ಹೈದರಾಬಾದ್ ಸ್ಫೋಟ, ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ
ಹೈದರಾಬಾದ್, ಸೆಪ್ಟೆಂಬರ್ 10: ಗೋಕುಲ್ ಚಾಟ್ ಹಾಗೂ ಲುಂಬುನಿ ಪಾರ್ಕ್ ಬಳಿ 2007ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಲಯವು ಅನೀಕ್ ಸಯದ್ ಹಾಗೂ ಇಸ್ಮಾಯಿಲ್ ಚೌಧರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ತಾರೀಖ್ ಅಂಜುಮ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ನ್ಯಾಯಾಲಯವು ಘೋಷಿಸಲಾಗಿದ್ದು, ಇಬ್ಬರಿಗೆ ಖುಲಾಸೆಯಾಗಿದೆ. ಅನೀಕ್ ಶಫೀಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ ಇಬ್ಬರನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಫರೂಕ್ ಶರ್ಫುದ್ದೀನ್ ತರ್ಕಶ್ ಹಾಗೂ ಮೊಹಮ್ಮದ್ ಸಾದಿಕ್ ಇಸ್ರಾಸ್ ಅಹ್ಮದ್ ಶೈಕ್ ಅವರಿಗೆ ಖುಲಾಸೆಯಾಗಿದೆ
ಇಂಡಿಯನ್ ಮುಜಾಹೀದ್ದೀನ್ ಸ್ಥಾಪಕರಾದ ಕರ್ನಾಟಕ ಮೂಲದ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಅವರ ವಿರುದ್ಧ ಕೂಡಾ ತೆಲಂಗಾಣ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಸದ್ಯ ನಾಪತ್ತೆಯಾಗಿದ್ದಾರೆ.
2007ರಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್ ಇಲಾಖೆಯ ದಿ ಕೌಂಟರ್ ಆಫ್ ಇಂಟಲಿಜೆನ್ಸ್ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತ್ತು

ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಚಾರ್ಜ್ ಶೀಟ್
ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಮೂರು ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿತ್ತು. 2008 ಅಕ್ಟೋಬರ್ನಲ್ಲಿ ಆರೋಪಿಗಳನ್ನು ಮಹಾರಾಷ್ಟ್ರ ಎಟಿಎಸ್ ಪಡೆ ಬಂಧಿಸಿತ್ತು. ಆರೋಪಿಗಳನ್ನು ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಲ್ಲಿರಿಸಲಾಗಿದೆ. ಅನೀಕ್ ಸಯೀದ್, ಇಸ್ಮಾಯಿಲ್ ಚೌಧರಿ, ತಾರೀಕ್ ಅಂಜುಮ್, ಫರೂಕ್ ಶರ್ಫುದ್ದೀನ್, ಮೊಹಮ್ಮದ್ ಸಾದೀಕ್ ಇಸ್ರಾಸ್ ಶೇಖ್ ಅಪರಾಧಿಗಳಾಗಿದ್ದಾರೆ.

ಅವಳಿ ಸ್ಫೋಟದ ದಿನದ CCTV ದೃಶ್ಯಾವಳಿ
ಅವಳಿ ಸ್ಫೋಟದಲ್ಲಿ ಬಾಂಬ್ ಇಟ್ಟವರ ಪೈಕಿ ಒಬ್ಬ ಕರ್ನಾಟಕದ ಸಯ್ಯದ್ ಅಹಮದ್ ಝರಾರ್ ಸಿದ್ದಿಬಪ್ಪಾ ಅಲಿಯಾಸ್ ಯಾಸಿನ್ ಭಟ್ಕಳನೇ ಎಂದು CCTV ದೃಶ್ಯಾವಳಿಗಳನ್ನು ಆಧರಿಸಿ NIA ತಿಳಿಸಿತ್ತು. ವ್ಯಕ್ತಿಯೊಬ್ಬ ಬಾಂಬ್ ತುಂಬಿರುವ ಚೀಲವನ್ನು ಕೈಯಲ್ಲಿ ಹಿಡಿದುರುವುದು CCTVಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮತ್ತೊಂದು ಸ್ಫೋಟದಲ್ಲಿ ಸೈಕಲಿನಲ್ಲಿ ಬಾಂಬ್ ಸಾಗಿಸಿಟ್ಟವನು ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಎಂದೂ ಹೇಳಿದ್ದರು. ಅಸಾದುಲ್ಲಾ ಅಖ್ತರ್ ಅಜಂನಗರದ ನಿವಾಸಿ. 2008 ರಲ್ಲಿ ಇವನು ಪರಾರಿಯಾಗಿದ್ದ.

ತೆಲಂಗಾಣ ಪೊಲೀಸರು ಕೈಗೊಂಡಿದ್ದ ತನಿಖೆ
2007ರಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್ ಇಲಾಖೆಯ ದಿ ಕೌಂಟರ್ ಆಫ್ ಇಂಟಲಿಜೆನ್ಸ್ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತು.

ಬೆಂಗಳೂರು ಸ್ಫೋಟದ ರೂವಾರಿ ಮದನಿ
ಬೆಂಗಳೂರು ಮತ್ತು ಹೈದರಾಬಾದ್ ಸ್ಫೋಟದ ರೂವಾರಿಗಳು ಹತ್ತಿರದ ಸಂಬಂಧಿಗಳು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಹಾಗೂ ಹೈದರಾಬಾದ್ ಸ್ಫೋಟದ ಆರೋಪಿ ಅಬು ಉಸ್ತಾದ್ ನಡುವೆ ಸಂಪರ್ಕವಿರುವುದು ಖಾತ್ರಿಯಾಗಿತ್ತು. ಮದನಿಯಂತೆ ಉಸ್ತಾದ್ ಕೂಡಾ ಮದರಸಾಗಳಲ್ಲಿ ಉಗ್ರ ಭಾಷಣ ಮಾಡಿದ್ದು ಪತ್ತೆಯಾಗಿತ್ತು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications