಿಭಟನಾಕಾರರು ರಾಜಾ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ರಾಜಾ ಸಿಂಗ್ ಅನ್ನು ಗುರುವಾರ ಮತ್ತೆ ಬಂಧಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+